ಮೃನಾಲ್​ ಠಾಕೂರ್​ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಸಿನಿ ಇಂಡಸ್ಟ್ರಿ ಶೇಕಿಂಗ್​! ಫ್ಯಾನ್ಸ್​ಗೂ ಬೇಸರ

2 Min Read
Mrunal Thakur

ಹೈದರಾಬಾದ್​: ಯಾವುದೇ ನಿರ್ಧಾರವು ಎಂದಿಗೂ ಒಂದೇ ಆಗಿರುವುದಿಲ್ಲ. ಅದು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಅದರಲ್ಲೂ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿನ ಜನ ತೆಗೆದುಕೊಳ್ಳುವ ನಿರ್ಧಾರಗಳು ಮಾತ್ರ ಹೆಚ್ಚಾಗಿ ಸುದ್ದಿಯಲ್ಲಿ ಇರುತ್ತವೆ. ಯಾಕೆಂದರೆ, ಈ ಮಂದಿಯ ನಿರ್ಧಾರಗಳು ಕ್ಷಣಕ್ಕೊಮ್ಮೆ ಬದಲಾಗುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಹೀರೋಯಿನ್​ಗಳು ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲರಲ್ಲೂ ಅಚ್ಚರಿ ದೂಡುತ್ತವೆ. ನಟಿ ತಮನ್ನಾ ಲಿಪ್​ಲಾಕ್​​ ಸೀನ್​ಗಳಲ್ಲಿ ನಟಿಸುವುದಿಲ್ಲ ಎಂದಿದ್ದರು. ಆದರೆ, ವೆಬ್​ಸೀರಿಸ್​ನಲ್ಲಿ ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಅದೇ ರೀತಿ ಇದೀಗ ಮತ್ತೊಬ್ಬ ನಟಿ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ.

ಮೃನಾಲ್​ ಠಾಕೂರ್​ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಸೂಪರ್​ ಹಿಟ್​ ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್​ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಾಲಿವುಡ್​ಗಿಂತ ಬೇರೆ ಭಾಷೆಗಳಲ್ಲೇ ಭಾರಿ ಆಫರ್​ಗಳು ಬರುತ್ತಿವೆ. ಸದ್ಯ ಮೃನಾಲ್​ ಸ್ಟಾರ್​ ನಟಿಯರ ಸಾಲಿಗೆ ಸೇರಿದ್ದಾರೆ.

ತಾಜಾ ಸಂಗತಿ ಏನೆಂದರೆ, ಮೃನಾಲ್​ ಠಾಕೂರ್​, ಇತ್ತೀಚೆಗಷ್ಟೇ ಸಂಚಲನ ಮೂಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರ ಈಗ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಮೃನಾಲ್​ ಅವರ ನಿರ್ಧಾರ ಇತರ ನಾಯಕಿಯರ ಬೆವರಿಳಿಸಿದೆ. ಈ ಹಿಂದೆ ತಂದೆಗೆ ಕೊಟ್ಟ ಮಾತಿನಂತೆ ಬೋಲ್ಡ್ ಪಾತ್ರಗಳಲ್ಲಿ ನಟಿಸದಿರಲು ನಿರ್ಧರಿಸಿದ್ದರು. ಇದರಿಂದ ಆಕೆಗೆ ಹೆಚ್ಚು ಅವಕಾಶಗಳು ಬರಲಿಲ್ಲ. ಆದರೆ, ಇದೀಗ ತಮ್ಮ ನಿರ್ಧಾರ ಬದಲಿಸಿರುವ ಮೃನಾಲ್​, ತುಂಬಾ ಬೋಲ್ಡ್ ಪಾತ್ರದಲ್ಲಿಯೂ ನಟಿಸಲು ಓಕೆ ಎಂದಿದ್ದಾರಂತೆ.

ಈ ರೀತಿಯ ನಿರ್ಧಾರವನ್ನು ಮೃನಾಲ್​ ಏಕೆ ತೆಗೆದುಕೊಂಡರು ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಮೃನಾಲ್​ ಅವರ ಎತ್ತರ, ಸೌಂದರ್ಯ ಮತ್ತು ನಟನೆಯು ದೊಡ್ಡ ಸ್ಟಾರ್ ಹೀರೋಗಳಿಗೆ ಹೋಲುತ್ತದೆ. ಆದರೆ ಆಕೆ ಹಾಕಿಕೊಂಡ ಕೆಲವು ಬೌಂಡರಿಗಳಿಂದಾಗಿ ಅವಕಾಶಗಳು ಸಿಗುತ್ತಿರಲಿಲ್ಲ ಎನ್ನಲಾಗುತ್ತಿದೆ. ಈಗ ಆ ಷರತ್ತುಗಳನ್ನೂ ಮುರಿಯಲು ಮೃನಾಲ್​ ಠಾಕೂರ್ ರೆಡಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಫ್ಯಾಮಿಲಿ ಸ್ಟಾರ್ ಸಿನಿಮಾದಲ್ಲೂ ನಟಿಸಿದ್ದರು. ಈ ಚಿತ್ರ ಮಿಶ್ರ ಟಾಕ್ ಪಡೆದರೂ ಮೃನಾಲ್​ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದವು. (ಏಜೆನ್ಸೀಸ್​)

ಹೌದು ನಾನು ರಿಲೇಶನ್​ಶಿಪ್​ನಲ್ಲಿದ್ದೇನೆ! ಹುಡುಗ ಯಾರೆಂದು ಕೇಳಿದ್ದಕ್ಕೆ ಕೃತಿ ಶೆಟ್ಟಿ ಕೊಟ್ರು ಶಾಕಿಂಗ್​ ಉತ್ತರ

ಬಿಸಿಲಿನಿಂದ ತತ್ತರಿಸಿದ ಎಮ್ಮೆಗಳಿಗೆ ಎಸಿ ಕೊಟ್ಟಿಗೆ: ಮೂಕಪ್ರಾಣಿಗಳ ಮೇಲೆ ರೈತನ ಕಾಳಜಿಗೆ ಬಹುಪರಾಕ್​

See also  ಆ್ಯಕ್ಷನ್ ​ಭರಿತ ಜವಾನ್​ ಚಿತ್ರದ ಪ್ರಿವ್ಯೂ ಬಿಡುಗಡೆ: ವಿಭಿನ್ನ ಲುಕ್​ಗಳಲ್ಲಿ ಮಿಂಚಿದ ಬಾಲಿವುಡ್​ ನಟ ಶಾರುಖ್​ ಖಾನ್​
Share This Article