ಅವರವರ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ನಾಯಕರು : ಸತೀಶ್ ಬೋಳಾರ್ ಬಣ್ಣನೆ

New Project (28)
Published on

ಮೂಡುಬಿದಿರೆ: ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ಅವರವರ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ನಾಯಕರೇ ಆಗಿದ್ದಾರೆ. ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಗೌರವ ನೀಡುವುದು ಎಲ್ಲರ ಕರ್ತವ್ಯ ಎಂದು ರೋಟರಿ ಜಿಲ್ಲೆ 3181 ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಹೇಳಿದರು.

ಮೂಡುಬಿದಿರೆ ಪ್ರೀತಂ ಸಭಾಭವನದಲ್ಲಿ, ಬುಧವಾರ ರಾತ್ರಿ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ 2025-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿಯಾಗಿ ಮಾತನಾಡಿದರು.

ನೂತನ ಅಧ್ಯಕ್ಷ ಹರೀಶ್ ಎಂ.ಕೆ, ಕಾರ್ಯದರ್ಶಿ ಭರತ್ ಶೆಟ್ಟಿ ಹಾಗೂ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಯಿತು. ನಿರ್ಗಮಿತ ಅಧ್ಯಕ್ಷ ಪೂರ್ಣಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ರೋಟರಿ ವಲಯ ಸೇನಾನಿ ಸಿ.ಎಚ್.ಗಫೂರ್, ಅಸಿಸ್ಟೆಂಟ್ ಗವರ್ನರ್ ಉಮೇಶ್ ರಾವ್, ಡಾ.ಹರೀಶ್ ನಾಯಕ್ ಉಪಸ್ಥಿತರಿದ್ದರು.

ಮಹಾವೀರ್ ಜೈನ್ ಪದಗ್ರಹಣ ಅಧಿಕಾರಿಯನ್ನು ಪರಿಚಯಿಸಿದರು. ನೂತನ ಅಧ್ಯಕ್ಷರನ್ನು ಅಮರ್‌ದೀಪ್ ಪರಿಚಯಿಸಿದರು. ನೂತನ ಕಾರ್ಯದರ್ಶಿಯನ್ನು ಜೀವಿತಾ ಶಂಕರ್ ಪರಿಚಯಿಸಿದರು. ಪ್ರಿಯಾ ಅನೂಪ್ ನೂತನ ಸದಸ್ಯರನ್ನು ಪರಿಚಯಿಸಿದರು. ಸಾರಿಕಾ ಬಂಗೇರ ಅಸಿಸ್ಟೆಂಟ್ ಗವರ್ನರ್ ಅವರನ್ನು ಪರಿಚಯಿಸಿದರು. ದೀಪ್ತಿ ಬಾಲಕೃಷ್ಣ ಭಟ್ ವಲಯ ಸೇನಾನಿ ಅವರನ್ನು ಪರಿಚಯಿಸಿದರು. ಶಂಕರ್ ಕೋಟ್ಯಾನ್, ಪ್ರಣಮ್ಯ ಜೈನ್ ಹಾಗೂ ಪ್ರವೀಣ್ ಲೋಬೊ ನಿರೂಪಿಸಿದರು.

ಬುಲೆಟಿನ್ ಬಿಡುಗಡೆ, ಸಹಾಯಹಸ್ತ

10 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಓರ್ವರಿಗೆ ವೀಲ್‌ಚೇರ್, ಗಾಂಧಿನಗರ ಅಂಗನವಾಡಿಗೆ ಸ್ಕೂಲ್ ಬ್ಯಾಗ್, ರೋಗಿಯೊಬ್ಬರ ಡಯಾಲಿಸಿಸ್‌ಗಾಗಿ 10 ಸಾವಿರ ರೂ. ಸಹಾಯಧನ ವಿತರಿಸಲಾಯಿತು. ಐದು ಮಂದಿ ನೂತನ ಸದಸ್ಯರು ಸೇರ್ಪಡೆಗೊಂಡರು. ನಿಕಟಪೂರ್ವ ಅಧ್ಯಕ್ಷ ಪೂರ್ಣಚಂದ್ರ ಜೈನ್, ಕಾರ್ಯದರ್ಶಿ ಹರೀಶ್ ಎಂ.ಕೆ, ಕೋಶಾಧಿಕಾರಿ ಅಜಯ್ ಗ್ಲೆನ್ ಡಿಸೋಜ, ಯಂಗ್ ಅಚೀವರ್ ರಾಜ್ ಬಂಗೇರ, ಅವನಿ ಉಮೇಶ್ ರಾವ್ ಅವರನ್ನು ಗೌರವಿಸಲಾಯಿತು. ರೋಟೌನ್ ಬುಲೆಟಿನ್ ಬಿಡುಗಡೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net