

Pak Lies: ಪ್ರಸ್ತುತ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ 100 ಗಂಟೆಗಳ ಸಂಘರ್ಷಕ್ಕೆ ಬ್ರೇಕ್ ಹಾಕಲಾಗಿದೆ. ಟ್ರಂಪ್ ಜೊತೆಗಿನ ಮಾತುಕತೆಯ ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇದರ ಮಧ್ಯೆಯೂ ಪಾಕ್ ಸೇನೆ ಜಮ್ಮು-ಕಾಶ್ಮೀರ, ರಾಜಸ್ಥಾನ ಸೇರಿದಂತೆ ಕೆಲವೆಡೆ ಡ್ರೋನ್ ದಾಳಿ ನಡೆಸಿದ್ದು, ತನ್ನ ರಣಹೇಡಿತನವನ್ನು ಪ್ರದರ್ಶಿಸಿದೆ. ಇದೆಲ್ಲದರ ನಡುವೆ ಸದ್ಯ ಪಾಕ್-ಭಾರತ ಗಡಿಗಳಲ್ಲಿ ಶಾಂತಿಯ ವಾತಾವರಣ ಮರಳುತ್ತಿದೆ.
ಕದನ ವಿರಾಮಕ್ಕೂ ಮುನ್ನ 100 ಗಂಟೆಗಳ ತೀವ್ರ ಸಂಘರ್ಷದ ಸಮಯದಲ್ಲಿ ತನ್ನ ದೇಶದ ಜನತೆ ಮತ್ತು ಇತರೆ ದೇಶಗಳ ದಿಕ್ಕನ್ನು ಸುಳ್ಳು ಸುದ್ದಿಗಳ ಮೂಲಕ ಬದಲಿಸಲು ಕುತಂತ್ರ ರೂಪಿಸಿದ ಪಾಕ್, ಮಾಹಿತಿ ಜಾಗವನ್ನು ಕೇವಲ ಸುಳ್ಳುಗಳ ಸುರಿಮಳೆಯಿಂದಲೇ ತುಂಬಿಸಿದ್ದು ವ್ಯಾಪಕ ಛೀಮಾರಿಗೆ ಕಾರಣವಾಯಿತು. ಭಾರತೀಯ ನಗರಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿಗಳನ್ನು ರೂಪಿಸಿದ ಪಾಕಿಸ್ತಾನ, ಭಾರತೀಯ ವಿಮಾನ, ವಾಯುನೆಲೆಯನ್ನು ಹೊಡೆದುರುಳಿಸಿದ್ದೇವೆ ಎಂಬ ಕಟ್ಟು ಕಥೆಗಳನ್ನು ಹಬ್ಬಿಸಿತ್ತು. ಅಂತಿಮವಾಗಿ ಈ ಸುಳ್ಳುಗಳನ್ನು ಬೇರು ಸಮೇತ ಕಿತ್ತು ಬಿಸಾಡಿದ ಭಾರತೀಯ ಸೇನೆ, ಇದಕ್ಕೆಲ್ಲ ತಕ್ಕ ಉತ್ತರ ಕೊಟ್ಟಿದೆ.
ಇದನ್ನೂ ಓದಿ: ಟಾಮ್ ಕರನ್ ಕಣ್ಣೀರಿಟ್ಟರು! ಡ್ಯಾರಿ ಮಿಚೆಲ್ ಇನ್ಯಾವತ್ತೂ ಪಾಕ್ಗೆ ಹೋಗಲ್ಲ ಅಂದ್ರು… ಕಹಿ ಅನುಭವ ಬಿಚ್ಚಿಟ್ಟ PSL ಆಟಗಾರ | Rishad Hossainಸುಳ್ಳು ಹೇಳಿಕೆ 1: ಭಾರತದಲ್ಲಿ ಬ್ರಹ್ಮೋಸ್ ಸಂಗ್ರಹಣಾ ನೆಲೆ ನಾಶ
ಸುಳ್ಳು ಹೇಳಿಕೆ 2: ಭಾರತದ S-400 ವ್ಯವಸ್ಥೆಗಳ ನಾಶ
ಸುಳ್ಳು ಹೇಳಿಕೆ 3: ಭಾರತ ತನ್ನದೇ ನಗರಗಳ ಮೇಲೆ ಕ್ಷಿಪಣಿ ಹಾರಿಸಿದೆ.
ಸುಳ್ಳು ಹೇಳಿಕೆ 4: ಭಾರತ ಪಾಕಿಸ್ತಾನದ ಮಸೀದಿಗಳನ್ನು ಟಾರ್ಗೆಟ್ ಮಾಡಿದೆ.
ಸುಳ್ಳು ಹೇಳಿಕೆ 5: ಮೇ 7, 8 ಮತ್ತು 9ರಂದು ನಮ್ಮಿಂದ ಡ್ರೋನ್ ದಾಳಿ ನಡೆದಿಲ್ಲ
ಸುಳ್ಳು ಹೇಳಿಕೆ 6: ಭಾರತೀಯ ವಾಯುನೆಲೆಗಳ ಧ್ವಂಸ
ಸುಳ್ಳು ಹೇಳಿಕೆ 7: ಅಫ್ಘಾನಿಸ್ತಾನ ಟಾರ್ಗೆಟ್ ಮಾಡಿವೆ ಭಾರತೀಯ ಕ್ಷಿಪಣಿಗಳು,(ಏಜೆನ್ಸೀಸ್).