More

    ಈ ನಾಯಿಗಳನ್ನು ಸಾಕಿದರೆ ಕಠಿಣ ಶಿಕ್ಷೆ..! 23 ತಳಿಗಳಿಗೆ ಕೇಂದ್ರ ನಿಷೇಧ.. ಕಾರಣ?

    ನವದೆಹಲಿ: ಜನರ ಮೇಲೆ ನಾಯಿಗಳ ದಾಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರ ದೇಶದಲ್ಲಿ 23 ತಳಿಯ ಕಾಡುನಾಯಿಗಳ ಸಾಕಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಸಮಂತಾ ಫಾಲೋವರ್ಸ್ ದಿಕ್ಕು ತಪ್ಪಿಸುತ್ತಿದ್ದಾರೆ.. ವೈದ್ಯರ ಪೋಸ್ಟ್ ವೈರಲ್!
    ಪಿಟ್‌ಬುಲ್ ಟೆರಿಯರ್, ಅಮೆರಿಕನ್ ಬುಲ್‌ಡಾಗ್, ರೊಟ್‌ವೀಲರ್ ಮತ್ತು ಮ್ಯಾಸ್ಟಿಫ್ ಸೇರಿದಂತೆ 23 ತಳಿಗಳ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

    ಈಗಾಗಲೇ ಸಾಕುಪ್ರಾಣಿಗಳಾಗಿರುವ ಈ ತಳಿಯ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ ತಳಿ ಅಭಿವೃದ್ಧಿ ತಡೆಯುವಂತೆ ಕೇಂದ್ರ ಸೂಚಿಸಿದೆ.

    ನಾಗರಿಕರು, ನಾಗರಿಕ ವೇದಿಕೆಗಳು ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆಗಳಿಂದ ದೂರುಗಳನ್ನು ಸ್ವೀಕರಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಿಷೇಧಿತ ನಾಯಿಗಳಲ್ಲಿ ಮಿಶ್ರ ಮತ್ತು ಹೈಬ್ರಿಡ್ ತಳಿಗಳಿವೆ. ಅವು ಕ್ರೂರ ಮತ್ತು ಮನುಷ್ಯರಿಗೆ ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ.

    ಅಪಾಯಕಾರಿ ನಾಯಿಗಳು ಇವೇ: ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೋಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್ ಕಂಗಲ್, ಸೆಂಟ್ರಲ್ ಏಷ್ಯನ್ ಶೆಫರ್ಡ್ ಡಾಗ್, ಕಕೇಶಿಯನ್ ಶೆಫರ್ಡ್ ಡಾಗ್ ಸೇರಿವೆ.
    ಇತರ ತಳಿಗಳಲ್ಲಿ ಸೌತ್ ರಷ್ಯನ್ ಶೆಫರ್ಡ್ ಡಾಗ್, ಟೋರ್ನ್ಜಾಕ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ, ಅಕಿಟಾ, ಮ್ಯಾಸ್ಟಿಫ್ಸ್, ಟೆರಿಯರ್‌ಗಳು, ರೊಡೇಸಿಯನ್ ರಿಡ್ಜ್‌ಬ್ಯಾಕ್, ವುಲ್ಫ್ ಡಾಗ್ಸ್, ಕ್ಯಾನರಿ, ಅಕ್ಬಾಶ್ ಡಾಗ್, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ, ಬ್ಯಾಂಡೋಗ್ ಸೇರಿವೆ.

    ಕಠಿಣ ಕ್ರಮ: ನಿಷೇಧಿತ ನಾಯಿಗಳನ್ನು ಸಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸ್ಪಷ್ಟಪಡಿಸಿದೆ.

    ಮೂಡ್​ ಎಕ್ಸ್​, ಹಾಟ್​ ಶಾಟ್ಸ್​ ಸೇರಿ ಭಾರತದಲ್ಲಿ 18 ಓಟಿಟಿ ಪ್ಲಾಟ್‌ಫಾರ್ಮ್‌ಗಳ ನಿಷೇಧ: ಕಾರಣ ಇದೇ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts