ತನ್ನಿಬ್ಬರು ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ವಿಷವುಣಿಸಿ ಪ್ರಿಯಕರನೊಂದಿಗೆ ಮಹಿಳೆ ಪರಾರಿ

Woman Elope
Published on

ಭೋಪಾಲ್​: ತನ್ನಿಬ್ಬರು ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ವಿಷವುಣಿಸಿದ ಮಹಿಳೆ, ಪ್ರಿಯಕರನೊಂದಿಗೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಭಿಂದ್​ ಜಿಲ್ಲೆಯಲ್ಲಿ ನಡೆದಿದೆ.

ಭಾನುವಾರ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಬಾರಾಸನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಒಂದೇ ಕುಟುಂಬದ 12ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಪತಿ, ಮೈದುನ ಮತ್ತು ತನ್ನಿಬ್ಬರು ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ಮಹಿಳೆ ವಿಷವಿಕ್ಕಿದ್ದಾಳೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಗ್ವಾಲಿಯರ್​ನ ಜಯ ಆರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯ ಪತಿ ಮೃತಪಟ್ಟಾಗ ಪತಿ ಕಿರಿಯ ಸಹೋದರ ಛೋಟು ಖಾನ್​ನನ್ನು ಮಹಿಳೆಗೆ ಮರು ಮದುವೆ ಆಗಿದ್ದಳು. ಆದರೆ, ಮಹಿಳೆ ಛೋಟು ಖಾನ್ ಸೋದರ ಮಾವ ಲೋಖನ್​ ಖಾನ್​ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ.

ಈ ವಿಚಾರ ತಿಳಿದು ಕುಟುಂಬದಲ್ಲಿ ಗಲಾಟೆಯು ನಡೆದಿತ್ತು. ಹೀಗಿರುವಾಗ ಶನಿವಾರ ಮಹಿಳೆ ಲೋಖನ್​ ಖಾನ್​ ಜತೆ ಓಡಿ ಹೋಗಿದ್ದಾಳೆ. ಅದಕ್ಕೂ ಮುನ್ನ ಆಹಾರದಲ್ಲಿ ವಿಷ ಬೆರೆಸಿಟ್ಟು ಪರಾರಿಯಾಗಿದ್ದಾಳೆ. ​

36 ವರ್ಷದ ಆರೋಪಿ ಮಹಿಳೆಗೆ ಇಬ್ಬರು ಮಕ್ಕಳಿದ್ದರು. ಪತಿ, ಅತ್ತೆ-ಮಾವ, ಮೈದುನ, ಅತ್ತಿಗೆ ಸೇರಿದಂತೆ ಇಡೀ ಕುಟುಂಬ ವಿಷಾಹಾರ ಸೇವಿ ಆಸ್ಪತ್ರೆ ಪಾಲಾಗಿದ್ದಾರೆ. ಇತ್ತ ಮಹಿಳೆಯ ಮೇಲೆ ಎಫ್​ಐಆರ್​ ದಾಖಲಾಗಿದ್ದು ಆಕೆಯ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net