

Affair | ತಂದೆ, ತಾಯಿ, ಅತ್ತೆ, ಮಾವ, ಅಳಿಯ, ಸೊಸೆ, ಸ್ನೇಹ ಇದೆಲ್ಲ ಎಲ್ಲರ ಜೀವನದ ಅದ್ಭುತ ಸಂಬಂಧಗಳಾಗಿರುತ್ತದೆ. ಆದರೆ ಈ ಕಾಲದಲ್ಲಿ ಇಂತಹ ಸಂಬಂಧಗಳಲ್ಲಿ ಯಾವುದೇ ಬಿರುಕು ಮೂಡದಂತೆ ನೋಡಿಕೊಂಡು ಸಾಗುವುದೇ ದೊಡ್ಡ ಸಾಧನೆ. ಇತ್ತೀಚಿಗೆ ಇಂತಹ ಸಂಬಂಧಗಳಲ್ಲಿ ಅಕ್ರಮ ಸಂಬಂಧಗಳು ಎದ್ದು ಕಾಣುತ್ತಿದೆ. ಸುಂದರ ಸಂಸಾರ ಸರ್ವನಾಶವಾಗಲು ಈ ಅಕ್ರಮ ಸಂಬಂಧವೊಂದೇ ಸಾಕು. ಇಲ್ಲೊಂದು ಇಂತಹದೇ ಘಟನೆ ನಡೆದಿದೆ. ಮಗಳ ಗಂಡನ ಜೊತೆಗೆ ಸ್ವತಃ ತಾಯಿಯೇ ಸಂಬಂಧ ಹೊಂದಿ, ಮಗಳಿಗೆ ಶಾಕ್ ಆಘಾತ ನೀಡಿದ್ದಾಳೆ. ಈ ವಿಚಾರದ ಬಗ್ಗೆ ಮಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
ನಡೆದಿದ್ದು ಏನು?
ಅವಳ ಸುಂದರವಾದ ಸಂಸಾರಕ್ಕೆ ಒಂದು ದೊಡ್ಡ ಅಪಾಯ ಕಾದಿತ್ತು. ಆಕೆಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುತ್ತಾರೆ. ಮದುವೆಯಾದವನು ಕೂಡ ಚಿಕ್ಕವಯಸ್ಸಿನ ವ್ಯಕ್ತಿ, ಅವರಿಬ್ಬರಿಗೂ ಅದು ತಿಳಿಯದ ವಯಸ್ಸು, ಅಂದರೆ ಸುಮಾರು 14 -15 ವರ್ಷವಾಗಿರಬಹುದು. ಆ ಸಮಯದಲ್ಲಿ ಈ ಇಬ್ಬರಿಗೂ ಮದುವೆ ಮಾಡಿರುತ್ತಾರೆ. ಆಗ ಮಗಳು 18ನೇ ವಯಸ್ಸಿನಲ್ಲಿ ಗರ್ಭಿಣಿ ಆಗುತ್ತಾಳೆ. ಈ ಸಮಯದಲ್ಲಿ ತನ್ನ ತಾಯಿ ಮನೆಗೆ ಹೋಗಬೇಕಿತ್ತು. ಆದರೆ ತಾಯಿ ಮನೆಯವರು ಆಕೆಯ ಆರೈಕೆಯನ್ನು ಅವಳ ಅಜ್ಜಿ ಮನೆಯಲ್ಲಿ ಮಾಡಿದರೆ ಉತ್ತಮ ಎಂದು ಹೇಳುತ್ತಾರೆ. ಮನೆಯವರ ಒತ್ತಾಯಕ್ಕೆ ಆಕೆ ಅಜ್ಜಿ ಮನೆಗೆ ಒಲ್ಲದ ಮನಸ್ಸಿನಿಂದ ಹೋಗುತ್ತಾಳೆ.
ಹೀಗಿರುವಾಗ ಅವಳು ಅಜ್ಜಿ ಮನೆಯಿಂದ ತಾಯಿ ಮನೆಗೆ ದಿಢೀರ್ ಭೇಟಿ ನೀಡುತ್ತಾಳೆ. ಆಗ ಅವಳಿಗೆ ಗಂಡ ಮತ್ತು ತನ್ನ ತಾಯಿ ಜತೆಗೆ ಮಲಗಿರುವುದನ್ನು ಕಂಡು ಒಮ್ಮೆ ಆಘಾತವಾಗುತ್ತದೆ. ನನ್ನ ಹೆತ್ತ ತಾಯಿ ಅಳಿಯನ ಜೊತೆಗೆ ಇಂಥಹ ಸಂಬಂಧ ಇಟ್ಟುಕೊಂಡಿದ್ದಾಳಾ? ಎಂದು ಮನನೊಂದು, ಕೋಪಗೊಂಡು ಮನೆಬಿಟ್ಟು ತನ್ನ ಅಜ್ಜಿ ಮನೆಗೆ ಬರುತ್ತಾಳೆ. ಆದರೆ ಅವಳಿಗೆ ಆ ಸಮಯದಲ್ಲಿ ಇನ್ನೊಂದು ಅಘಾತಕಾರಿ ವಿಷಯ ಕಾದಿತ್ತು.
ತನ್ನ ತಾಯಿ ಮತ್ತು ಗಂಡ ಬಹಳ ವರ್ಷಗಳಿಂದ ಈ ಸಂಬಂಧವನ್ನು ಹೊಂದಿದ್ದಾರೆ ಎಂದು ತಿಳಿಯುತ್ತದೆ. ತನ್ನ ಗಂಡನಿಂದ ಆಕೆಯ ತಾಯಿ ಒಂದು ಮಗುವಿಗೂ ಜನ್ಮ ನೀಡಿದ್ದಾಳೆ ಎಂಬ ಘೋರ ಸತ್ಯ ಕೂಡ ತಿಳಿಯುತ್ತದೆ. ತನ್ನ ಗಂಡ ಎರಡು ಕಡೆ ಸಂಸಾರ ಮಾಡುತ್ತಿದ್ದಾನೆ ಎಂದು ತುಂಬಾ ಮನನೊಂದು ಬೇಸರಗೊಳ್ಳುತ್ತಾಳೆ. 40 ವರ್ಷದ ಮಹಿಳೆಯ ಜತೆಗೆ ಇಂತಹ ಸಂಬಂಧ ಇಟ್ಟುಕೊಳ್ಳಲು ಹೇಗೆ ಸಾಧ್ಯ ಎಂದು ಆಕೆ ಪ್ರಶ್ನೆ ಮಾಡಿದ್ದಾಳೆ.
ನಡೆದ ಈ ಎಲ್ಲಾ ವಿಷಯವನ್ನು ಮನೆಯವರ ಮುಂದೆ ಹೇಳಬೇಕು ಎಂದು ತನ್ನ ಮಗುವಿನ ನಾಮಕರಣ ದಿನ ಅವಳ ತಂದೆಗೆ ಅಮ್ಮ ಮತ್ತು ತನ್ನ ಗಂಡನ ನಡುವಿನ ಸಂಬಂಧದ ವಿಚಾರವನ್ನು ಹೇಳುತ್ತಾಳೆ. ಜೊತೆಗೆ ಕಾರ್ಯಕ್ರಮಕ್ಕೆ ಬಂದಿರುವ ಸಂಬಂಧಿಕರ ಮುಂದೆ ಈ ವಿಚಾರವನ್ನು ತಿಳಿಸುತ್ತಾಳೆ. ಅಳಿಯನಿಂದಲೇ ತನ್ನ ತಾಯಿ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ. ನಾನು ಆ ಮಕ್ಕಳನ್ನು ಮಲಮಕ್ಕಳು ಎಂದು ಕರೆಯಬೇಕಾ ಅಥವಾ ತನ್ನ ಸಹೋದರರು ಎಂದು ಹೇಳಬೇಕಾ? ಎಂದು ಪ್ರಶ್ನಿಸುತ್ತಾಳೆ. ಅವಳ ಆ ಪ್ರಶ್ನೆಗೆ ಇಡೀ ಕುಟುಂಬವೇ ತಲೆ ತಗ್ಗಿಸುತ್ತದೆ.
ಮಗಳ ಸುಂದರವಾದ ಸಂಸಾರವನ್ನು ಆಕೆಯ ತಾಯಿಯೇ ಹಾಳುಮಾಡಿದ್ದಾಳೆ. ನಂತರ ಆಕೆ ಗಂಡ ಮತ್ತು ತಾಯಿಯಿಂದ ಆಗುತ್ತಾಳೆ. ಈ ರೀತಿಯಾಗಿ ಮನನೊಂದ ಮಹಿಳೆ ಈ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ. ಮಗಳ ಸಂಸಾರಕ್ಕೆ ಸ್ವಂತ ತಾಯಿಯೇ ಮುಳ್ಳಾಗಿ, ಅವಳ ಜೀವನವನ್ನೇ ಸರ್ವನಾಶ ಮಾಡಿದ್ದಾಳೆ.