7 ವರ್ಷದ ಮಗನನ್ನು 18 ಸಾವಿರ ರೂಪಾಯಿಗೆ ಮಾರಿದ ತಾಯಿ! ಸಹಾಯಕ್ಕಾಗಿ ಬೇಡಿಕೊಂಡ ತಂದೆ.. Mother sells 7year old son

Mother sells
Published on

ಒಡಿಶಾ: ( Mother sells 7year old son ) ಮಹಿಳೆಯೊಬ್ಬಳು ತನ್ನ 7 ವರ್ಷದ ಮಗನನ್ನು ಕೇವಲ 18 ಸಾವಿರ ರೂ.ಗೆ ಮಾರಿದ ಘಟನೆ ಜಾಜ್‌ಪುರ ಜಿಲ್ಲೆಯ ಬಡಾಸುವಾರ್ ಪಂಚಾಯತ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಗುವಿನ ತಂದೆ ಮತ್ತು ಅವರ ಕುಟುಂಬದವರು  ಸಹಾಯವನ್ನು ಕೋರಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, ಈ ಪ್ರಕರಣವು ಜಾಜ್‌ಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ತೋಟಸಾಹಿ ಗ್ರಾಮದ ನಿವಾಸಿಗಳಾದ ಪ್ರಶಾಂತ್ ಪರಿದಾ ಅವರು ತಮ್ಮ ಪತ್ನಿ ಪೂಜಾ ಪರಿದಾ ಅವರೊಂದಿಗೆ ಬಹಳ ದಿನಗಳಿಂದ ಜಗಳವಾಡುತ್ತಿದ್ದರು . ನಾಲ್ಕು ವರ್ಷಗಳ ಹಿಂದೆ, ಪೂಜಾ ತನ್ನ ಮೂರು ವರ್ಷದ ಮಗ ಸಾಯಿರಾಮ್ ಜೊತೆ ತನ್ನ ಹೆತ್ತವರ ಮನೆಗೆ ಹೋಗಿದ್ದಳು. ಇಷ್ಟು ವರ್ಷಗಳ ಕಾಲ ಯಾವುದೇ ಸಂಪರ್ಕವಿರಲಿಲ್ಲ. ಇತ್ತೀಚೆಗೆ ಪೂಜಾ ಇದ್ದಕ್ಕಿದ್ದಂತೆ ಹಿಂತಿರುಗಿದಳು, ಆದರೆ ಅವಳ ಮಗ ಅವಳ ಜೊತೆ ಇರಲಿಲ್ಲ. ಪ್ರಶಾಂತ್ ತನ್ನ ಮಗನ ಬಗ್ಗೆ ಕೇಳಿದಾಗ, ಪೂಜಾ ಮಗುವನ್ನು ಮಾರಿರುವುದಾಗಿ ಹೇಳಿದಳು. ಮೊದಲು ಮಗುವನ್ನು 18,000 ರೂ.ಗೆ ಮಾರಾಟ ಮಾಡಿರುವುದಾಗಿ ಹೇಳಿದಳು.

ಹೋಟೆಲ್‌ನಲ್ಲಿ ಪಾತ್ರೆ ತೊಳೆಯುವ ಮೂಲಕ ಜೀವನ ಸಾಗಿಸುವ ಪ್ರಶಾಂತ್, ಈಗ ತನ್ನ ಮಗನನ್ನು ಮರಳಿ ಪಡೆಯಲು  ಸಹಾಯವನ್ನು ಬೇಡಿ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದಾರೆ. ಔಷಧಿಗಳಿಗೆ ಹಣ ಸಂಗ್ರಹಿಸಲು ಮಗುವನ್ನು ಮಾರಿದ್ದಾಗಿ ನನ್ನ ಪತ್ನಿ ಪೂಜಾ ಹೇಳಿದ್ದಾಳೆ . ಆದರೆ  ಮಗನ ಬಗ್ಗೆ ಪದೇ ಪದೇ ಕೇಳಿದಾಗ, ಪೂಜಾ ಏನನ್ನೂ ಹೇಳದೆ  ಪರಾರಿಯಾಗಿದ್ದಾಳೆಂದು ದೂರು ದಾಖಲಿಸಿದ್ದಾರೆ.

ಪ್ರಸ್ತುತ, ಮಗು ಯಾರದ್ದು ಮತ್ತು ಅವನು ಎಲ್ಲಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ಮಹಿಳೆ ಮಗುವನ್ನು ಯಾರಿಗೆ ಮಾರಾಟ ಮಾಡಿದಳು ಎಂಬುದು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಮಗು ಸುರಕ್ಷಿತವಾಗಿ ಮರಳುವ ಭರವಸೆಯನ್ನು ಕುಟುಂಬ ಹೊಂದಿದೆ. ಈ ಘಟನೆಯು ಇಡೀ ಪ್ರದೇಶದಲ್ಲಿ ಚರ್ಚೆಯ ವಿಷಯವಾಗಿದೆ ಮತ್ತು ತಾಯಿಯ ಕೃತ್ಯದಿಂದ ಜನರು ತೀವ್ರವಾಗಿ ಕಿಡಿಕಾರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net