ಬಾವಿಗೆ ಬಿದ್ದು ತಾಯಿ ಹಾಗೂ ಗಂಡು ಮಕ್ಕಳಿಬ್ಬರ ಸಾವು!

Pub crime
Published on

ವಿಜಯಪುರ: ಬಾವಿಯೊಂದರಲ್ಲಿ ತಾಯಿ ಹಾಗೂ ಗಂಡು ಮಕ್ಕಳಿಬ್ಬರ ಶವ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಝಳಕಿಯಲ್ಲಿ ಇಂದು ಸಂಜೆ ಈ ದುರಂತ ಸಂಭವಿಸಿದೆ.

ಶ್ರೀದೇವಿ ಸಂತೋಷ ಬಿರಾದಾರ (31), ಆಕೆಯ ಪುತ್ರರಾದ ಶ್ರೀಶೈಲ(7) ಹಾಗೂ ಮಹೇಶ ( 5) ಮೃತರಾದವರು. ಈ ಮೂವರು ಉರುವರಲು ತರಲೆಂದು ಝಳಕಿ ಸಮೀಪದ ಶಿರನಾಳದಲ್ಲಿನ ತೋಟಕ್ಕೆ ಹೋಗಿದ್ದರು.

ಆದರೆ ಸಂಜೆಯ ಸುಮಾರಿಗೆ ಅಲ್ಲಿನ ಬಾವಿಯಲ್ಲಿ ಈ ಮೂವರ ಶವ ಪತ್ತೆಯಾಗಿದೆ. ಇದು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಝಳಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net