ಯುವಜನಾಂಗ ಸಂಘಟಿತರಾಗಲು ಬುನಾದಿ : ನಿವೃತ್ತ ಮುಖ್ಯಶಿಕ್ಷಕ ಯಶವಂತ ರೈ ಅಭಿಮತ

New Project (14)
Published on

ಸುಬ್ರಹ್ಮಣ್ಯ: ಧಾರ್ಮಿಕ ಆಚರಣೆಗಳು ಯುವ ಜನಾಂಗವು ಸಂಘಟಿತರಾಗಲು ಬುನಾದಿ ಎಂದು ನಿವೃತ್ತ ಮುಖ್ಯಶಿಕ್ಷಕ ಕೆ.ಯಶವಂತ ರೈ ಹೇಳಿದರು.

ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀಕೃಷ್ಣಾಷ್ಟಮಿ ಉತ್ಸವ ಸಮಿತಿ ಆಶ್ರಯದಲ್ಲಿ ನಡೆದ 21ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕುಕ್ಕೆ ದೇಗುಲದ ನಿವೃತ್ತ ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇಗುಲ ನಿವೃತ್ತ ಸಿಬ್ಬಂದಿ ರಮೇಶ್ ಭಟ್ ಎಸ್., ವೆಂಕಟರಮಣ, ಜಯಂತಿ, ರತಿ ಶೆಟ್ಟಿ, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಆಶಿಶ್ ಕೆ.ವೈ. ಕೋಟೆಬಾಗಿಲು ಪರವಾಗಿ ತಾಯಿ ಸಂಧ್ಯಾಮಣಿ ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಸನ್ಮಾನಿಸಿದರು. ಮೊಸರು ಕುಡಿಕೆ ಉತ್ಸವ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು.

ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಮಾನಾಡು ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಸದಸ್ಯ ಅಶೋಕ್ ನೆಕ್ರಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಪ್ರೆಸ್‌ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ಕುಕ್ಕೆಶ್ರೀ ಆಟೋ ಚಾಲಕ ಮಾಲೀಕರ ಸಂಘ ಅಧ್ಯಕ್ಷ ಸಂತೋಷ್ ಕುಲ್ಕುಂದ, ಬಿಎಂಎಸ್ ಆಟೋ ಚಾಲಕ ಮಾಲೀಕರ ಸಂಘ ಅಧ್ಯಕ್ಷ ಸುಬ್ಬಪ್ಪ ಕುಲ್ಕುಂದ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಆರ್., ಲಯನ್ಸ್ ಕ್ಲಬ್ ಅಧ್ಯಕ್ಷೆ ವಿಮಲಾ ರಂಗಯ್ಯ, ಸೀನಿಯರ್ ಚೇಂಬರ್ ಅಧ್ಯಕ್ಷ ವೆಂಕಟೇಶ್ ಎಚ್.ಎಲ್., ಸಮಿತಿ ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್., ಕಾರ್ಯದರ್ಶಿ ನಿತಿನ್ ಭಟ್, ಪೂರ್ವಾಧ್ಯಕ್ಷ ಶ್ರೀಧರ ಭಟ್ ಮೊದಲಾದವರಿದ್ದರು. ಸಮಿತಿ ಸದಸ್ಯ ರತ್ನಾಕರ ಎಸ್. ಬಹುಮಾನಿತರ ಪಟ್ಟಿ ವಾಚಿಸಿದರು. ಶ್ರೀಕೃಷ್ಣ ಶರ್ಮ ಸಹಕರಿಸಿದರು. ಪೂರ್ವಾಧ್ಯಕ್ಷ ಡಾ.ಸಿದ್ದಲಿಂಗ ಎಸ್.ಎಸ್. ನಿರೂಪಿಸಿದರು. ಪೂರ್ವಾಧ್ಯಕ್ಷ ದೀಪಕ್ ನಂಬಿಯಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net