ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಮೊಸರು ಕುಡಿಕೆ ಸಮಿತಿ ವತಿಯಿಂದ ಮಂಗಳವಾರ ಮೊಸರು ಕುಡಿಕೆ ಉತ್ಸವ ಜರುಗಿತು.
ಶ್ರೀ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯಕ್ ಉದ್ಘಾಟಿಸಿದರು. ವನಿತಾ ಭಜನಾ ತಂಡದಿಂದ ಭಜನೆ, ಶ್ರೀ ಕಾಳಿಕಾಂಬಾ ಯಕ್ಷಗಾನ ಮಂಡಳಿಯಿಂದ ತಾಳಮದ್ದಳೆ, ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು. ಪಿರಮಿಡ್ ರಚನೆಯೊಂದಿಗೆ ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ಹುರುಪಿನಿಂದ ಭಾಗವಹಿಸಿದರು. ವಿವಿಧ ಭಜನಾ ತಂಡಗಳ ನೃತ್ಯ, ಮೆರವಣಿಗೆಯ ಶೋಭೆ ಹೆಚ್ಚಿಸಿತು. ಮಕ್ಕಳು ಕೃಷ್ಣವೇಷಧಾರಿಗಳಾಗಿ ಗಮನಸೆಳೆದರು.
ವಿಹಿಂಪ ಮುಂದಾಳು ಸುದರ್ಶನ್, ಬಜರಂಗದಳದ ಮಹೇಶ್ ಬಜತ್ತೂರು, ಮಾಜಿ ಶಾಸಕ ಸಂಜೀವ ಮಠಂದೂರು, ಕರುಣಾಕರ ಸುವರ್ಣ, ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಅತ್ರಮಜಲು, ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಜೈನ್, ಪದಾಧಿಕಾರಿಗಳಾದ ಲೋಕೇಶ್ ಜೈನ್, ವಿಶ್ವನಾಥ ಶೆಟ್ಟಿ ಕಂಗ್ವೆ, ಧನಂಜಯ ನಟ್ಟಿಬೈಲ್, ಸಂತೋಷ್ ಅಡೆಕ್ಕಲ್, ಡಾ.ರಾಜಾರಾಮ ಕೆ.ಬಿ, ಸುನಿಲ್ ದಡ್ಡು, ಎನ್.ಉಮೇಶ್ ಶೆಣೈ, ಯಶವಂತ ಪೈ, ಸಾಜ ರಾಧಾಕೃಷ್ಣ ಆಳ್ವ, ಹರೀಶ್ ನಾಯಕ್ ನಟ್ಟಿಬೈಲ್, ಅಶೋಕ್ ಕುಮಾರ್ ರೈ, ಹರೀಶ್ ಭಂಡಾರಿ, ಉಷಾಚಂದ್ರ ಮುಳಿಯ, ರವಿನಂದನ್ ಹೆಗ್ಡೆ, ನಾಗೇಶ್ ಪ್ರಭು ಮೊದಲಾದವರು ಭಾಗವಹಿಸಿದ್ದರು.