More

    ‘Mr ನಟ್ವರ್ ಲಾಲ್’ನಲ್ಲಿ ಬನಾರಸ್​ ಬೆಡಗಿ ಸೋನಾಲ್ ಮಾಂಟೆರೊ ಮಿಂಚು; ಶೀಘ್ರವೇ ಸಿನಿಮಾ ತೆರೆಗೆ

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ಬೆಳಕಿನ ಕವಿತೆ’ ಹಾಡಿನ ಮೂಲಕ ಹೆಚ್ಚು ಸಿನಿಪ್ರೇಕ್ಷಕರ ಮನಗೆದ್ದ ನಟಿ ಸೋನಾಲ್​ ಮಾಂಟೆರೋ ಇದೀಗ ತಮ್ಮ ಮುಂದಿನ ಚಿತ್ರ ‘Mr ನಟ್ವರ್ ಲಾಲ್’ನಲ್ಲಿ ಅಭಿನಯಿಸಿದ್ದು, ಈ ಚಿತ್ರ ಶೀಘ್ರವೇ ತೆರೆ ಮೇಲೆ ಬರಲು ಸಜ್ಜಾಗಿದೆ. ಸಿನಿಮಾದ ಸಂಪೂರ್ಣ ವಿವರ ಹೀಗಿದೆ.

    ಇದನ್ನೂ ಓದಿ: ಸ್ವಂತ ಖರ್ಚಿನಲ್ಲಿ ಪರಿವರ್ತಕ, ವಿದ್ಯುತ್ ಸಂಪರ್ಕಕ್ಕೆ ಆದೇಶ: ಬಿಜೆಪಿ ವಿರೋಧ, 10ಕ್ಕೆ ಪ್ರತಿಭಟನೆ

    ಇತ್ತೀಚೆಗಷ್ಟೇ ಚಿತ್ರದ ಹಾಡು, ಟೀಸರ್​ ಬಿಡುಗಡೆಗೊಂಡಿದ್ದು, ನಾಯಕ ತನುಷ್ ಶಿವಣ್ಣ ಮತ್ತು ನಾಯಕಿ ಸೋನಾಲ್ ಮಾಂಟೆರೊ ಪರದೆಯ ಮೇಲೆ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ. Mr ನಟ್ವರ್ ಲಾಲ್ ಚಿತ್ರವನ್ನು ತನುಷ್ ಸಿನಿಮಾಸ್ ಲಾಂಛನದಲ್ಲಿ ತನುಷ್ ಶಿವಣ್ಣ ನಿರ್ಮಿಸಿ, ನಾಯಕನಾಗಿ ನಟಿಸಿದ್ದು, ವಿ.ಲವ ನಿರ್ದೇಶನ ಮಾಡಿದ್ದಾರೆ.

    ಈ ಚಿತ್ರಕ್ಕಾಗಿ ಬಹದ್ದೂರ್ ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ‘ಅಚ್ಚಚ್ಚಚ್ಚು ಅಚ್ಚುಮೆಚ್ಚು’ ಎಂಬ ಪ್ರೇಮಗೀತೆ ಯೂಟ್ಯೂಬ್​ನಲ್ಲಿ ಬಿಡುಗಡೆಗೊಂಡಿದೆ. ಧರ್ಮವಿಶ್ ಸಂಗೀತ ಸಂಯೋಜಿಸಿರುವ ಈ ಯುಗಳಗೀತೆ ಹಾಡನ್ನು ಸಾಯಿವಿಘ್ನೇಶ್ ಹಾಡಿದ್ದಾರೆ.

    ಇದನ್ನೂ ಓದಿ: ಬಿಹಾರದಲ್ಲಿ ಶೇ.75 ಮೀಸಲು?: ನಿತೀಶ್ ಸರ್ಕಾರ ಪ್ರಸ್ತಾವ; ವಿಧಾನಸಭೆಯಲ್ಲಿ ಜಾತಿ ಗಣತಿ ಮಂಡನೆ

    ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿ.ಲವ ನಿರ್ದೇಶಿಸಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ. ಪುಷ್ಪರಾಜು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸಿನಿಮಾದಲ್ಲಿ ತನುಷ್ ಶಿವಣ್ಣ, ಸೋನಾಲ್ ಮೊಂಟೊರೊ, ನಾಗಭೂಷಣ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ ಮುಂತಾದವರ ತಾರಾಗಣವಿದೆ.

    ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಗಮನಸೆಳೆದಿರುವ “Mr ನಟ್ವರ್ ಲಾಲ್” ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

    ದೀಪಾವಳಿ ಹಬ್ಬ: ‘ಸ್ವರ್ಣಾ ಮುದ್ರಾ’ ಸ್ವೀಟ್​ ಬೆಲೆ ಕೇಳಿ ಸಿಹಿಪ್ರಿಯರು ಶಾಕ್!

    ರಾಜ್ಯೋತ್ಸವ ರಸಪ್ರಶ್ನೆ - 28

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts