ಕಾಡೂರು ದೇವಳಕ್ಕೆ ಹೊರೆಕಾಣಿಕೆ ಸಮರ್ಪಣೆ

kon
Published on

ಕೊಕ್ಕರ್ಣೆ: ಕಾಡೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ನಡೆಯಲಿರುವ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ಹಸಿರು ಹೊರೆಕಾಣಿಕೆ ಸಮರ್ಪಣೆಯೊಂದಿಗೆ ಭಕ್ತಿಯ ಹೆಜ್ಜೆ ಅಮ್ಮನೆಡೆಗೆ ಕಾರ್ಯಕ್ರಮ ಜರುಗಿತು.

ಕೊಕ್ಕರ್ಣೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಬಳಿಯಿಂದ ವಿವಿಧ ಭಜನ ತಂಡ, ಟ್ಯಾಬ್ಲೊ, ವೇಷ, ಭೂಷಣಗಳೊಂದಿಗೆ ವೈಭವಪೂರಿತ ಮೆರವಣಿಗೆ ನಡೆಯಿತು.

7ರಂದು ಬ್ರಹ್ಮಕಲಶ ನಡೆಯಲಿದ್ದು, ಮಾರ್ಚ್ 12ರ ತನಕ ನೂತನ ಶಿಲಾಮಯ ಗರ್ಭಗೃಹ, ಸುತ್ತು ಪೌಳಿ, ಸ್ವಾಗತ ಗೋಪುರ ಲೋಕಾರ್ಪಣೆ ಹಾಗೂ ಶ್ರೀ ಅಮ್ಮನವರ, ಶ್ರೀ ವೀರಭದ್ರ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪೂರ್ವಕ ಬ್ರಹ್ಮಕಲಶೋತ್ಸವ, ವರ್ಷಾವಧಿ ಉತ್ಸವ ಮತ್ತು ಸಿರಿ ಸಿಂಗಾರ ಸೇವೆ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net