

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಆರು ಪದಕಗಳನ್ನು ಗೆದ್ದಿದೆ. ಆದರೆ ಒಂದೇ ಒಂದು ಚಿನ್ನದ ಪದಕ ಸಿಕ್ಕಿಲ್ಲ ಎಂದು ಐಒಸಿ ಅಥ್ಲೀಟ್ ಆಯೋಗದ ಉಪಾಧ್ಯಕ್ಷ ಅಭಿನವ್ ಬಿಂದ್ರಾ ಹೇಳಿದ್ದಾರೆ. ಒಟ್ಟಾರೆ ಪದಕಗಳ ಸಂಖ್ಯೆಯು ನಿರೀಕ್ಷೆಗಿಂತ ಕಡಿಮೆಯಾಗಿದೆ. ವಿಶೇಷವಾಗಿ ಚಿನ್ನದ ಪದಕದ ವಿಚಾರದಲ್ಲಿ ನಿರಾಶೆಯು ಮುಂದುವರಿದಿದೆ ಎಂದು ತಿಳಿಸಿದರು.
ಸರ್ಕಾರವು ಭಾರತದ ಪ್ರತಿಯೊಬ್ಬ ಕ್ರೀಡಾಪಟುವಿಗೆ ಖರ್ಚು ಮಾಡಿದೆ. ಆದರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಬರಲಿಲ್ಲ. ಭಾರತ ಒಟ್ಟು ಆರು ಪದಕಗಳನ್ನು ಮಾತ್ರ ಗೆದ್ದಿದೆ. ಹಣದಿಂದ ಪದಕ ಸಿಗುವುದಿಲ್ಲ ಅದಕ್ಕಾಗಿ ಕ್ರೀಡಾಪಟುಗಳು ಶ್ರಮಿಸಬೇಕು, ಅವರಿಗೆ ಪದಕ ಗೆಲ್ಲುವು ಹಸಿವಿರಬೇಕು ಎಂದು ಹೇಳಿದರು.
ವಿವಿಧ ಕಾರಣಗಳಿಂದ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಸುಲಭವಲ್ಲ. ಕ್ರೀಡಾಪಟುಗಳು ಎರಡು ರೀತಿಯ ಒತ್ತಡವನ್ನು ಅನುಭವಿಸುತ್ತಾರೆ. ಬಾಹ್ಯ ಒತ್ತಡ. ದೇಶದ ಜನರು, ಅಭಿಮಾನಿಗಳು ಪದಕ ಗೆಲ್ಲುತ್ತಾರೆ ಎಂದು ನಿರೀಕ್ಷಿಸುತ್ತಾರೆ, ಆಟಗಾರನ ಒಳಗಿನ ಒತ್ತಡ. ಅದು ಸ್ವಂತ ನಿರೀಕ್ಷೆಗಳ ಒತ್ತಡ. ಆದರೆ ಈ ಒತ್ತಡಗಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಈ ಎರಡು ಒತ್ತಡಗಳನ್ನು ಯಾರು ಚೆನ್ನಾಗಿ ನಿಭಾಯಿಸಬಲ್ಲರೋ ಅವರು ಪದಕ ಗೆಲ್ಲುತ್ತಾರೆ.
ಕ್ರೀಡಾಪಟುಗಳಿಗೆ ಪದಕ ಗೆಲ್ಲುವ ಹಠವಿಲ್ಲದಿದ್ದರೆ ಎಷ್ಟೇ ಹಣ ಕೊಟ್ಟರು ಪದಕ ಸಿಗುವುದಿಲ್ಲ. ಅಥ್ಲೀಟ್ಗಳಿಗೆ ಸೌಲಭ್ಯ ಕಲ್ಪಿಸಲು ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಹೆಚ್ಚು ಪದಕಗಳನ್ನು ಗಳಿಸಲು ಹೆಚ್ಚು ಹಣವನ್ನು ಖರ್ಚು ಮಾಡಲು ಅದು ವೆಡ್ಡಿಂಗ್ ಮೆಷಿನ್ ಅಲ್ಲ. ಅದಕ್ಕಾಗಿ ಬೆವರು, ರಕ್ತ, ಕಣ್ಣೀರು, ಪರಿಶ್ರಮ ಬೇಕಾಗುತ್ತದೆ. ಸರ್ಕಾರವು ಕ್ರೀಡಾಪಟುಗಳಿಗೆ ಪದಕಗಳನ್ನು ಗೆಲ್ಲುವ ಹಾದಿಯನ್ನು ಸುಗಮಗೊಳಿಸಬಹುದು. ಆದರೆ ಪದಕಗಳನ್ನು ನಾವೇ ಗೆಲ್ಲಬೇಕು ಎಂದು ತಿಳಿಸಿದ್ದಾರೆ.
ಆದರೆ ನಾವು ಹಲವು ಕ್ರೀಡೆಗಳಲ್ಲಿ ಸುಧಾರಿಸಿದ್ದೇವೆ. ಅಥ್ಲೆಟಿಕ್ಸ್‌ನಂತಹ ಕ್ರೀಡೆಗಳನ್ನು ಉತ್ತಮವಾಗಿ ನಿರ್ವಹಿಸಲಾಗಿದೆ. ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಪ್ಯಾರಿಸ್‌ನಲ್ಲಿ ನಾವು ಎರಡಂಕಿಗಳನ್ನು ಪಡೆಯಲಿಲ್ಲ. ಆದ್ದರಿಂದ ಲಾಸ್ ಏಂಜಲೀಸ್‌ಗೆ ಸಿದ್ಧರಾಗಿರಬೇಕು. ಏನು ತಪ್ಪು ಮಾಡಿದೆವು ಎಂಬುದನ್ನು ನಿರ್ಣಯಿಸಿ ಮುಂದುವರಿಯಬೇಕು ಎಂದು ಸಲಹೆ ನೀಡಿದರು. (ಏಜೆನ್ಸೀಸ್)