More

    ನಿರ್ಮಿತಿ ಕೇಂದ್ರದ ಇಂಜಿನಿಯರ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದಾಗ ಸಿಕ್ತು ಜಿಂಕೆ ಕೊಂಬು ಸೇರಿ 4.75 ಕೋಟಿ ರೂ. ಮೌಲ್ಯದ ಆಸ್ತಿ!

    ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರು: ಹಾವೇರಿ ನಿರ್ಮಿತಿ ಕೇಂದ್ರದ ಯೋಜನಾ ಇಂಜಿನಿಯರ್ ಹಾಗೂ ನಗರದ ನಿವಾಸಿ ವಾಗೀಶ ಶೆಟ್ಟರ್ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ 10 ಇಂಚಿನ ಜಿಂಕೆ ಕೊಂಬು ಸೇರಿ 4.75 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಮನೆ, ಸೈಟು ಸೇರಿ ಇತರ ಆಸ್ತಿಯ ದಾಖಲೆಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.

    ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ ಅವರ ನೇತೃತ್ವದಲ್ಲಿ ಒಂದೇ ಬಾರಿಗೆ ವಾಗೀಶ ಶೆಟ್ಟರ್ ವಾಸವಾಗಿದ್ದ ರಾಣೆಬೆನ್ನೂರಿನ ಬನಶಂಕರಿ ನಗರದಲ್ಲಿರುವ ಮನೆ, ಕಚೇರಿ ಹಾಗೂ ಹಾವೇರಿಯ ಜಿಲ್ಲಾಡಳಿತ ಭವನ ನಿರ್ಮಿತಿ ಕೇಂದ್ರದ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

    ಇದನ್ನೂ ಓದಿ: ಕೋವಿಡ್ ಬಳಿಕ ಮಾನಸಿಕ ಖಿನ್ನತೆ ಹೆಚ್ಚು: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅಭಿಮತ

    ದಾಳಿ ವೇಳೆ 10 ಇಂಚಿನ ಜಿಂಕೆ ಕೊಂಬು, ಅರ್ಧ ಕೆ.ಜಿ. ಚಿನ್ನಾಭರಣ, 2 ಕೆ.ಜಿ. ಬೆಳ್ಳಿ ಆಭರಣ, 18.30 ಲಕ್ಷ ರೂ. ನಗದು, ರಾಜ್ಯದ ವಿವಿಧೆಡೆ ಇರುವ 8 ಮನೆ, 16 ಸೈಟು, 65 ಎಕರೆ ಜಮೀನು ಹೊಂದಿರುವ ದಾಖಲೆಗಳು ಸೇರಿ ಅಂದಾಜು 4.75 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಜತೆಗೆ ಹಣ ಏಣಿಕೆ ಮಾಡುವ ಯಂತ್ರ ಕೂಡ ವಶಪಡಿಸಿಕೊಳ್ಳಲಾಗಿದೆ.

    ವಾಗೀಶ ಶೆಟ್ಟರ್ ಹಾವೇರಿ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ, ರಾಣೆಬೆನ್ನೂರ ತಾಲೂಕಿನಲ್ಲಿಯೆ ಅತಿ ಹೆಚ್ಚು ಸರ್ಕಾರಿ ಶಾಲಾ ಕಟ್ಟಡ, ಹಾಸ್ಟೆಲ್ ಸೇರಿ ಇತರ ಕಾಮಗಾರಿಗಳನ್ನು ಮಾಡುತ್ತಿದ್ದರು. ವಾಗೀಶ ಜತೆ ಆತನ ಸಹೋದರ ಕೂಡ ಸಾಥ್ ನೀಡುತ್ತಿದ್ದ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.

    ಇದನ್ನೂ ಓದಿ: ಲಂಚ ಸ್ವೀಕರಿಸುತ್ತಿದ್ದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಅಧಿಕಾರಿ ಲೋಕಾಯುಕ್ತ ಬಲೆಗೆ

    ಜಿಂಕೆ ಕೊಂಬು ಪರಿಶೀಲನೆಗೆ…

    ವಾಗೀಶ ಶೆಟ್ಟರ್ ಮನೆಯಲ್ಲಿ 10 ಇಂಚಿನ ಜಿಂಕೆ ಕೊಂಬು ದೊರೆತ್ತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಲೋಕಾಯುಕ್ತ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ರಾಣೆಬೆನ್ನೂರ ಆರ್‌ಎಫ್‌ಓ ಕಿರಣಕುಮಾರ ಕಲ್ಲಮ್ಮನವರ, ವಾಗೀಶ ಮನೆಯಲ್ಲಿ ದೊರೆತ್ತಿರುವ ಜಿಂಕೆ ಕೊಂಬು ಬಹಳ ವರ್ಷದ ಹಿಂದಿನದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸಿದ ಬಳಿಕ ಅದರ ಹಿನ್ನೆಲೆ ತಿಳಿಯಲಿದೆ. ಈ ಕುರಿತು ಲೋಕಾಯುಕ್ತ ಅಧಿಕಾರಿಗಳ ದೂರು ದಾಖಲಿಸಿಕೊಳ್ಳಲಿದ್ದಾರೆ. ನಂತರ ಅವರು ಪ್ರತ್ಯೇಕ ದೂರು ದಾಖಸಲು ತಿಳಿಸಿದರೆ, ಅರಣ್ಯ ಇಲಾಖೆಯಿಂದ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts