'ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ..' ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ತಾಯಿ!

Feature
Published on

ನೆಲಮಂಗಲ: ಅದೆಂಥದ್ದೇ ಕಷ್ಟ ಬಂದರೂ ಮಕ್ಕಳಿಗಾಗಿ ಸಹಿಸಿಕೊಂಡು ಅವರಿಗೋಸ್ಕರವಾದರೂ ಬದುಕಬೇಕು ಎಂದು ತಾಯಂದಿರು ಅಂದುಕೊಳ್ಳುವುದೇ ಹೆಚ್ಚು. ಅಂಥದ್ದರಲ್ಲಿ ಬದುಕಿನಲ್ಲಿ ತೀವ್ರ ನೊಂದಿರುವ ತಾಯಿಯೊಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್​ ಪೇಟೆಯ ನಿವಾಸಿ ವಿದ್ಯಾಧರೆ (38) ಆತ್ಮಹತ್ಯೆ ಮಾಡಿಕೊಂಡಿರುವ ವಿವಾಹಿತೆ. ಇವರು 18 ವರ್ಷಗಳ ಹಿಂದೆ ಉಮೇಶ್ ಎಂಬುವವರೊಂದಿಗೆ ಮದುವೆ ಆಗಿದ್ದರು. ಕೌಟುಂಬಿಕ ವಿಚಾರವಾಗಿ ತೀವ್ರವಾಗಿ ನೊಂದಿದ್ದ ಇವರು, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.

ಕೌಟುಂಬಿಕ ಜೀವನದ ಕೆಲವು ವಿಚಾರವಾಗಿ ನಾನು ತಪ್ಪು ಮಾಡಿದ್ದೇನೆ, ನಿಮಗೆ ತುಂಬಾ ನೋವು ಕೊಟ್ಟಿದ್ದೇನೆ. ನನ್ನ ತಪ್ಪನ್ನು ಕ್ಷಮಿಸಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಎಂದು ವಿದ್ಯಾಧರೆ ಸಾಯುವ ಮುನ್ನ ಬರೆದಿಟ್ಟಿದ್ದರು. ಮತ್ತೊಂದೆಡೆ ವಿದ್ಯಾಧರೆಯ ಪಾಲಕರು, ಈ ಸಾವಿಗೆ ಆಕೆಯ ಪತಿ ಉಮೇಶ ನೀಡುತ್ತಿದ್ದ ಕಿರುಕುಳವೇ ಕಾರಣ. ಅದರಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಉಮೇಶ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net