

ಸುಳ್ಯ: ಸುಳ್ಯ ವಿಶ್ವ ಹಿಂದು ಪರಿಷದ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ ವಿಶ್ವ ಹಿಂದು ಪರಿಷದ್ ಸ್ಥಾಪನಾ ದಿನಾಚರಣೆಯ ಪ್ರಯುಕ್ತ 11ನೇ ವರ್ಷದ ಮೊಸರು ಕುಡಿಕೆಯ ಆಮಂತ್ರಣ ಪತ್ರ ಬಿಡುಗಡೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಮಂಗಳವಾರ ನಡೆಯಿತು.
ಆಮಂತ್ರಣ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ, ಸೆ.2ರಂದು ನಡೆಯಲಿರುವ ಮೊಸರು ಕುಡಿಕೆ ಉತ್ಸವ ಹಾಗೂ ವೀರ ಯುವಕರಿಂದ ಅಟ್ಟಿ ಮಡಿಕೆ ಒಡೆಯುವ ಶೋಭಾಯಾತ್ರೆ ಸುಳ್ಯದ ಪ್ರಮುಖ ರಸ್ತೆ ಮೂಲಕ ಸಾಗಿ ಚೆನ್ನಕೇಶವ ದೇವಸ್ಥಾನ ಮುಂಭಾಗದಲ್ಲಿ ಧಾರ್ಮಿಕ ಸಭೆ ಸಂಜೆ ನಡೆಯಲಿದೆ ಎಂದರು.
ಸುಳ್ಯ ದಸರಾ ಉತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಸುಳ್ಯ ವಿಶ್ವ ಹಿಂದು ಪರಿಷದ್ ಅಧ್ಯಕ್ಷ ಸೋಮಶೇಖರ ಪೈಕ, ಮೊಸರು ಕುಡಿಕೆ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯಾದವ್, ಉಪಾಧ್ಯಕ್ಷ ಸುನಿಲ್ ಕೇರ್ಪಳ, ದೇವಿಪ್ರಸಾದ್ ಅತ್ಯಾಡಿ, ಕಾರ್ಯದರ್ಶಿ ಪಾರ್ವತಿ ಕುಂಚಡ್ಕ, ರಾಜೇಶ್ ಬೇರಿಕೆ, ಕೋಶಾಧಿಕಾರಿ ನವೀನ್ ಎಲಿಮಲೆ, ವ್ಯವಸ್ಥಾ ಪ್ರಮುಖ ವಿನಯ್ ಪಾಡಾಜೆ, ರಾಜೇಶ್ ಕಲ್ಲುಮುಟ್ಟು, ಮಾತೃಶಕ್ತಿ ಸಂಯೋಜಕಿ ರೀನಾ ಚಂದ್ರಶೇಖರ, ದುರ್ಗಾವಾಹಿನಿ ಸಂಯೋಜಕಿ ವಿಶಾಲ ಸೀತಾರಾಮ, ಹಿಂದು ಮುಖಂಡರಾದ ಸುರೇಶ್ ಕಣೆಮರಡ್ಕ, ರಾಜೇಶ್ ರೈ ಮೇನಾಲ, ವರ್ಷಿತ್ ಚೊಕ್ಕಾಡಿ, ಉಪೇಂದ್ರ ನಾಯಕ್, ರಜತ್ ಅಡ್ಯಾರ್, ರಾಜು ಪಂಡಿತ್, ಸತೀಶ್ ಕೆ.ಜಿ., ಸನತ್ ಆಗ್ರೋ ಸುಳ್ಯ, ಸುನಿಲ್ ರೈ ಮೇನಾಲ, ಮನೋಜ್ ಕಲ್ಲುಮುಟ್ಲು, ಅಮೃತ್ ಕಾಂತಮಂಗಲ, ಪ್ರಮೋದ್ ಮಜಿಕೋಡಿ, ಅಶೋಕ ಅಡ್ಕಾರು, ಅರ್ಜುನ್ ತೊಡಿಕಾನ, ರೂಪೇಶ್ ಪೂಜಾರಿಮನೆ, ಪ್ರಕಾಶ್ ಜಯನಗರ, ಗಿರೀಶ್ ಅತ್ತೂರು, ಉಮೇಶ್ ಸರಳಿಕುಂಜ, ಕಿರಣ್ ಜಯನಗರ, ಮಿಥುನ್, ಭೀಮ್ ರಾಮ್ ಪಟೇಲ್ ಉಪಸ್ಥಿತರಿದ್ದರು.