ಮಕ್ಕಳಿಗೆ ಆತ್ಮಸ್ಥೆರ್ಯದೊಂದಿಗೆ ನೈತಿಕ ಶಿಕ್ಷಣ

aba
Published on

ಸಿದ್ದಾಪುರ: ಆಧುನಿಕ ಭರಾಟೆಯಲ್ಲಿ ಆತ್ಮಸ್ಥೆರ್ಯ ಕಳೆದುಕೊಳ್ಳುತ್ತಿರುವ ಮಕ್ಕಳಿಗೆ ನೈತಿಕ ಶಿಕ್ಷಣ ಅಗತ್ಯ ಎಂದು ಪತ್ರಕರ್ತ ಸತೀಶ ಆಚಾರ್ ಹೇಳಿದರು. ಸಿದ್ದಾಪುರ ಆಚಾರ್ಯಸ್ ಅಕಾಡೆಮಿ ವತಿಯಿಂದ ಸಿದ್ದಾಪುರ ಆನಂತಪದ್ಮನಾಭ ಸಭಾಭವನದಲ್ಲಿ ಇತ್ತೀಚೆಗೆ ಜಿಲ್ಲಾಮಟ್ಟದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಅಬಾಕಸ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳ್ನಾಡು ಹಳೆಯಮ್ಮ ದೈವಸ್ಥಾನ ಟ್ರಸ್ಟಿ ಮಂಜಯ್ಯ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರೋಪ ಸಮಾರಂಭ

ಅಂಪಾರು ಸಂಜಯಗಾಂಧಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆಡಳಿತಾಧಿಕಾರಿ ಚೈತ್ರಾ ಯಡಿಯಾಳ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ನಿವೃತ್ತ ಸೈನಿಕ ಮಧುಸೂದನ್ ಹೆಗ್ಡೆ, ಗುತ್ತಿಗೆದಾರ ಸುರೇಂದ್ರ ಶೆಟ್ಟಿ ಹಾಲಾಡಿ, ಸಭಾ ಭವನದ ಮಾಲೀಕ ರಾಜೇಶ ಉಡುಪ, ಸಹ ಶಿಕ್ಷಕಿ ಸುಧಾ, ಶ್ರುತಿ, ವ್ಯವಸ್ಥಾಪಕ ಪ್ರದೀಪ್ ಆಚಾರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶ್ರೇಯಾ ಪಿ.ಆಚಾರ್ಯ ಸ್ವಾಗತಿಸಿದರು. ಶ್ರುತಿ ಉಡುಪ ಸಹಕರಿಸಿದರು. ಅನಗಾ ಉಡುಪ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net