More

    ಬಿಡುಗಡೆಗೆ ಮುನ್ನವೇ ಈ ಸ್ಮಾರ್ಟ್​ಫೋನ್​​ನ ಫೀಚರ್ಸ್​ ಆನ್​ಲೈನ್​ನಲ್ಲಿ ಸೋರಿಕೆ..

    ದೆಹಲಿ: ಒಂದು ಕಾಲದಲ್ಲಿ ಜಗತ್ತಿನ ಮೊಬೈಲ್​ ಮಾರುಕಟ್ಟೆಯನ್ನು ಆಳುತ್ತಿದ್ದ ಮೊಟೊರೊಲಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ತನ್ನ ನೆಲೆಯನ್ನು ಮತ್ತೆ ಕಂಡುಕೊಳ್ಳಲು ಯತ್ನಿಸುತ್ತಿದೆ. ಮೊಟೊರೊಲಾವು ನಾಳೆ ತನ್ನ ಹೊಸ ಮೊಟೊರೊಲಾ ರೇಜರ್​-40 ಅಲ್ಟ್ರಾವನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಅದಕ್ಕೂ ಮುನ್ನವೇ ಈ ಸ್ಮಾರ್ಟ್​ಫೋನ್​ನ ಫೀಚರ್ಸ್​ಗಳು ಆನ್​ಲೈನ್​ನಲ್ಲಿ ಸೋರಿಕೆಯಾಗಿವೆ.

    ಸೋರಿಕೆಯಾದ ಮಾಹಿತಿ ಪ್ರಕಾರ, ಮೊಟೊರೊಲಾ ರೇಜರ್​-40 ಅಲ್ಟ್ರಾ ಮಡಚಬಹುದಾದ​ ಸ್ಮಾರ್ಟ್​ಫೋನ್​ ಆಗಿದ್ದು, ಇದು 3.6 ಹೊರಗಿನ ಡಿಸ್​ಪ್ಲೇ ಹಾಗೂ 6.9 ಇಂಚಿನ ಎಚ್​ಡಿ ಪ್ಲಸ್​ ಒಳಗಿನ ಡಿಸ್​ಪ್ಲೇ ಹೊಂದಿದೆ. ಜತೆಗೆ ಆ್ಯಂಡ್ರಾಯ್ಡ್ 13ನ್ನು ಇದು ಬೆಂಬಲಿಸುತ್ತದೆ.

    ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಮಳೆ ಮುನ್ಸೂಚನೆ; ಬೆಂಗಳೂರಿನಲ್ಲಿ ಇಂದು, ನಾಳೆ ಗುಡುಗು ಸಹಿತ ಮಳೆ ಸಾಧ್ಯತೆ

    ಈ ಸ್ಮಾರ್ಟ್​ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 5G SoC ಪ್ರೊಸೆಸರ್ ಚಿಪ್​​ನ್ನು ಒಳಗೊಂಡಿದ್ದು, ಫೋನ್ ಕಪ್ಪು, ಗ್ಲೇಸಿಯರ್ ಬ್ಲೂ ಮತ್ತು ವಿವಾ ಮೆಜೆಂಟಾ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಅಲ್ಲದೇ, 12MP+13MP ಎಲ್ಇಡಿ ಫ್ಲ್ಯಾಷ್​ನೊಂದಿಗೆ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, ಸೆಲ್ಫಿಗಾಗಿ 32MP ಕ್ಯಾಮರಾವನ್ನು ಒಳಗೊಂಡಿದೆ.

    ಈ ಫೋನ್​ 8GB + 256GB/128GB/526GB ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದ್ದು, ಕೇವಲ ಒಂದೇ ಆವೃತ್ತಿಯಲ್ಲಿ ಮಾತ್ರ ದೊರೆಯಲಿದೆ. ಇದರ ಬೆಲೆ ಸುಮಾರು ರೂ. 88,400 ರಿಂದ 1 ಲಕ್ಷದವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.

    ಈ ಮೊಬೈಲ್​ 33W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 5W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದ್ದು, 3,800mAh ಬ್ಯಾಟರಿಯನ್ನು ಹೊಂದಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್​ ಹೊಂದಿರುವ ಈ ಫೋನ್​ ಟೈಪ್-ಸಿ ಪೋರ್ಟ್​ನ್ನು ಒಳಗೊಂಡಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts