ಮನೆಯಲ್ಲಿ ಅಡಗಿ ಕುಳಿತಿದ್ದ 50ಕ್ಕೂ ಹೆಚ್ಚು ಹಾವಿನಮರಿ ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು

snake
Published on

ರೋಹ್ತಾಸ್: ಮನೆಯೊಂದರ ಗೋಡೆಯ ಬಳಿ 50ಕ್ಕೂ ವಿಷಕಾರಿ ಹಾವುಗಳು ಪತ್ತೆಯಾಗಿರುವ ಘಟನೆ ಬಿಹಾರದ ರೋಹ್ತಾಸ್​​ನ ಖುರ್ದ್​ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ತಾಯಿಯೊಂದಿಗೆ ಕಲಹ: ಸೂಜಿಯಿಂದ ಹತ್ಯೆಗೈದ ಮಗ

ಗ್ರಾಮದ ಕೃಪಾ ನಾರಾಯಣ ಪಾಂಡೆ ಎಂಬುವವರ ಮನೆ 75 ವರ್ಷಗಳಷ್ಟು ಹಳೆಯದಾಗಿದ್ದು, ಗೋಡೆಯೊಂದರಿಂದ ಒಂದೊಂದಾಗಿ ಹಾವುಗಳು ಹೊರಬರಲು ಪ್ರಾರಂಭಿಸಿದವು. ನಂತರ ಮನೆಯವರು ಹೊರಕ್ಕೆ ಬಂದು ನೋಡಿದಾಗ ಅರ್ಧ ಹಾವುಗಳು ಹರಿದಾಡುತ್ತಿರುವುದನ್ನು ನೋಡಿ ಗಾಬರಿಯಾಗಿ ಅಕ್ಕಪಕ್ಕದವರನ್ನು ಕರೆಸಿ ಸುಮಾರು 25 ಹಾವುಗಳನ್ನು ಸಾಯಿಸಿದ್ದಾರೆ.

ಇಷ್ಟೊಂದು ಸಂಖ್ಯೆಯಲ್ಲಿ ಹಾವುಗಳು ಒಂದೆಡೆ ಸೇರಿದ್ದರಿಂದ ಗ್ರಾಮಸ್ಥರು ಗಾಬರಿಯಾಗಿದ್ದು, ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದಾರೆ. ಇವುಗಳ ಸಂಖ್ಯೆ ಎಷ್ಟಿತ್ತೆಂದರೆ, ಜಿಲ್ಲೆಯ ಮೂರೂ ಉಪವಿಭಾಗಗಳ ಅರಣ್ಯ ಇಲಾಖೆಯ ರಕ್ಷಣಾ ತಂಡ ಈ ಹಾವುಗಳ ರಕ್ಷಣೆಗಾಗಿ ಗ್ರಾಮಕ್ಕೆ ಆಗಮಿಸಿತ್ತು.

ಇದನ್ನೂ ಓದಿ: ಪ್ರಯಾಣಿಕರಿಗೆ ಸಿಹಿ ಸುದ್ದಿ: ಎಲ್ಲ ಎಸಿ ರೈಲುಗಳ ಟಿಕೆಟ್​ ದರ ಕಡಿತ

ಮನೆಯ ಇಟ್ಟಿಗೆ ಗೋಡೆಯನ್ನು ಒಡೆದು ಸುಮಾರು 30 ಹಾವುಗಳನ್ನು ರಕ್ಷಿಸಲಾಗಿದೆ. ಹಿಡಿದ ಹಾವುಗಳು ಚಿಕ್ಕದಾಗಿದ್ದರೂ ಅವು ವಿಷಕಾರಿಯಾಗಿವೆ. ಸುಮಾರು ಹನ್ನೆರಡು ಹಾವುಗಳು ಗಾಯಗೊಂಡಿವೆ. ಚಿಕಿತ್ಸೆ ನಂತರ, ಎಲ್ಲವನ್ನೂ ಅರಣ್ಯಕ್ಕೆ ಬಿಡಲಾಗುವುದು ಎಂದು ಸ್ನೇಕ್ ಸೇವರ್ ಅಮರ್ ಗುಪ್ತಾ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಕೃಪಾ ಪಾಂಡೆ 1955ರಲ್ಲಿ ಮನೆ ಕಟ್ಟಿಸಿ ಇಲ್ಲಿ ವಾಸವಾಗಿದ್ದು, ನಾವು ಈ ಹಿಂದೆ ಇಂತಹ ಘಟನೆಯನ್ನು ನೋಡಿರಲಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net