More

    ರಾಜ್ಯದಲ್ಲಿ ಇವತ್ತೊಂದೇ ದಿನ 517 ಮಂದಿ ಕರೊನಾಗೆ ಬಲಿ; ಕರ್ನಾಟಕದಲ್ಲಿ ಇದುವರೆಗೆ 20 ಸಾವಿರಕ್ಕೂ ಅಧಿಕ ‘ಕೋವಿಡ್ ಡೆತ್’

    ಬೆಂಗಳೂರು: ದೇಶಾದ್ಯಂತ ಕರೊನಾ ಪರಿಸ್ಥಿತಿ ಕಗ್ಗಂಟಾಗಿಯೇ ಮುಂದುವರಿದಿದ್ದು, ಇವತ್ತೊಂದೇ ದಿನ ರಾಜ್ಯದಲ್ಲಿ 500ಕ್ಕೂ ಅಧಿಕ ಮಂದಿ ಕೋವಿಡ್​-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಕೋವಿಡ್​ನಿಂದಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ 20 ಸಾವಿರ ದಾಟಿದೆ.

    ರಾಜ್ಯದಲ್ಲಿ ಕರೊನಾ ಕುರಿತ ಬುಧವಾರದ ಬುಲೆಟಿನ್​ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 39,998 ಮಂದಿಯಲ್ಲಿ ಕೋವಿಡ್​-19 ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಸೋಂಕಿಗೆ ಒಳಗಾಗಿರುವವರ ಇದುವರೆಗಿನ ಸಂಖ್ಯೆ 20,53,191ಕ್ಕೆ ತಲುಪಿದೆ.

    ಇದನ್ನೂ ಓದಿ: ಅಪ್ಪ-ಮಗ ಇಬ್ಬರೂ ಕರೊನಾಗೆ ಬಲಿ; ಸೋಂಕಿಗೆ ಒಳಗಾಗಿರುವ ಮತ್ತೊಬ್ಬ ಮಗನ ಪರಿಸ್ಥಿತಿ ಚಿಂತಾಜನಕ..

    ಆದರೆ ಸದ್ಯ ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 5,92,182 ಮಾತ್ರ. ಇನ್ನು ಒಟ್ಟಾರೆ ಸೋಂಕಿತರ ಪೈಕಿ ಇದುವರೆಗೆ 14,40,621 ಮಂದಿ ಗುಣಮುಖರಾಗಿದ್ದು, ಕಳೆದ 24 ಗಂಟೆಗಳಲ್ಲೇ 34,752 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಆದರೆ ಬುಧವಾರ ಒಂದೇ ದಿನ 517 ಮಂದಿ ಕರೊನಾಗೆ ಬಲಿಯಾಗಿದ್ದು, ಇದುವರೆಗೆ ಕರೊನಾ ಸೋಂಕಿನಿಂದಾಗಿ 20,368 ಮಂದಿ ಸಾವಿಗೀಡಾಗಿದ್ದಾರೆ.

    ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

    ಶವಗಳು ಹುಟ್ಟುಹಾಕಿದ ಚಿಂತೆ!?: ಕರೊನಾ ಸೋಂಕು ಹರಡುವಿಕೆ ಬಗ್ಗೆ ಕಾಡುತ್ತಿವೆ ಈ 2 ಪ್ರಮುಖ ಪ್ರಶ್ನೆಗಳು!

    ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts