ಕೋರ್ಟ್ ಆವರಣದಲ್ಲೇ ಅತ್ತೆ-ಸೊಸೆ ಮಾರಾಮಾರಿ; Viral Video ನೋಡಿ ನೆಟ್ಟಿಗರು ಹೇಳಿದ್ದಿಷ್ಟು

Court Fight
Published on

ನಾಸಿಕ್​: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ನಮ್ಮ ಹಿರಿಯರು ಹೇಳಿದೆ ಹಾಗೆ ಅತ್ತೆ ಸೊಸೆ ನಡುವಿನ ಗಲಾಟೆ ಎಂದಿಗೂ ಎವರ್​ಗ್ರೀನ್​ ಎಂದರೆ ತಪ್ಪಾಗಲಾರದು. ಕೆಲಸ ಹಾಗೂ ಇನ್ನಿತರೆ ವಿಚಾರಗಳಿಗಾಗಿ ಅತ್ತೆ ಹಾಗೂ ಸೊಸೆ ನಡುವೆ ಮನಸ್ತಾಪ ಉಂಟಾಗಿ ಪ್ರಕರಣಗಳು ಕೋರ್ಟ್ ಹಾಗೂ ಪೊಲೀಸ್ ಠಾಣೆ ಮೆಟ್ಟಿಲೇರಿರುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ವಿಚಿತ್ರ ಘಟನೆಯಲ್ಲಿ ಅತ್ತೆ-ಸೊಸೆ ಕುಟುಂಬಸ್ಥರ ಜೊತೆ ಸೇರಿಕೊಂಡು ಕೋರ್ಟ್ ಆವರಣದಲ್ಲೇ ಹೊಡೆದಾಡಿಕೊಂಡಿರುವ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ (Viral Video) ಆಗಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದ್ದು, ಅತ್ತೆ ಸೊಸೆ ನ್ಯಾಯಾಲಯದ ಆವರಣದಲ್ಲಿಯೇ ಜಗಳವಾಡಿದ್ದಾರೆ. Ghar Ke Kalesh ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು (Viral Video) ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋ ಸದಯ 452.6ಕೆ ವೀವ್ಸ್ ಪಡೆದುಕೊಂಡಿದೆ.

ಕೇಳಿ ಬಂದಿರುವ ಮಾಹಿತಿ ಪ್ರಕಾರ, ಕೌಟುಂಬಿಕ ಕಲಹದ ವಿಚಾರಣೆಗೆ ಹಾಜರಾಗಿದ್ದ ಅತ್ತೆ-ಸೊಸೆ ಕೋರ್ಟ್ ಆವರಣದಲ್ಲಿ ಮುಖಾಮುಖಿಯಾಗಿದ್ದು, ಇಬ್ಬರು ಪರಸ್ಪರ ನೋಡಿಕೊಳ್ಳುತ್ತಿದ್ದಂತೆ ಮಾತಿನ ಚಕಮಕಿ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಹೊಡೆದಾಡಿಕೊಳ್ಳಲು ಶುರು ಮಾಡಿದ್ದಾರೆ. ಇವರ ಜೊತೆ ಬಂದಿದವರು ಕೂಡ ಬಡಿದಾಡಿಕೊಂಡಿದ್ದು, ಬಿಡಿಸಲು ಹೋದವರಿಗೂ ಗೂಸಾವನ್ನು ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಆಧಿಕಾರಿಯೊಬ್ಬರು, ಸರ್ಕಾರ್​ವಾಡ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೋರ್ಟ್ ಆವರಣದಲ್ಲಿ ಹೊಡೆದಾಡಿಕೊಂಡವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡು ಗುಂಪುಗಳನ್ನು ವಿಚಾರಣೆ ನಡೆಸಿದ ಬಳಿಕ ಬಿಟ್ಟು ಕಳುಹಿಸಲಾಗಿದ್ದು, ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ವಿಚಾರಣೆ ವೇಳೆ ಯಾವ ಕಾರಣಕ್ಕೆ ಹೊಡೆದಾಡಿಕೊಂಡರು ಎಂಬುದರ ಬಗ್ಗೆ ಸ್ಪಷ್ಟನೆಯನ್ನು ನೀಡಿಲ್ಲ ಎಂದು ಹಿರಿಯ ಪೊಲೀಸ್​ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net