ಚಾರ್ಮಕ್ಕಿ ಶಾಲೆಗೆ ಬೆಂಚುಗಳ ಹಸ್ತಾಂತರ

cha
Published on

ಆರ್ಡಿ: ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಗೆ ಶ್ರೀ ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆ ವತಿಯಿಂದ ಆರ್ಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪ್ರಾಯೋಜಕತ್ವದಲ್ಲಿ ಡೆಸ್ಕ್, ಬೆಂಚುಗಳ ಹಸ್ತಾಂತರ ನಡೆಯಿತು.

ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ ಉದ್ಘಾಟಿಸಿದರು. ಜನಜಾಗೃತಿ ವೇದಿಕೆ ಬೆಳ್ವೆ ವಲಯಾಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ, ಸದಸ್ಯ ಸುರೇಶ್ ಶೆಟ್ಟಿ ಆರ್ಡಿ, ಸುದರ್ಶನ ಶೆಟ್ಟಿ, ಆರ್ಡಿ ಒಕ್ಕೂಟ ಅಧ್ಯಕ್ಷ ಕೃಷ್ಣ ಪುತ್ರನ್, ಅಲ್ಬಾಡಿ ಒಕ್ಕೂಟ ಅಧ್ಯಕ್ಷ ರವಿಚಂದ್ರ ನಾಯ್ಕ, ಕೃಷಿ ಮೇಲ್ವಿಚಾರಕ ಉಮೇಶ್, ಬೆಳ್ವೆ ವಲಯ ಮೇಲ್ವಿಚಾರಕ ರಾಘವೇಂದ್ರ ಗೌಡ, ಸೇವಾ ಪ್ರತಿನಿಧಿ ಪ್ರಶಾಂತ್ ಗುಮ್ಮೋಲ, ಜಯಶ್ರೀ, ಮಹೇಶ್, ಆರ್ಡಿ ಸಾಮಾನ್ಯ ಸೇವಾ ಕೇಂದ್ರ ಪ್ರತಿನಿಧಿ ಸುಪ್ರೀತಾ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಪ್ರತಿಮಾ, ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net