ಪ್ರಸ್ತುತ ದಿನಗಳಲ್ಲಿ ಫೋಟೋಗ್ರಫಿಗೆ ಮಹತ್ವ : ಬಹುಮಾನ ವಿತರಿಸಿ ನಿರ್ಮಾಪಕ ಶೋಧನ್ ಶೆಟ್ಟಿ ಹೇಳಿಕೆ

New Project (27)
Published on

ಕಿನ್ನಿಗೋಳಿ: ಪ್ರಸ್ತುತ ದಿನಗಳಲ್ಲಿ ಫೋಟೋಗ್ರಫಿ ಅತ್ಯಂತ ಮಹತ್ವ ಪಡೆದಿದೆ, ಫೋಟೋಗ್ರಾಫರ್ಸ್‌ನವರು ಸಾಮಾಜಿಕ ಜಾಲತಾಣಕ್ಕೆ ಹತ್ತಿರದವರಾಗಿದ್ದಾರೆ ಎಂದು ನಟ, ನಿರ್ಮಾಪಕ ಶೋಧನ್ ಶೆಟ್ಟಿ ಹೇಳಿದರು.

ಎಸ್ಕೋಡಿ ಪದ್ಮಾವತಿ ಸಭಾಭವನದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ.ಜಿಲ್ಲೆ ಮೂಲ್ಕಿ ವಲಯದ 20ನೇ ವರ್ಷಾಚರಣೆ ಸಮಾರೋಪ ಹಾಗೂ ಕೃಷಿ ಬದುಕಿನ ಫ್ಯಾಷನ್ ಶೋ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದರು.

ಸ್ಪರ್ಧೆಯಲ್ಲಿ ಒಟ್ಟು ಏಳು ತಂಡ ಭಾಗವಹಿಸಿದ್ದು, ಪ್ರಥಮ ಬಹುಮಾನ ಉಡುಪಿ ವಲಯ, ದ್ವಿತೀಯ ಮಂಗಳೂರು ವಲಯ, ತೃತೀಯ ಕಾಪು ವಲಯ ಪಡೆಯಿತು.

ಮೂಲ್ಕಿ ವಲಯದ ಅಧ್ಯಕ್ಷ ಪ್ರಕಾಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಎಸ್.ಕೆ.ಪಿ.ಎ ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್, ಎಸ್.ಕೆ.ಪಿ.ಎ ದ.ಕ. ಉಡುಪಿ ಜಿಲ್ಲಾ ಸಂಚಾಲಕ ಕರುಣಾಕರ್ ಕಾನಂಗಿ, ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ್, ಎಸ್.ಕೆ.ಪಿ.ಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಮೂಲ್ಕಿ ವಲಯದ ನವೀನ್ ಚಂದ್ರ ಅಮೀನ್, ನಾಗೇಶ್ ಬಪ್ಪನಾಡು, ಮೋಹನ್ ರಾವ್, ಹರೀಶ್ ಬಿ.ಕೋಟ್ಯಾನ್, ಶಿವರಾಮ್ ಸುವರ್ಣ ಉಪಸ್ಥಿತರಿದ್ದರು.

ಸುರೇಶ್ ಪದ್ಮನೂರು ಸ್ವಾಗತಿಸಿದರು. ಅರುಣ್ ಉಲ್ಲಂಜೆ ನಿರೂಪಿಸಿದರು. ಮೂಲ್ಕಿ ವಲಯದ ಗೌರವಾಧ್ಯಕ್ಷ ಪ್ರಕಾಶ್ ಕೊಡ್ಮಣ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಯೋಗೀಶ್ ಪಾವಂಜೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net