

Extramarital affair : ವಿವಾಹಿತ ಮಹಿಳೆಯ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದ ಯುವಕನ ವಿರುದ್ಧ ದೂರು ದಾಖಲಾಗಿದೆ. ಈ ಘಟನೆ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯಲ್ಲಿ ನಡೆದಿದೆ.
ತಿರುವಳ್ಳೂರ್ ಜಿಲ್ಲೆಯ ಆರ್.ಕೆ. ಪೇಟೆಯ ಎಸ್‌ವಿಜಿಪುರಂ ಪ್ರದೇಶದ ಕೌಶಲ್ಯ (35) ವಿವಾಹಿತರಾಗಿದ್ದು, ಮೂವರು ಮಕ್ಕಳಿದ್ದಾರೆ. ಭಿನ್ನಾಭಿಪ್ರಾಯಗಳಿಂದಾಗಿ ಪತಿಯಿಂದ ಬೇರ್ಪಟ್ಟ ನಂತರ ಒಂಟಿಯಾಗಿ ವಾಸಿಸುತ್ತಿದ್ದಾರೆ. ಹೀಗಿರುವಾಗ ನಾಲ್ಕು ವರ್ಷಗಳ ಹಿಂದೆ ಚಿತ್ತೂರು ಜಿಲ್ಲೆಯ ಪಾಲಸಮುದ್ರಂ ಮಂಡಲದ ವೆಂಗಲರಾಜಕುಪ್ಪಂ ಗ್ರಾಮದ ಪಡ್ವಿನ್ ಎಂಬ ಯುವಕನನ್ನು ಕೌಶಲ್ಯ ಭೇಟಿಯಾದರು.
ಮೊದಲ ಭೇಟಿಯ ಪರಿಚಯ, ಪ್ರೇಮ ಸಂಬಂಧಕ್ಕೆ ತಿರುಗಿ ನಾಲ್ಕು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಕಳೆದ ತಿಂಗಳು 10ನೇ ತಾರೀಖಿನಂದು ಕೌಶಲ್ಯ ಪಡ್ವಿನ್‌ನ ಮೊಬೈಲ್ ಫೋನ್ ಪರಿಶೀಲಿಸಿದಾಗ, ಅವರಿಬ್ಬರೂ ಏಕಾಂತದಲ್ಲಿರುವ ಫೋಟೋಗಳು ಮತ್ತು ವಿಡಿಯೋಗಳನ್ನು ಕಂಡು ಆಘಾತಕ್ಕೊಳಗಾದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ, ಈ ವಿಷಯವನ್ನು ಬಹಿರಂಗಪಡಿಸಿದರೆ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದನು. ಅಲ್ಲದೆ, ಪೊಲೀಸರಿಗೆ ಬಳಿ ಹೋದರೆ ಕೊಲ್ಲುವುದಾಗಿ ಬೆದರಿಸಿದನು.
ಪಡ್ವಿನ್ ಕಿರುಕುಳ ಸಹಿಸದ ಕೌಶಲ್ಯ ಕೊನೆಗೆ ಆರ್.ಕೆ. ಪೇಟೆ ಪೊಲೀಸರಿಗೆ ದೂರು ನೀಡಿದರು. ತನಿಖೆ ಆರಂಭಿಸಿದ ಇನ್ಸ್‌ಪೆಕ್ಟರ್ ಜ್ಞಾನಶೇಖರನ್ ಮತ್ತು ಎಸ್‌ಐ ರಾಕಿ ಕುಮಾರಿ ಪಡ್ವಿನ್ ಬಳಸುತ್ತಿದ್ದ ಎರಡೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಸಂಪೂರ್ಣವಾಗಿ ಪರಿಶೀಲಿಸಿದರು. ಆದರೆ, ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ.
ಇದೀಗ ಸಂತ್ರಸ್ತೆ ತನ್ನ ವಕೀಲರೊಂದಿಗೆ, ಆರ್.ಕೆ.ಪೇಟೆ ಪೊಲೀಸರು ತನಗೆ ನ್ಯಾಯ ಒದಗಿಸಿಲ್ಲ ಎಂದು ಆರೋಪಿಸಿ ಎಸ್‌ಪಿ ಶ್ರೀನಿವಾಸಪೆರುಮಾಳ್ ಅವರಿಗೆ ದೂರು ಸಲ್ಲಿಸಿದ್ದಾರೆ. ಆರೋಪಿ ಪಡ್ವಿನ್, ಅವರ ಚಿಕ್ಕಮ್ಮ ಉಮಾ, ಸಂಬಂಧಿ ಪಯಾನಿ, ಸ್ನೇಹಿತ ಅಯ್ಯಪ್ಪನ್ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಸ್‌ಪಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ ಮತ್ತು ಮುಖ್ಯಮಂತ್ರಿಗಳ ವಿಶೇಷ ಘಟಕಕ್ಕೂ ದೂರು ಸಲ್ಲಿಸಿದ್ದೇವೆ ಎಂದು ಸಂತ್ರಸ್ತೆ ಪರ ವಕೀಲರು ಹೇಳಿದ್ದಾರೆ.
ಕೌಶಲ್ಯ ಅವರ ದೂರಿನ ಕುರಿತು ಹೆಚ್ಚುವರಿ ಎಸ್ಪಿ ಹರಿಕುಮಾರ್ ತನಿಖೆ ನಡೆಸಿದಾಗ, ನಾವು ಕೂಡ ಸಂಪೂರ್ಣ ತನಿಖೆ ನಡೆಸಿದ್ದೇವೆ ಎಂದು ಆರ್.ಕೆ. ಪೇಟೆ ಪೊಲೀಸರು ವಿವರಿಸಿದ್ದಾರೆ. ಪಡ್ವಿನ್‌ನ ಸೆಲ್‌ಫೋನ್ ಅನ್ನು ವಶಪಡಿಸಿಕೊಂಡು ವಿಡಿಯೋಗಳು ಮತ್ತು ಫೋಟೋಗಳನ್ನು ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಪಡ್ವಿನ್, ಬೇರೊಬ್ಬಳನ್ನು ಮದುವೆ ಆಗಲು ತಯಾರಿ ನಡೆಸುತ್ತಿದ್ದನು. ಅವರ ಮನೆಯಲ್ಲಿ ಆತನಿಗೆ ವಧು ಹುಡುಕುತ್ತಿದ್ದರು. ಹೀಗಾಗಿ, ಆತ ಕೌಶಲ್ಯಳಿಂದ ದೂರವಾಗಲು ಪ್ರಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ. ಕೌಶಲ್ಯ, ಪಡ್ವಿನ್ ಬಳಿ ತನ್ನೊಂದಿಗೆ ವಾಸಿಸುವಂತೆ ಕೇಳಿದಾಗ, ಆತ ನಿರಾಕರಿಸಿದ್ದಕ್ಕೆ ಇಬ್ಬರ ನಡುವಿನ ವಿವಾದ ಪ್ರಾರಂಭವಾಯಿತು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದ್ದಾರೆ. (ಏಜೆನ್ಸೀಸ್)