Mother & Daughter Fighting: ಕುಟ್ಟಾಣಿಯಿಂದ ಹೊಡೆದು ತಾಯಿಯನ್ನು ಕೊಂದ ಮಗಳು ಅರೆಸ್ಟ್​

Mother Daughter fighting
Published on

ಗುವಾಹಟಿ: ಒಬ್ಬ ಉದಯೋನ್ಮುಖ ಟೆನ್ನಿಸ್ ಆಟಗಾರ್ತಿ ತನ್ನ ತಾಯಿಯನ್ನು ಕೊಲೆ ( Mother Daughter fighting)  ಮಾಡಿದ್ದಾಳೆ. ಈ  ಆಘಾತಕಾರಿ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.

ಮಂಜುದೇವಿ ( 40) ಮೃತ ತಾಯಿ.  ಇಬ್ಬರಿಗೂ ಮಾತಿಗೆ ಮಾತು ಬೆಳೆದು ಅದು ಕೊಲೆಯಲ್ಲಿ ಅಂತ್ಯವಾಗಿದೆ.   ಪ್ರಾಪ್ತ ಬಾಲಕಿ ಉದಯೋನ್ಮುಖ ಟೆನ್ನಿಸ್ ಪ್ಲೇಯರ್ ಆಗಿದ್ದಳು. ತಂದೆ ಟೆನ್ನಿಸ್ ಕೋಚರ್‌ ಆಗಿದ್ದು, ಸಂಜೆ ಅವರು ಕೋಚಿಂಗ್‌ ನೀಡುವುದಕ್ಕಾಗಿ ಡ್ಯೂಟಿಗೆ ತೆರಳಿದ ನಂತರ ಈ ದುರ್ಘಟನೆ ಸಂಭವಿಸಿದೆ.

ನಡೆದಿದ್ದೇನು?: ಅಪ್ಪ ಅಮ್ಮ, ಮಗಳು ಇದ್ದ ಪುಟ್ಟ ಕುಟುಂಬ ಇವರದಾಗಿತ್ತು. ತಂದೇ ದೀಪ್ ಚಂದ್‌ ಪ್ರಸಾದ್ ಟೆನ್ನಿಸ್ ಕೋಚರ್ ಆಗಿದ್ದರು. ಟೆನ್ನಿಸ್‌ ಕೋಚರ್‌ ಆಗಿದ್ದ ಅಪ್ಪ ಡ್ಯೂಟಿಗೆ ಹೋದ ನಂತರ ಅಮ್ಮ ಮಗಳ ಮಧ್ಯೆ ವಾಗ್ವಾದ ಶುರುವಾಗಿದೆ. ಈ ವೇಳೆ ತೀವ್ರವಾಗಿ ಕುಪಿತಗೊಂಡಿದ್ದ ಬಾಲಕಿ ತನ್ನ ಹೆತ್ತಮ್ಮ ಎಂಬುದನ್ನು ಕೂಡ ಯೋಚಿಸದೇ ಕುಟ್ಟಾಣಿಯಿಂದ  ಮಂಜುದೇವಿ ಸಾಯುವವರೆಗೂ ಹೊಡೆದು ಕೊಂದೇ ಬಿಟ್ಟಿದ್ದಾಳೆ.

ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಅಪ್ರಾಪ್ತ ಮಗಳನ್ನು ಬಂಧಿಸಿದ್ದಾರೆ. ಈಗ ಪೊಲೀಸ್ ಕಸ್ಟಡಿಯಲ್ಲಿರುವ ಆಕೆಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆಗೆ  ಮೊದಲು ಏನು ನಡೆಯಿತು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net