Murder Case: ತನ್ನ ಕರುಳಬಳ್ಳಿ ಸಂಬಂಧವನ್ನೇ ಕಡಿದುಕೊಂಡ ಪಾಪಿ ತಾಯಿಯ ಹೇಯ ಕೃತ್ಯ ಇದೀಗ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಒಂಬತ್ತು ತಿಂಗಳುಗಳ ಕಾಲ ಹೊತ್ತು ಸಾಕಿದ ಮಗನನ್ನು ಪ್ರಿಯಕರನ ಕಾಮದಾಸೆಗೆ ಬಲಿಕೊಟ್ಟ ಮಹಿಳೆ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.

ಇದನ್ನೂ ಓದಿ: ಈವರೆಗೂ ೧೨ ಸಾವಿರಕ್ಕೂ ವಿವಿಧಜಾತಿ ಹೆಚ್ಚು ಹಾವುಗಳ ರಕ್ಷಣೆ / ಒಂದೇ ದಿನ ಎಂಟು ಹಾವು ಹಿಡಿದು ಆತಂಕ ದೂರ ಮಾಡಿದ ಸ್ನೇಕ್‌ರವಿ
ಪ್ರಿಯಕರನ ಹುಚ್ಚು
ಪ್ರಿಯಕರನ ಮೇಲಿನ ಹುಚ್ಚು ಪ್ರೀತಿಗಾಗಿ 10 ವರ್ಷದ ಮಗನನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಡಿದ ಭೀಕರ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ವರದಿಯಾಗಿದೆ. ಗುವಾಹಟಿಯ ದೀಪಾಲಿ ರಾಜ್‌ಬೋಂಗ್ಶಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಕರನೊಂದಿಗೆ ಅನೈತಿಕ ಸಂಬಂಧ ಮುಂದುವರಿಸಲು ಎರಡು ತಿಂಗಳ ಹಿಂದೆಯಷ್ಟೇ ಪತಿಯಿಂದ ದೂರವಾಗಿದ್ದ ಕೊಲೆಗೈದ ಮಹಿಳೆ ದೀಪಾಲಿ, 5ನೇ ತರಗತಿಯಲ್ಲಿ ಓದುತ್ತಿದ್ದ ಮಗ ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದು ಬರ್ಬರವಾಗಿ ಹತ್ಯೆಗೈದಿರುವುದು ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ.
ಪತಿಗೆ ಗುಡ್ಬೈ
ಮಗ ಕಾಣೆಯಾಗಿದ್ದಾನೆ ಎಂದು ದೀಪಾಲಿ ದೂರು ಸಲ್ಲಿಸಿದ ಬೆನ್ನಲ್ಲೇ ಪೊಲೀಸರು ತನಿಖೆ ಕೈಗೊಂಡರು. ಹಲವು ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ ಖಾಕಿ ಪಡೆಗೆ ಅರಣ್ಯ ಇಲಾಖೆ ಕಚೇರಿ ಬಳಿಯಿರುವ ಗುಜರಿ ಅಂಗಡಿಯ ಬಳಿ ಅನುಮಾನಾಸ್ಪದ ಸೂಟ್‌ಕೇಸ್ ಬಗ್ಗೆ ಮಾಹಿತಿ ಸಿಕ್ಕಿತು. ಅಂಗಡಿ ಮಾಲೀಕ ಮಾಹಿತಿ ಮೇರೆಗೆ ಸ್ಥಳಕ್ಕೆ ತಲುಪಿದ ಪೊಲೀಸರು ಸೂಟ್‌ಕೇಸ್ ತೆರೆದು ನೋಡಿದಾಗ, ಅದರೊಳಗೆ ಕತ್ತರಿಸಿದ ಮೂಗು ಮತ್ತು ಮನುಷ್ಯನ ದೇಹದ ಇತರೆ ಭಾಗಗಳನ್ನು ನೋಡಿ ಭಾರೀ ಅಚ್ಚರಿಗೆ ಒಳಗಾದರು.
ಇದನ್ನೂ ಓದಿ: ಮಹಿಳಾ ಒಕ್ಕೂಟ ವಾಹನ ಚಾಲಕರ ಗೌರವ ಧನ ಬಿಡುಗಡೆ ಮಾಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ
ಅನುಮಾನ ನಿಜ
ವಿಧಿವಿಜ್ಞಾನ ತಂಡ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ, ಸೂಟ್‌ಕೇಸ್‌ನಲ್ಲಿದ್ದ ಬಾಲಕನ ದೇಹ ದೂರು ನೀಡಿದ್ದ ದೀಪಾಲಿ ಪುತ್ರನದ್ದೇ ಎಂಬುದು ಖಚಿತವಾಯಿತು. ಅಸಲಿಗೆ ಬಾಲಕನನ್ನು ಯಾರು ಕೊಲೆ ಮಾಡಿದರು? ಚಿಕ್ಕ ಹುಡುಗನನ್ನು ಇಷ್ಟು ಭೀಕರವಾಗಿ ಹತ್ಯೆಗೈಯುವ ಉದ್ದೇಶವೇನಿತ್ತು ಎಂದು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮೃತ ಬಾಲಕನ ತಾಯಿಯ ವರ್ತನೆ ಕೊಂಚ ಅನುಮಾನ ಮೂಡಿಸಿತು. ಕೂಡಲೇ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆತ್ತಲಾಯಿತು.
ತನಿಖೆಯ ಸಮಯದಲ್ಲಿ, ಗೆಳೆಯ ಜ್ಯೋತಿರ್ಮಯಿ ಹಲೈ ಸಹಾಯದಿಂದ ನನ್ನ ಮಗನನ್ನು ಕ್ರೂರವಾಗಿ ಕೊಲೆ ಮಾಡಿದೆ ಎಂದು ದೀಪಾಲಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಬರ್ಬರ ಹತ್ಯೆಗೆ ವಿವಾಹೇತರ ಸಂಬಂಧವೇ ಕಾರಣ ಎಂಬುದು ಪೊಲೀಸರಿಗೆ ಸ್ಪಷ್ಟವಾಯಿತು. ಸದ್ಯ ದೀಪಾಲಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ,(ಏಜೆನ್ಸೀಸ್).