More

    ಸಿನಿಮಾಗೆ ಆಯ್ಕೆಯಾದ ಭರತನಾಟ್ಯ ಪ್ರವೀಣೆ ಜಾಹ್ನವಿ

    ಕಂಪ್ಲಿ: ಪಟ್ಟಣದ ಶ್ರೀ ನಾಟ್ಯ ಲಕ್ಷ್ಮೀ ಕಲಾ ಟ್ರಸ್ಟ್‌ನ ಭರತನಾಟ್ಯ ಬಾಲ ಕಲಾವಿದೆ ಆರ್.ಜಾಹ್ನವಿ ‘ಸರ್ಕಾರಿ ಶಾಲೆ ಎಚ್8’ ಕನ್ನಡ ಸಿನಿಮಾಕ್ಕೆ ಬಾಲ ನಟಿಯಾಗಿ ಆಯ್ಕೆಯಾಗಿದ್ದಾಳೆ.

    ಇದನ್ನೂ ಓದಿ: ಭರತನಾಟ್ಯ ರಂಗಪ್ರವೇಶಕ್ಕೆ ಬಾಲೆ ಅಣಿ!

    ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರ ರಾಮಣ್ಣ ಮತ್ತು ಲತಾರಾಣಿ ಅವರ ಏಕೈಕ ಪುತ್ರಿಯಾದ ಜಾಹ್ನವಿ, ನಾಲ್ಕು ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದಾಳೆ. ಚೇತನ ವಿದ್ಯಾನಿಕೇತನ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಾಳೆ.

    ಸಿನಿಮಾಗೆ ಆಯ್ಕೆಯಾದ ಭರತನಾಟ್ಯ ಪ್ರವೀಣೆ ಜಾಹ್ನವಿ

    ಚಿಕ್ಕಂದಿನಿಂದಲೇ ಟಿಕ್‌ಟಾಕ್, ಇನ್ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ನೃತ್ಯ, ಹಾಸ್ಯ, ಸಿನಿಮಾ ಡೈಲಾಗ್ ಮೊದಲಾದ ಕಲಾಚಟುವಟಿಕೆಗಳನ್ನು ಹಂಚಿಕೊಳ್ಳುವ ಮೂಲಕ ಚಿರಪರಿಚಿತಳಾಗಿದ್ದಾಳೆ.

    ಇದನ್ನು ಗಮನಿಸಿದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹರಿಯಬ್ಬೆಯ ಚಲನಚಿತ್ರ ನಿರ್ದೇಶಕ ಗುಣ್ಣಯ್ಯ, ಗಿರಿಚಂದ್ರ ಪ್ರೊಡಕ್ಷನ್‌ನಲ್ಲಿ ತಮ್ಮದೆ ನಿರ್ದೇಶನದ ‘ಸರ್ಕಾರಿ ಶಾಲೆ ಎಚ್8’ ಸಿನಿಮಾಕ್ಕೆ ಜಾಹ್ನವಿ ಆಯ್ಕೆ ಮಾಡಿದ್ದಾರೆ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳನ್ನು ಜಾಹ್ನವಿ ಅರಿತಿದ್ದು,

    ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತಿದ್ದಾಳೆ. ಈಕೆ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ, ಹಂಪಿ, ಕಂಪ್ಲಿ ಉತ್ಸವ ಸೇರಿ ರಾಜ್ಯ, ಹೊರ ರಾಜ್ಯಗಳಲ್ಲಿ ಸಾಮೂಹಿಕ ಭರತನಾಟ್ಯ ಪ್ರದರ್ಶನ ನೀಡಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts