ವಿಟ್ಲ: ಕಾರೊಂದು ಚಾಲಕನ ನಿಯಂತ್ರಣ ಕಳೆದು ಅಂಗಡಿ ಮೇಲೆ ಅಪ್ಪಳಿಸಿದ ಪರಿಣಾಮ ಒಬ್ಬ ಗಾಯಗೊಂಡು ಅಂಗಡಿ ಸಂಪೂರ್ಣವಾಗಿ ಧ್ವಂಸಗೊಂಡ ಘಟನೆ ವಿಟ್ಲ-ಕಾಸರಗೋಡು ರಸ್ತೆಯ ಕಾಶಿಮಠ ಎಂಬಲ್ಲಿ ನಡೆದಿದೆ.
ಉಕ್ಕುಡ ಕಡೆಯಿಂದ ಬಂದ ಇಕೋ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಯೋಗೀಶ ಕಾಶಿಮಠ ಅವರಿಗೆ ಸೇರಿದ ಅಂಗಡಿಗೆ ಅಪ್ಪಳಿಸಿ ನುಗ್ಗಿದೆ. ಇದರಿಂದ ಅಂಗಡಿ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಅಂಗಡಿಯಲ್ಲಿದ್ದ ಬೆಲೆಬಾಳುವ ವಸ್ತುಗಳು ಹಾನಿಗೊಂಡಿದೆ. ಕಾರು ಚಾಲಕ ಕಂಠಪೂರ್ತಿ ಮದ್ಯ ಕುಡಿದು ಕಾರು ಚಲಾಯಿಸಿದ ಪರಿಣಾಮ ಕಾರು ರಸ್ತೆಯಿಂದ ನೇರವಾಗಿ ಬದಿಗೆ ಸರಿದು ಅಂಗಡಿ ಮೇಲೆ ಎರಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.