ಬ್ಲೂ ಫಿಲ್ಮ್​ನಲ್ಲಿ ನಟಿಸುವ ಆಫರ್​ ಸಿಕ್ಕಿದೆ ಎಂದ ಮಗ! ತಾಯಿ ಕೊಟ್ಟ ಪ್ರತಿಕ್ರಿಯೆ ಸಿಕ್ಕಾಪಟ್ಟೆ ವೈರಲ್​ | Mother and Son

Mother and Son
Published on

Mother and Son : ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದಾಗ ನಿಮ್ಮ ತಂದೆ-ತಾಯಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಸಂತೋಷದಿಂದ ಕುಣಿದು ಕುಪ್ಪಳಿಸಬಹುದು. ಆದರೆ, ಬ್ಲೂ ಫಿಲ್ಮ್​ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದರೆ, ಪಾಲಕರ ಪ್ರತಿಕ್ರಿಯೆ ಹೇಗಿರಬಹುದು?ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಂಥದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕೇರಳ ಮೂಲದ ಕಂಟೆಂಟ್ ಕ್ರಿಯೇಟರ್ ಅಶ್ವಿನ್ ಉನ್ನಿ ಎಂಬುವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಶ್ವಿನ್ ಅವರ ತಾಯಿ ಕೂಡ ಇದ್ದಾರೆ. ವಿಡಿಯೋ ಆರಂಭದಲ್ಲಿ ಮಾ... ಎಂದು ಅಶ್ವಿನ್​ ತಮ್ಮ ತಾಯಿಯನ್ನು ಕರೆಯುತ್ತಾರೆ. ಆಗ ತಾಯಿ ಮಗನ ಬಳಿಗೆ ಬರುತ್ತಾರೆ. ನಂತರ ಅಶ್ವಿನ್​, ನಾನು ನಿಮಗೆ ಒಂದು ಸುದ್ದಿ ಹೇಳಬೇಕು ಮತ್ತು ನಿಮ್ಮ ಪ್ರತಿಕ್ರಿಯೆ ಬೇಕು ಎಂದು ಹೇಳುತ್ತಾನೆ. ಇದಕ್ಕೆ ಅವರ ತಾಯಿ ಓಕೆ ಎನ್ನುತ್ತಾರೆ. ಬಳಿಕ ತಾಯಿಯನ್ನು ಕುರ್ಚಿಯಲ್ಲಿ ಕೂರಿಸಿ, ತಾನು ಹಿಂದೆ ನಿಲ್ಲುತ್ತಾನೆ.

ಸಿನಿಮಾದಲ್ಲಿ ನಟಿಸಲು ನನಗೆ ಒಂದು ಆಫರ್​ ಬಂದಿದೆ ಎಂದು ಅಶ್ವಿನ್​ ಹೇಳುತ್ತಾರೆ. ಇದನ್ನು ಕೇಳಿದ ತಾಯಿ ತುಂಬಾ ಸಂತೋಷಗೊಳ್ಳುತ್ತಾರೆ. ಬಳಿಕ ನಿಜವಾದ ಸುದ್ದಿ ಏನು ಹೇಳು ಎಂದು ತಾಯಿ ಕೇಳಿದಾಗ ಇಲ್ಲ ನಾನು ನಿಜ ಹೇಳುತ್ತಿದ್ದೇನೆ ಎನ್ನುತ್ತಾರೆ ಅಶ್ವಿನ್. ಆಗ ತಾಯಿ ಮಗನನ್ನು ತಬ್ಬಿಕೊಂಡು, ಮುತ್ತುಕೊಟ್ಟು ಸಂಭ್ರಮಿಸುತ್ತಾರೆ.

ಆದರೆ, ಅಸಲಿ ಟ್ವಿಸ್ಟ್​ ಏನೆಂದರೆ, ಮಾತು ಮುಂದುವರಿಸುವ ಮಗ ಅಶ್ವಿನ್​, ನನಗೊಂದು ಸಿನಿಮಾಗೆ ಆಫರ್​ ಬಂದಿದೆ. ಆದರೆ, ಅದು ಬ್ಲೂ ಫಿಲ್ಮ್​ ಎನ್ನುತ್ತಾನೆ. ತಕ್ಷಣ ಆಕ್ರೋಶ ಹೊರಹಾಕುವ ತಾಯಿ ಇದನ್ನೆಲ್ಲ, ಪಾಲಕರ ಮುಂದೆ ಹೇಗೆ ಹೇಳುತ್ತೀಯಾ ಎಂದು ಬೈಯುತ್ತಾರೆ. ಕೊನೆಯಲ್ಲಿ ಅಶ್ವಿನ್​ ಆ ಆಫರ್​ ಅನ್ನು ತಿರಸ್ಕರಿಸಿದೆ ಎನ್ನುತ್ತಾರೆ. ಅಲ್ಲದೆ, ವಿಡಿಯೋ ಕೊನೆಯಲ್ಲಿ ತನಗೆ ಬಂದ ಆಫರ್​ ಮೆಸೇಜ್​ ಅನ್ನು ಪ್ರದರ್ಶಿಸಿದ್ದಾರೆ.

ಆಫರ್​ ಮಸೇಜ್​ನಲ್ಲಿ ಏನಿದೆ?

ನಾನು ಒಂದು ನಿಜ ಹೇಳುತ್ತೇನೆ. ಇದು ಜಾಹೀರಾತು ಶೂಟಿಂಗ್​ ಅಲ್ಲ, ಇದೊಂದು ಪೋರ್ನ್​ ಶೂಟಿಂಗ್​. ಇದರಲ್ಲಿ ನೀನು ನಟಿಸುತ್ತಿದ್ದೀಯಾ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಇದು ಭಾರತದಲ್ಲಿ ಶೂಟ್​ ಆಗುವುದಿಲ್ಲ ಬದಲಿಗೆ ವಿದೇಶದಲ್ಲಿ ಶೂಟ್​ ಮಾಡಲಾಗುತ್ತದೆ. ಕೇವಲ ನಟಿಸಿ ಹಣ ಪಡೆದುಕೋ. ನಾವು ಉಚಿತ ವಿಮಾನ ಟಿಕೆಟ್​ ಹಾಗೂ ವಸತಿ ವ್ಯವಸ್ಥೆ ಎಲ್ಲವನ್ನು ಒದಗಿಸುತ್ತೇವೆ. 3 ಲಕ್ಷ ರೂ. ಹಣ ಕೊಡುತ್ತೇವೆ ಮತ್ತು ತೆರಿಗೆ ಎಲ್ಲ ಕಡಿತವಾಗಿ 2.50 ಲಕ್ಷ ರೂ. ನಿನಗೆ ಸಿಗುತ್ತದೆ ಎಂದು ಅಶ್ವಿನ್​ ಅವರಿಗೆ ಕಳುಹಿಸಿದ ಮೆಸೇಜ್​ನಲ್ಲಿ ಉಲ್ಲೇಖಿಸಲಾಗಿದೆ.

ಅಂದಹಾಗೆ ಅಶ್ವಿನ್​ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇದೊಂದು ತಮಾಷೆಯ ವಿಡಿಯೋ ಎಂದು ತಿಳಿದುಬಂದಿದೆ. ಈವರೆಗೂ 6 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, 10 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ನೂರಾರು ಕಾಮೆಂಟ್​ಗಳು ಬಂದಿದ್ದು, ನಿಮ್ಮ ತಾಯಿಯ ಉತ್ತರವನ್ನು ಕೇಳಲು ನಾನು ಸಂಪೂರ್ಣ ವಿಡಿಯೋ ವೀಕ್ಷಿಸಿದ್ದೇನೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಎಲ್ಲ ಭಾರತೀಯ ಪಾಲಕರು ಇದೇ ರೀತಿ ವರ್ತಿಸುತ್ತಾರೆ ಎಂದು ಇನ್ನೊಬ್ಬ ನೆಟ್ಟಿಗ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net