ಮಹಿಳಾ ಸಬಲೀಕರಣಕ್ಕೆ ಸಾಧನೆ ಸಾಕ್ಷಿ : ಉದಯ ಕುಮಾರ್ ಗೌಡ ಅಭಿಮತ

New Project (2)
Published on

ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ

ಮಹಿಳಾ ಸಬಲೀಕರಣದ ಮಹತ್ವ ಪೂರ್ಣ ಸಾಧನೆಗೆ ಕೌಕ್ರಾಡಿ ಮಿಲನ ಸಂಜೀವಿನಿ ಟಕ ಸಾಕ್ಷಿಯಾಗಿದೆ. ಕೌಕ್ರಾಡಿ ಗ್ರಾಮ ಪಂಚಾಯಿತಿನ ಅವಿಭಾಜ್ಯ ಅಂಗದಂತೆ ಕೆಲಸ ಮಾಡುತ್ತಿರುವ ಈ ಘಟಕ, ಗ್ರಾಮ ನೈರ್ಮಲ್ಯದೊಂದಿಗೆ ಗ್ರಾಮೀಣ ಮಹಿಳೆಯರ ಜೀವನೋಪಾಯ ಸಂವರ್ಧನೆಗೆ ಸಹಾಯಕವಾಗುವ ಕಾರ್ಯಕ್ರಮಗಳ ಮೂಲಕ ಪಂಚಾಯಿತಿ ಅಭಿವೃದ್ಧಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾನೀಯ ಎಂದು ಕೌಕ್ರಾಡಿ ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಗೌಡ ಹೇಳಿದರು.

ಕೌಕ್ರಾಡಿ ಗ್ರಾಪಂ ಮಿಲನ ಸಂಜೀವಿನಿ ಒಕ್ಕೂಟ ಮಹಾಸಭೆಯಲ್ಲಿ ಮಂಗಳವಾರ ಮಾತನಾಡಿದರು.

ಒಕ್ಕೂಟ ಅಧ್ಯಕ್ಷೆ ಪ್ರತಿಭಾ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಸದಸ್ಯರಿಗಾಗಿ ಪೌಷ್ಟಿಕ ಆಹಾರ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಏರ್ಪಡಿಸಲಾಯಿತು. ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಪಿಡಿಒ ಶಾಲಿನಿ, ಕಾರ್ಯದರ್ಶಿ ದೇವಿಕಾ, ತಾಲೂಕು ಸಂಪನ್ಮೂಲ ವ್ಯಕ್ತಿ ಉದ್ಯೋಗಶೀಲತೆ ಮತ್ತು ಉತ್ತೇಜನ ಅಧಿಕಾರಿ ರವ್ಯಾ, ಗ್ರಾಪಂ ಸದಸ್ಯರಾದ ರೋಹಿ ಇಚ್ಲಂಪಾಡಿ, ಹನೀಫ್, ಭವಾನಿ, ಸವಿತಾ. ಎಸ್., ಶೈಲಾ ಮೊದಲಾದವರಿದ್ದರು. ಪ್ರತಿಭಾ ಸ್ವಾಗತಿಸಿದರು. ಕಾರ್ಯದರ್ಶಿ ಅಮಿತಾ ವರದಿ ಮಂಡಿಸಿದರು. ಕೋಶಾಧಿಕಾರಿ ಸುಪ್ರಿತಾ ಜಮಾ ಖರ್ಚಿನ ವಿವರ ನೀಡಿದರು. ಸ್ವರ್ಣಲತಾ ನಿರೂಪಿಸಿದರು. ಚಂದ್ರಿಕಾ ವಂದಿಸಿದರು.

--------ೆಟೋ--------

ಕೆಕೆಡಿ-20-ಆಗಸ್ಟ್-ಕೌಕ್ರಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net