

ಮುಂಬೈ: ನಟಿ ಮೌನಿ ರಾಯ್ ತಮ್ಮ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಅವರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಆಕೆ ಕುಣಿದು ಕುಪ್ಪಳಿಸುತ್ತಿರುವುದನ್ನು ಕಾಣಬಹುದು.
ಬ್ಲಾಕ್ ಡ್ರೆಸ್‌ನಲ್ಲಿ ಬೋಲ್ಡ್ ಮೂವ್ಸ್ ಮೌನಿ ರಾಯ್ ಬೋಲ್ಡ್ ಲುಕ್‌ನ ಫೋಟೋಗಳು ಮತ್ತು ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿಯೂ ಅವರು ಅಂತಹದ್ದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಮೌನಿ ಕಪ್ಪು ಬಣ್ಣದ ಮಿನುಗುವ ಉಡುಗೆಯನ್ನು ಧರಿಸಿ, ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಡೀಪ್ ನೆಕ್ ಡ್ರೆಸ್‌ನಲ್ಲಿ ಮೌನಿಯ ಕಿಲ್ಲರ್ ಲುಕ್ ಅನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಈ ವಿಡಿಯೋದಲ್ಲಿ ಮೌನಿ 'ದಿಲ್ ಕೋ ಹಜಾರ್ ಬಾರ್' ಹಾಡಿಗೆ ನೃತ್ಯ ಮಾಡಿದ್ದು, ವಿಡಿಯೋಗೆ tunes ಎಂದು ಶೀರ್ಷಿಕೆ ಕೊಡಲಾಗಿದೆ.
ಮೌನಿ ರಾಯ್ ಅವರ ಈ ಹಾಟ್ ಲುಕ್ ಅನ್ನು ಅವರ ಅಭಿಮಾನಿಗಳು ಮತ್ತು ಸ್ನೇಹಿತರು ತುಂಬಾ ಇಷ್ಟಪಟ್ಟಿದ್ದಾರೆ. ಅವರ ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿರುವ ದಿಶಾ ಪಟಾನಿ 'ಸೋ ಹಾಟ್' ಎಂದು ಕರೆದಿದ್ದಾರೆ. ಮೌನಿ ಅವರ ಈ ವಿಡಿಯೋಗೆ ಕೆಲವು ಅಭಿಮಾನಿಗಳು 'ಮೌನಿ ಉದ್ಯಮದಲ್ಲಿ ಅತ್ಯಂತ ಪ್ರತಿಭಾವಂತ ನೃತ್ಯಗಾರ್ತಿ ಮತ್ತು ನಟಿ', ‘ಸೋ ಬ್ಯೂಟಿಫುಲ್ ಅಂಡ್ ಹಾಟ್’ ಎಂದು ಬರೆದಿದ್ದಾರೆ. ಮೌನಿ ಇಂಟರ್ನೆಟ್‌ನ ತಾಪಮಾನವನ್ನು ಹೆಚ್ಚಿಸಿದ್ದು, ಇದೇ ಮೊದಲಲ್ಲ. ಇದಕ್ಕೂ ಮೊದಲು, ತನ್ನ ಕಿಲ್ಲರ್ ಲುಕ್ ಮತ್ತು ಹಾಟ್ ಸ್ಟೈಲ್‌ನಿಂದ ಸಂಚಲನ ಮೂಡಿಸುತ್ತಲೇ ಇದ್ದಾರೆ. ಮೌನಿ ರಾಯ್ ತಮ್ಮ ಬೋಲ್ಡ್ ಲುಕ್ ಮತ್ತು ಕಿಲ್ಲರ್ ಸ್ಟೈಲ್‌ನಿಂದ ಅನೇಕ ಬಾಲಿವುಡ್ ನಟಿಯರಿಗೆ ಸ್ಪರ್ಧೆ ಕೊಡುತ್ತಾ ಬಂದಿದ್ದಾರೆ.
ಮೌನಿ ರಾಯ್ ಏಕ್ತಾ ಕಪೂರ್ ಅವರ 'ಕ್ಯುಂಕಿ ಸಾಸ್ ಭಿ ಕಭಿ ಬಹೂ ಥಿ' ಧಾರಾವಾಹಿಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು . ಮೌನಿ ದೂರದರ್ಶನದಿಂದ ಬಾಲಿವುಡ್ ತನಕ ಬಂದಿದ್ದಾರೆ. 'ನಾಗಿನ್' ಧಾರಾವಾಹಿಯ ಮೂಲಕ ಈ ನಟಿ ಪ್ರತಿ ಮನೆಯಲ್ಲೂ ಹೆಸರು ಮಾಡಿದರು. ಇದರ ನಂತರ ಅವರು ಅಕ್ಷಯ್ ಕುಮಾರ್ ಜೊತೆ 'ಗೋಲ್ಡ್' ಮತ್ತು ಅಯನ್ ಮುಖರ್ಜಿಯವರ ' ಬ್ರಹ್ಮಾಸ್ತ್ರ ' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.