ಕ್ರೇಜ್​ಗೆ ಇನ್ನೊಂದು ಹೆಸರೇ RCB... ಫ್ಯಾನ್ಸ್ ಘರ್ಜನೆಗೆ ಕಿವಿಮುಚ್ಚಿಕೊಂಡ ಹರ್ಮಾನ್​ಪ್ರೀತ್ ಕೌರ್

Harmanpreet Kaur
Published on

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ (RCB) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ನಡುವಿನ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಸ್ಮೃತಿ ಮಂದಾನ ಪಡೆಯ ಜಯದ ಓಟಕ್ಕೆ ಹರ್ಮಾನ್​ಪ್ರೀತ್ ಬಳಗ ಬ್ರೇಕ್ ಹಾಕಿದ್ದು, 4 ವಿಕೆಟ್​ಗಳ ಜಯ ಸಾಧಿಸಿದೆ.

ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಗಮನಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳು ತವರಿನಲ್ಲಿ ವನಿತೆಯರಿಗೆ ಭರ್ಜರಿ ಸ್ವಾಗತವನ್ನು ನೀಡಿದ್ದಾರೆ. ಮೊದಲ ಬಾಲ್​ನಿಂದಲೇ ತಂಡವನ್ನು ಹುರಿದುಂಬಿಸಿದ ಅಭಿಮಾನಿಗಳು ಎಲ್ಲಿಸ್ ಪೆರ್ರಿ (81 ರನ್, 43 ಎಸೆತ, 11 ಬೌಂಡರಿ, 2 ಸಿಕ್ಸರ್) ಅರ್ಭಟಿಸುತ್ತಿದ್ದಂತೆ ಅವರ ಹರ್ಷೋದ್ಗಾರ ಮತ್ತಷ್ಟು ಹೆಚ್ಚಾಯಿತು.

ಒಂದು ಕ್ಷಣದಲ್ಲಿ ಎಲ್ಲಿಸ್ ಪೆರ್ರಿ ಸ್ಫೋಟಕ ವ್ಯಾಟಿಂಗ್​ನಿಂದಾಗಿ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆರ್​ಸಿಬಿ ಅಭಿಮಾನಿಗಳು ದೊಡ್ಡ ತಲೆನೋವಾಗಿ ಪರಿಣಮಿಸಿದರು. ಅದು ಎಷ್ಟರಮಟ್ಟಿಗೆ ಎಂದರೆ ಮುಂಬೈ ತಂಡದ ನಾಯಕಿ ಹರ್ಮಾನ್​ಪ್ರೀತ್ ಕೌರ್​ ಕೆಲಕ್ಷಣ ಕಿವಿಯನ್ನು ಮುಚ್ಚಿಕೊಂಡಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, 2.7 ಮಿಲಿಯನ್​ವೀವ್ಸ್ ಪಡೆದುಕೊಂಡಿದೆ.

ಸ್ಮೃತಿ ಪಡೆಗೆ ಹ್ಯಾಟ್ರಿಕ್ ಜಯ ತಪ್ಪಿಸಿದ ಮುಂಬೈ

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡವು ಎಲ್ಲಿಸ್ ಪೆರ್ರಿ (81 ರನ್, 43 ಎಸೆತ, 11 ಬೌಂಡರಿ, 2 ಸಿಕ್ಸರ್) ಅರ್ಧಶತಕರ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್​ಗಳಿಸಿತು. ಆರ್​ಸಿಬಿ ನೀಡಿದ ಗುರಿ ಬೆನ್ನಟ್ಟಿದ ಮುಂಬೈ ತಂಡವು ನ್ಯಾಟ್ ಸಿವರ್-ಬ್ರಂಟ್ (42 ರನ್, 21 ಎಸೆತ, 9 ಬೌಂಡರಿ), ಹರ್ಮನ್‌ಪ್ರೀತ್ ಕೌರ್ (50 ರನ್, 38 ಎಸೆತ, 8 ಬೌಂಡರಿ, 1 ಸಿಕ್ಸರ್), ಅಮನ್‌ಜೋತ್ ಕೌರ್ (34 ರನ್, 27 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಆಟದ ಫಲವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಸ್ಮೃತಿ ಪಡೆಗೆ ಹ್ಯಾಟ್ರಿಕ್ ಜಯವನ್ನು ಮುಂಬೈ ತಪ್ಪಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net