More

    ಹಣವಿದ್ದ ಪ್ಯಾಂಟ್​ ಅನ್ನೇ ಎಗರಿಸಿದ ದುಷ್ಕರ್ಮಿಗಳು!

    ಕೊಳ್ಳೇಗಾಲ(ಚಾಮರಾಜನಗರ): ಮನೆಯೊಳಗೆ ಗೋಡೆ ಮೇಲೆ ನೇತು ಹಾಕಿದ್ದ ಪ್ಯಾಂಟ್ ಒಂದನ್ನು ಕಿಟಕಿ ಮೂಲಕವೇ ಖತರ್ನಾಕ್​ ಕಳ್ಳರು ದೋಚಿದ್ದು, ಪ್ಯಾಂಟಿನ ಮಾಲೀಕ 1 ಲಕ್ಷದ 40 ಸಾವಿರ ರೂ. ಕಳೆದುಕೊಂಡಿದ್ದಾರೆ.

    ಅರೆ, ಆ ಒಂದು ಪ್ಯಾಂಟು ಕಳ್ಳತನ ಆಗಿದ್ದಕ್ಕೆ 1.4 ಲಕ್ಷ ರೂ. ನಷ್ಟವಾಯ್ತೆ? ಕಾಸ್ಟ್ಲೀ ಪ್ಯಾಂಟೇ ಎಂದೆಲ್ಲ ಅನ್ನಿಸೋದು ಸಹಜ. ಆದರೆ, ಪ್ಯಾಂಟ್​ ಮಾಲೀಕ ಕಳೆದುಕೊಂಡದ್ದು ಪ್ಯಾಂಟಿನ ಜೇಬಿನಲ್ಲಿಟ್ಟ ಹಣವನ್ನ! ಹೌದು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ನೂರ್​ ಮೊಹಲ್ಲಾದ 6ನೇ ಕ್ರಾಸ್​ ಮನೆಯೊಂದರಲ್ಲಿ ದುಷ್ಕರ್ಮಿಗಳು ಕಿಟಕಿ ಮೂಲಕ ಲಕ್ಷಾಂತರ ರೂ. ಹಣ ಇಟ್ಟಿದ್ದ ಪ್ಯಾಂಟ್​ ಅನ್ನೇ ಎಗರಿಸಿದ್ದಾರೆ.

    ಇದನ್ನೂ ಓದಿರಿ ತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!

    ಸೆಕೆಂಡ್​ ಹ್ಯಾಂಡ್​ ದ್ವಿಚಕ್ರ ವಾಹಗಳ ಡೀಲರ್​ ಆಗಿರುವ ಇಲ್ಲಿನ ನಿವಾಸಿ ಅಪ್ಸರ್​ಪಾಷ, ಬುಧವಾರ ರಾತ್ರಿ 1.4 ಲಕ್ಷ ರೂ. ನಗದನ್ನು ತನ್ನ ಪ್ಯಾಂಟ್​ ಜೇಬಿನಲ್ಲಿಟ್ಟು, ಅದನ್ನು ಮನೆ ಹಣವಿದ್ದ ಪ್ಯಾಂಟ್​ ಅನ್ನೇ ಎಗರಿಸಿದ ದುಷ್ಕರ್ಮಿಗಳು!ಗೋಡೆಯ ಹ್ಯಾಂಗರ್​ನಲ್ಲಿ ನೇತುಹಾಕಿ ಮಲಗಿದ್ದರು. ಗುರುವಾರ ಮುಂಜಾನೆ ದುಷ್ಕರ್ಮಿಗಳು ಕಿಟಕಿ ಮೂಲಕ ಪ್ಯಾಂಟ್​ ಸಮೇತ ಜೇಬಿನಲ್ಲಿದ್ದ ಹಣವನ್ನೂ ಕಳವು ಮಾಡಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಹಣ ಕಳವು ಆಗಿರುವುದು ಗೊತ್ತಾಗಿ ತಕ್ಷಣ ಪೊಲೀಸರಿಗೆ ದೂರು ನೀಡಿದರು.

    ಸ್ಥಳಕ್ಕೆ ಡಿವೈಎಸ್ಪಿ ಎನ್​.ನವೀನ್​ಕುಮಾರ್​, ಸರ್ಕಲ್​ ಇನ್ಸ್​ಪೆಕ್ಟರ್​ ಶೇಖರ್​, ಪಿಎಸ್​ಐಗಳಾದ ಅಶೋಕ್​, ವೀರಭದ್ರಪ್ಪ ಅವರು ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಲೂನ್​ ಶಾಪ್​ನಲ್ಲಿ ಪಿಪಿಇ ಕಿಟ್​ ಧರಿಸಿಯೇ ಹೇರ್​ ಕಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts