ಸಿಕ್ಸರ್​ ವೀರ ಕ್ರಿಕೆಟರ್​ ರಿಂಕು ಸಿಂಗ್​ಗೆ ಸಂಸದೆ ಪ್ರಿಯಾ ಸರೋಜ್​ ಬೌಲ್ಡ್​! ನಿಶ್ಚಿತಾರ್ಥದ ಸುದ್ದಿ ವೈರಲ್​...

web rinku
Published on

ಲಖನೌ: ಟೀಮ್​ ಇಂಡಿಯಾ ಮತ್ತು ಕೆಕೆಆರ್​ ತಂಡದ ಸ್ಟಾರ್​ ಎಡಗೈ ಬ್ಯಾಟರ್​ ರಿಂಕು ಸಿಂಗ್​, ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್​ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದರೂ, ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

26 ವರ್ಷದ ಪ್ರಿಯಾ ಸರೋಜ್​ ದೇಶದ ಹಾಲಿ 2ನೇ ಅತಿ ಕಿರಿಯ ಸಂಸದೆ ಎನಿಸಿದ್ದಾರೆ. 3 ಬಾರಿಯ ಸಂಸದ ಹಾಗೂ ಉತ್ತರ ಪ್ರದೇಶದ ಹಾಲಿ ಶಾಸಕ ತುಾನಿ ಸರೋಜ್​ ಪುತ್ರಿಯಾಗಿರುವ ಪ್ರಿಯಾ, 2024ರ ಲೋಕಸಭಾ ಚುನಾವಣೆಯಲ್ಲಿ ಮಚ್ಲಿಶಹರ್​ ಕ್ಷೇತ್ರದಿಂದ ಚುನಾಯಿತರಾಗಿದ್ದರು. ವಾರಣಸಿಯಲ್ಲಿ ಜನಿಸಿರುವ ಪ್ರಿಯಾ, ವೃತ್ತಿಯಲ್ಲಿ ವಕೀಲೆ ಆಗಿದ್ದಾರೆ.

27 ವರ್ಷದ ರಿಂಕು ಸಿಂಗ್​, 2023ರ ಐಪಿಎಲ್​ನಲ್ಲಿ ಸತತ 5 ಸಿಕ್ಸರ್​ ಸಿಡಿಸಿ ಕೆಕೆಆರ್​ ತಂಡವನ್ನು ಗೆಲ್ಲಿಸುವ ಮೂಲಕ ಜನಪ್ರಿಯತೆ ಪಡೆದಿದ್ದರು. ಅವರು ಇದುವರೆಗೆ ಭಾರತ ಪರ 2 ಏಕದಿನ ಮತ್ತು 20 ಟಿ20 ಪಂದ್ಯಗಳನ್ನು ಆಡಿದ್ದಾರೆ. ಬಡ ಕುಟುಂಬದಿಂದ ಬಂದ ರಿಂಕು ಸಿಂಗ್​ ಅವರ ತಂದೆ ಎಲ್​ಪಿಜಿ ವಿತರಣೆ ಕೆಲಸ ನಿರ್ವಹಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net