ದಾವಣಗೆರೆ: ಬಳ್ಳಾರಿಯಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ ಚಾಲ್ತಿಯಲ್ಲಿರುವಾಗಲೇ ದಾವಣಗೆರೆ(Davangere) ಚಿಟಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಯಂತಿಯೊಬ್ಬರು ಹೆರಿಗೆಯಾಗಿ ಒಂದು ವಾರದಲ್ಲಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ರಾಣೆಬೆನ್ನೂರ ತಾಲೂಕಿನ ಆಲದಕಟ್ಟಿ ಗ್ರಾಮದ 28 ವರ್ಷದ ರೂಪಾ ಮಹೇಶಪ್ಪ ಕೂಲೇರ ಅವರು ಮೃತ ದುರ್ದೈವಿ.
ಇದನ್ನು ಓದಿ: ಕೇರಳಕ್ಕೆ ಉಪಕಾರಿ, ಕರ್ನಾಟಕಕ್ಕೆ ಮಾರಿ; ಸಿಎಂ ವಿರುದ್ದ ಅಶೋಕ ವಾಗ್ದಾಳಿ | Ashoka
ರೂಪಾ ಅವರಿಗೆ ಕಳೆದ ವಾರ ದಾವಣಗೆರೆಯ ಚಿಟಗೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಮಗುವಿಗೆ ತೀವ್ರ ಉಸಿರಾಟದ ತೊಂದರೆ ಎದುರಾದ ಕಾರಣ ಐಸಿಯೂನಲ್ಲಿ ಇಡಲಾಗಿದೆ. ಆದರೆ ತಾಯಿ ರೂಪಾ ಆಸ್ಪತ್ರೆಯ ಮೇಲಿನ ಮಹಡಿಯಿಂದ ಮೆಟ್ಟಿಲು ಇಳಿದು ಬರುವ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಗಭಿರ್ಣಿಯಾಗಿದ್ದ ಸಮಯದಲ್ಲಿ ಮಗಳು ಆರಾಮಾಗಿಯೆ ಇದ್ದಳು. ಹೆರಿಗೆಯಾದ ಬಳಿಕ ಮಗು ಐಸಿಯೂನಲ್ಲಿ ದಾಖಲಾಗಿದೆ. ಆಸ್ಪತ್ರೆಯ ಮೇಲ್ಮಹಡಿಯಿಂದ ಕೆಳಗೆ ಇಳಿದು ಬರುವ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಿ ನನ್ನ ಮಗಳು ಮೃತಪಟ್ಟಿದ್ದಾಳೆ. ಆದ್ದರಿಂದ ನನ್ನ ಮಗಳ ಸಾವಿಗೆ ಸೂಕ್ತ ಕಾರಣ ತಿಳಿಸಬೇಕು ಎಂದು ಮೃತಳ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಂಜು ಏರಿತ್ತು ಎನ್ನುವ ಅನುಮಾನ
ರೂಪಾ ಅಡುಗೆ ಮಾಡುವ ಸಮಯದಲ್ಲಿ ಕೈಗೆ ಚಾಕೂ ಚುಚ್ಚಿಕೊಂಡಿದ್ದಳು. ಇದರಿಂದ ಆಕೆಗೆ ನಂಜು ಏರಿತ್ತು. ಇದು ವೈದ್ಯರಿಗೆ ತಿಳಿದಿಲ್ಲ. ಹೀಗಾಗಿ ಹೆರಿಗೆಯಾದ ಬಳಿಕ ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟಿದ್ದಾಳೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಮೃತಳ ರಕ್ತ ಮಾದರಿಯನ್ನು ಎಸ್ಎಫ್ಎಲ್ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂಬುದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.
ಮಾಜಿ ಸಿಎಂ SM Krishna ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ; ಕೇಳಿಬಂತು ಕೂಗು