ಒಂದೇ ದಿನ 200 ಸಲಿಂಗ ಜೋಡಿಗಳ ಮದುವೆ! ಸಲಿಂಗ ವಿವಾಹಕ್ಕೆ ಅವಕಾಶ…Same Gender Couples Married

thailand

Same Gender Couples Married:  ಥೈಲ್ಯಾಂಡ್‌ನಲ್ಲಿ ಸಲಿಂಗ ವಿವಾಹಗಳನ್ನು ಗುರುತಿಸುವ ಮಸೂದೆಯನ್ನು ಅಂಗೀಕರಿಸಲಾಗಿದೆ. ಇದನ್ನು ಆಚರಿಸಲು, ಸುಮಾರು 200 ಸಲಿಂಗ ದಂಪತಿ  ಒಂದೇ ದಿನದಲ್ಲಿ ವಿವಾಹವಾದರು.

ಜನವರಿ 23, 2025 ರಂದು, ಥೈಲ್ಯಾಂಡ್‌ನಲ್ಲಿ ಸಲಿಂಗ ವಿವಾಹಗಳನ್ನು ಗುರುತಿಸುವ ಮಸೂದೆ ಜಾರಿಗೆ ಬಂದಿತು. ಈ ಮಸೂದೆಯನ್ನು ಮಾರ್ಚ್ 2024 ರಲ್ಲಿ ಪರಿಚಯಿಸಲಾಯಿತು ಮತ್ತು ಈಗ ಬಹುಮತದೊಂದಿಗೆ ಅಂಗೀಕರಿಸಲಾಗಿದೆ.  ಥಾಯ್ಲೆಂಡ್‌ನಲ್ಲಿ ಸಲಿಂಗಪ್ರೇಮ ವಿವಾಹ ಕಾಯ್ದೆ ಜಾರಿಗೆ ಬಂದಿದ್ದು, ಇದರೊಂದಿಗೆ, ಥೈಲ್ಯಾಂಡ್ ಸಲಿಂಗಪ್ರೇಮ ವಿವಾಹವನ್ನು ಅಂಗೀಕರಿಸಿದ ಆಗ್ನೇಯ ಏಷ್ಯಾದ ಮೊದಲ ದೇಶ ಮತ್ತು ಇಡೀ ಏಷ್ಯಾದಲ್ಲಿ ಮೂರನೇ ರಾಷ್ಟ್ರವಾಗಿದೆ. ಏಷ್ಯಾದಲ್ಲಿ ಮೊದಲು, ನೇಪಾಳ ಮತ್ತು ತೈವಾನ್ ಸಲಿಂಗಪ್ರೇಮ ವಿವಾಹವನ್ನು ಮಾನ್ಯಗೊಳಿಸಿತ್ತು. ಈಗ ಥೈಲ್ಯಾಂಡ್‌ನಲ್ಲಿ ವಿವಾಹ ಸಮಾನತೆಯ ಕಾಯಿದೆಗೆ ಕಾನೂನು ಮಾನ್ಯತೆ ಸಿಕ್ಕಿದೆ.

ಥೈಲ್ಯಾಂಡ್‌ನಲ್ಲಿ ಪರಿಚಯಿಸಲಾದ ಈ ಸಮಾನತೆಯ ವಿವಾಹ ಮಸೂದೆಯು ಕೆಲವು ಪದಗಳನ್ನು ಬದಲಾಯಿಸಿದೆ. ಅಂದರೆ, ಹಿಂದೆ ಗಂಡು ಮತ್ತು ಹೆಣ್ಣು ಎಂದು ಬಳಸಲಾದ ಪದಗಳನ್ನು  ಬದಲಾಯಿಸಲಾಗಿದೆ. ಅದೇ ರೀತಿ ಪತಿ-ಪತ್ನಿ ಎಂಬ ಪದವನ್ನು ಮದುವೆಯಾದ ಜೋಡಿ ಎಂದು ಬದಲಾಯಿಸಿದೆ. ಗಂಡು…ಗಂಡನ್ನು.. ಹೆಣ್ಣು.. ಹೆಣ್ಣನ್ನು ಮದುವೆಯಾಗಬಹುದಾಗಿದೆ.

ಥೈಲ್ಯಾಂಡ್‌ನಲ್ಲಿ ಸುಮಾರು 20 ವರ್ಷಗಳಿಂದ LGBTQ+ ಸಮುದಾಯವು ಸಲಿಂಗಪ್ರೇಮ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೆಂದು ಒತ್ತಾಯಿಸುತ್ತಿದೆ, ಇದಕ್ಕಾಗಿ ಅನೇಕ ಹೋರಾಟಗಳೂ ನಡೆದಿವೆ ಅನ್ನೋದು ಗಮನಾರ್ಹ. ಹೀಗಾಗಿ ಈ ಹೋರಾಟದ ಫಲವಾಗಿ ಇಂದು ಥಾಯ್ಲೆಂಡ್‌ನಲ್ಲಿ ಸಲಿಂಗ ಪ್ರೇಮ ವಿವಾಹ ಅಧಿಕೃತವಾಗಿ ಕಾನೂನು ಮಾನ್ಯತೆಯ ಮೂಲಕ ಗುರುತಿಸಲ್ಪಟ್ಟಿದೆ. ಈಗ ಥೈಲ್ಯಾಂಡ್‌ನಲ್ಲಿ, 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಒಂದೇ ಲಿಂಗದ ಯಾರಾದರೂ ಮದುವೆಯಾಗಬಹುದು.

ಥಾಯ್ ಸರ್ಕಾರವು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿರುವುದನ್ನು ಆಚರಿಸಲು 200 ಕ್ಕೂ ಹೆಚ್ಚು ಸಲಿಂಗ ದಂಪತಿ ಒಂದೇ ದಿನದಲ್ಲಿ ವಿವಾಹವಾಗಿದ್ದಾರೆ.

ಥೈಲ್ಯಾಂಡ್ ಸಲಿಂಗ ಆಕರ್ಷಣೆಗಳ ಪರವಾಗಿ ಶಾಸನವನ್ನು ಅಂಗೀಕರಿಸಿದೆ, ಯುನೈಟೆಡ್ ಸ್ಟೇಟ್ಸ್ನಲ್ಲಿ ಇದಕ್ಕೆ ವಿರುದ್ಧವಾಗಿ ಜಾರಿಗೊಳಿಸಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಕೇವಲ ಎರಡು ಲಿಂಗಗಳಿವೆ, ಗಂಡು ಮತ್ತು ಹೆಣ್ಣು ಎಂದು ಹೇಳಿದ್ದಾರೆ. ಇದರಿಂದಾಗಿ ಅಮೆರಿಕದ ಎಲ್ ಜಿಬಿಟಿ ಸಮುದಾಯದವರು ಬೆಚ್ಚಿಬಿದ್ದಿದ್ದಾರೆ.

1.2 ಲಕ್ಷ ಗೋಸುಂಬೆಗಳನ್ನು ಕೊಲ್ಲಲು ಸರ್ಕಾರ ಆದೇಶ! Taiwan Planned To Kill 1.2 Lakh Chameleons

Share This Article

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ,…

ಮಾವಿನಹಣ್ಣು ತಿಂದು ಈಸಿಯಾಗಿ ದೇಹದ ತೂಕ ಇಳಿಸಬಹುದು! ಹೊಸ ಅಧ್ಯಯನ.. mango

mango: ತೂಕ ಇಳಿಸಿಕೊಳ್ಳಲು ಬಯಸುವ ಜನರು ಹೆಚ್ಚಾಗಿ ಮಾವಿನಹಣ್ಣನ್ನು ತಪ್ಪಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನವು ತೂಕ…