More

    15 ಸಾವಿರ ರೂ. ದಾನ ಮಾಡಲು ಹೋಗಿ 15 ಲಕ್ಷ ರೂ. ಕಳೆದುಕೊಂಡ ಭೂಪ..! ಎಡವಟ್ಟಾಗಿದ್ದೆಲ್ಲಿ?

    ನವದೆಹಲಿ: ಆನ್ಲೈನ್ ಹಣ ವರ್ಗಾವಣೆ ಮಾಡುವ ವೇಳೆ ಎಷ್ಟೇ ಎಚ್ಚರವಹಿಸಿದರೂ ಸಾಲದು. ಒಂದಂಕಿ ಹೆಚ್ಚು ಕಡಿಮೆ ಆದರೂ ಲಕ್ಷಗಟ್ಟಲೇ ಹಣ ನಿಮ್ಮ ಖಾತೆಯಿಂದ ಜಾರಿ ಹೋಗಬಹುದು. ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ. ದಾನ ಮಾಡಲು ಹೋದ ವ್ಯಕ್ತಿ ಮಾಡಿದ ಸಣ್ಣ ಎಡವಟ್ಟಿನಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಗೋ ಫಂಡ್ ಮೀಗೆ ಹಣ ಡೊನೇಟ್ ಮಾಡಲು ಹೋದ ಮಿಚೆಲ್ ಎಂಬಾತ 12 ಸಾವಿರ ರೂ. ಹಾಕುವ ಬದಲು 12 ಲಕ್ಷ ಹಾಕಿದ್ದು, ಬಳಿಕ ಇಂಗು ತಿಂದ ಮಂಗನಂತಾಗಿದ್ದಾರೆ.

    ಇದನ್ನೂ ಓದಿ: ಈ ನಾಯಿಗಳನ್ನು ಸಾಕಿದರೆ ಕಠಿಣ ಶಿಕ್ಷೆ..! 23 ತಳಿಗಳಿಗೆ ಕೇಂದ್ರ ನಿಷೇಧ.. ಕಾರಣ?

    ವಿದೇಶಗಳಲ್ಲಿ ಗೋ ಫಂಡ್ ಮೀ ಅತ್ಯಂತ ಹೆಚ್ಚು ಪ್ರಚಲಿತದಲ್ಲಿದೆ. ಎನ್‌ಜಿಒ ಮೂಲಕ ಸಂಕಷ್ಟದಲ್ಲಿರುವವರಿಗೆ ಆನ್‌ಲೈನ್ ಮೂಲಕ ಹಣ ಸಂಗ್ರಹಿಸುವ ಅಭಿಯಾನ ಇದಾಗಿದೆ. ವೈದ್ಯಕೀಯ ಸಮಸ್ಯೆಯಿಂದ ಬಳಲುವವರು ನಿರ್ಗತಿಕರು ಸೇರಿದಂತೆ ದುರ್ಬಲ ವರ್ಗದ ನೆರವಿವಾಗಿ ಕೆಲವರು ಆನ್‌ಲೈನ್ ಮೂಲಕ ಹಣ ಸಂಗ್ರಹಿಸಲು ಗೋ ಫಂಡ್ ಮೀ ಎಂಬ ವೆಬ್ ಸೈಟ್ ಮೂಲಕ ಅಭಿಯಾನ ಮಾಡುತ್ತಾರೆ. ಇದಕ್ಕೆ ಸಾವಿರಾರು ಜನ ಸಹಾಯ ಮಾಡುತ್ತಾರೆ. ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡುತ್ತಾರೆ.

    ಯೂಟ್ಯೂಬ್‌ಗಳಲ್ಲಿ ವಿಡಿಯೋ ನೋಡುತ್ತಿರುವಾಗ ಇಂತಹ ಗೋ ಫಂಡ್ ಮೀ ರೀತಿಯ ಜಾಹೀರಾತುಗಳನ್ನು ಸಾಕಷ್ಟು ನೋಡಿರುತ್ತೀರಿ. ಹಾಗೆಯೇ ಬಾಂಗ್ಲಾದೇಶದ ಜನರ ಜೀವನಮಟ್ಟವನ್ನು ಸುಧಾರಿಸುವುದಕ್ಕಾಗಿ ಎನ್‌ಜಿಒವೊಂದು ಗೋ ಫಂಡ್ ಮೀ ಅಭಿಯಾನದ ಮೊರೆ ಹೋಗಿದ್ದು, ಅದನ್ನು ನೋಡಿದ ಮಿಚೆಲ್ ಎಂಬಾತ 12,435 ರೂಪಾಯಿಗಳನ್ನು ದಾನ ಮಾಡಲು ಮುಂದಾಗಿದ್ದ. ಆದರೆ ಅದೇನಾಯ್ತೂ ಏನೋ 12,46, 991 ರೂ. ಅವರ ಖಾತೆಯಿಂದ ಕಟ್ ಆಗಿದೆ.

    ಈ ವಿಚಾರವನ್ನುಆತ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪಕ್ಕದ ಮನೆಯವರು ಈ ಚಾರಿಟಿಗೆ ದಾನ ಮಾಡುವಂತೆ ಹೇಳಿದ್ದರು. ಅದರಂತೆ ನಾನು ಗೋ ಫಂಡ್ ಪೇಜ್‌ಗೆ ಹೋಗಿ 150 ಡಾಲರ್ ದಾನ ಮಾಡಲು ಮುಂದಾದೆ. ಆದರೆ ಕೆಲ ಸಮಯದ ನಂತರ ನನಗೆ ನನ್ನ ಕ್ರೆಡಿಟ್‌ ಕಾರ್ಡ್‌ನಿಂದ ಅಸಹಜವೆನಿಸಿದ ಬೃಹತ್ ಮೊತ್ತದ ಹಣ ವರ್ಗಾವಣೆಯಾಗಿದೆ ಎಂಬ ಮೆಸೇಜ್ ಬಂತು. ಗೊಂದಲಕ್ಕೊಳಗಾಗಿ ನಾನು ಸಂದೇಶ ತೆರೆದು ನೋಡಿದಾಗ 150 ಡಾಲರ್ ಬದಲು ನಾನು 15,041 ಡಾಲರ್ ಹಣವನ್ನು ಗೋ ಫಂಡ್ ಮೀಗೆ ವರ್ಗಾಯಿಸಿದ್ದೆ ಎಂದು ಆತ ಹೇಳಿಕೊಂಡಿದ್ದಾನೆ.

    ಸಮಂತಾ ಫಾಲೋವರ್ಸ್ ದಿಕ್ಕು ತಪ್ಪಿಸುತ್ತಿದ್ದಾರೆ.. ವೈದ್ಯರ ಪೋಸ್ಟ್ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts