ದೇಹದಲ್ಲಿ ಸಾಕಷ್ಟು ನೀರು ಇದ್ದರೆ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಡಿಹೈಡ್ರೇಷನ್ ಆದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯ ವಿಚಾರದಲ್ಲಿ ಮೂತ್ರದ ಬಣ್ಣವು ಕೂಡ ಪ್ರಮುಖ ಪಾತ್ರವಹಿಸುತ್ತದೆ. ಕೆಲವರಿಗೆ ಮುಂಜಾನೆ ಹಳದಿ ಬಣ್ಣದಲ್ಲಿ ಮೂತ್ರವಿರುತ್ತದೆ. ಈ ಹಳದಿ ಬಣ್ಣದ ಮೂತ್ರದ ಹಿಂದೆ ಕೆಲ ಆರೋಗ್ಯ ಸಮಸ್ಯೆಗಳಿರುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಳದಿ ಬಣ್ಣದ ಮೂತ್ರಕ್ಕೆ ಕಾರಣಗಳೇನು? ಇದನ್ನು ತಪ್ಪಿಸುವುದು ಹೇಗೆ ಎಂಬುದನ್ನು ನಾವೀಗ ನೋಡೋಣ.
ದೇಹದಲ್ಲಿ ನೀರಿನ ಕೊರತೆಯಿರುವಾಗ ಮೂತ್ರವು ಹಳದಿ ಬಣ್ಣವನ್ನು ಹೊಂದಿರುತ್ತದೆ. ಅಲ್ಲದೆ, ಮೂತ್ರಪಿಂಡದಲ್ಲಿ ಕಲ್ಲು ಇದ್ದಾಗಲೂ ಬೆಳಗಿನ ಮೂತ್ರವು ಹಳದಿ ಬಣ್ಣವನ್ನು ಹೊಂದಿರುತ್ತದೆ. ಇಂತಹ ಸ್ಥಿತಿಯಲ್ಲಿ ಜನನಾಂಗದ ಪ್ರದೇಶದಲ್ಲಿ ನೋವು ಮತ್ತು ಉರಿಯೂತದ ಜೊತೆಗೆ ಮೂತ್ರದ ಬಣ್ಣದಲ್ಲಿ ಬದಲಾವಣೆಯಾಗುತ್ತದೆ.
ಗರ್ಭಿಣಿಯರು ಸಹ ಬೆಳಿಗ್ಗೆ ಹಳದಿ ಮೂತ್ರವನ್ನು ಹೊಂದಿರುತ್ತಾರೆ. ಕರುಳಿನ ಸಮಸ್ಯೆಗಳಿದ್ದಾಗಲೂ ಮೂತ್ರವು ಹಳದಿ ಬಣ್ಣವನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಒಬ್ಬ ವ್ಯಕ್ತಿಯು ಮೂತ್ರದ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುವಾಗ ಕೆಲವು ಔಷಧಿಗಳನ್ನು ತೆಗೆದುಕೊಂಡಾಗಲೂ ಮೂತ್ರವು ಬಣ್ಣವನ್ನು ಬದಲಾಗುತ್ತದೆ
ಈ ಮೇಲಿನ ಕಾರಣಗಳಿಂದ ಮೂತ್ರದ ಬಣ್ಣ ಹಳದಿಯಾಗಿದ್ದರೆ, ವೈದ್ಯರ ಸಲಹೆಯನ್ನು ಹೊರತುಪಡಿಸಿ, ಕೆಲವು ಸಲಹೆಗಳನ್ನು ಸರಿಯಾಗಿ ಪಾಲಿಸಿದರೆ ಸಮಸ್ಯೆಯಿಂದ ಬೇಗ ಮುಕ್ತಿ ಪಡೆಯಬಹುದು.
ಬಹುಮುಖ್ಯವಾಗಿ ಸಾಕಷ್ಟು ನೀರು ಕುಡಿಯಬೇಕು. ನಿಮಗೆ ಬಾಯಾರಿಕೆಯಾದಾಗ ಮಾತ್ರವಲ್ಲ, ನಿಯಮಿತವಾಗಿ ನೀರನ್ನು ಕುಡಿಯಲು ಮರೆಯದಿರಿ. ದಿನಕ್ಕೆ ಕನಿಷ್ಠ ಐದು ಲೀಟರ್ ನೀರು ಕುಡಿಯಿರಿ. ಒಂದೇ ಬಾರಿಗೆ ಅಲ್ಲ, ಬೆಳಿಗ್ಗೆ ಒಂದು ಲೀಟರ್ ಮತ್ತು ಊಟದ ಮೊದಲು ಒಂದು ಗ್ಲಾಸ್ ಕುಡಿಯಿರಿ. ಊಟ ಮಾಡುವಾಗ ನೀರು ಕುಡಿಯಬೇಡಿ. ಊಟವಾದ ಒಂದು ಗಂಟೆಯ ನಂತರ ನೀವು ಮತ್ತೆ ನೀರನ್ನು ಕುಡಿಯಲು ಪ್ರಾರಂಭಿಸಬೇಕು.
ವಿಟಮಿನ್ ಸಿ ಅನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ವಿಟಮಿನ್ ಸಿ ಉತ್ತಮ ವಿಟಮಿನ್ ಆಗಿದ್ದು, ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈ ಹಣ್ಣುಗಳನ್ನು ತಿನ್ನುವುದು ತ್ವಚೆಗೂ ಒಳ್ಳೆಯದು. ಆಹಾರದಲ್ಲಿ ನಿಂಬೆಯನ್ನು ಸೇರಿಸುವುದು, ಪೇರಲ ಹಣ್ಣು ಸೇವನೆ, ಮೊಸರು ಹಾಗೂ ಗ್ರೀನ್ ಟೀ ಕೂಡ ಹಳದಿ ಮೂತ್ರದ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಎರಡನೇ ಮದುವೆ ವದಂತಿಯ ನಡುವೆಯೇ ಮಹತ್ವದ ಘೋಷಣೆ ಮಾಡಿದ ಸಾನಿಯಾ ಮಿರ್ಜಾ!
ವಿಶ್ವದ ಅತಿ ದುಬಾರಿ ನೀರು ಕುಡಿಯುತ್ತಾರಾ ನೀತಾ ಅಂಬಾನಿ?! ಬೆಲೆ ಕೇಳಿದ್ರೆ ಹುಬ್ಬೇರುತ್ತೆ