ಹಲವು ವರ್ಷಗಳ ಹಿಂದೆ ಕನ್ನಡದಲ್ಲಿ ಜಾಕ್ಪಾಟ್ ಎಂಬ ಚಿತ್ರ ಬಂದಿತ್ತು ನೆನಪಿದೆಯಾ? ಆ ಚಿತ್ರದಲ್ಲಿ ಮೊನಾಲಿಸಾ ಎಂಬ ನಟಿ ತನ್ನ ಗ್ಲಾಮರ್ನಿಂದ ಎಲ್ಲರನ್ನೂ ಬೆಚ್ಚಿಬೀಳಿಸಿದ್ದರು. ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದರ ಜತೆಗೆ, ಎನ್ಕೌಂಟರ್ ದಯಾನಾಯಕ್ ಸೇರಿದಂತೆ ಒಂದೆರೆಡು ಚಿತ್ರಗಳಲ್ಲಿ ಐಟಂ ಡ್ಯಾನ್ಸ್ ಮಾಡಿದ್ದರು. ಈಗ ಆ ಮೊನಾಲಿಸಾ, ಲಿವ್-ಇನ್ ಸಂಬಂಧದಿಂದಾಗಿ ಸುದ್ದಿಯಲ್ಲಿದ್ದಾರೆ.
ಹೌದು, ಭೋಜಪುರಿ ಚಿತ್ರರಂಗದಲ್ಲಿ ತನ್ನ ಗ್ಲಾಮರ್ನಿಂದ ದೊಡ್ಡ ಹೆಸರು ಮಾಡಿರುವ ಮೊನಾಲಿಸಾಗೆ ಮದುವೆಗೆ ಮುನ್ನ ಲಿವ್-ಇನ್ ರಿಲೇಶನ್ಶಿಪ್ ಇತ್ತು, ಅವರು ತಮಗಿಂಥ ಆರು ವರ್ಷ ಹಿರಿಯನ ಜತೆಗೆ ಸಂಬಂಧ ಇಟ್ಟುಕೊಂಡಿದ್ದರು, ಆ ನಂತರ ಹೊರಬಂದು ವಿಕ್ರಮ್ ಸಿಂಗ್ ರಜಪೂತ್ ಎನ್ನುವವರನ್ನು ಮದುವೆಯಾದರು ಎಂಬೆಲ್ಲಾ ಸುದ್ದಿಗಳು ಹಬ್ಬಿವೆ.
ಮೊನಾಲಿಸಾ ಮೂಲ ಹೆಸರು ಅಂತರಾ ಬಿಸ್ವಾಸ್. ಮೂಲತಃ ಕೊಲ್ಕತ್ತದವರಾದ ಅಂತರಾ, ಹಿಂದಿಯ ಜಯತೆ ಎಂಬ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಅಭಿನಯಕ್ಕಿಂತ ಹೆಚ್ಚಾಗಿ ಗ್ಲಾಮರಸ್ ಪಾತ್ರಗಳಲ್ಲೇ ಮಿಂಚಿದ ಅವರು, ಆ ನಂತರ ಭೋಜಪುರಿ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆದರು. ಹಲವು ಚಿತ್ರಗಳಲ್ಲಿ ತುಂಡುಡುಗೆಗಳಲ್ಲಿ ಕಾಣಿಸಿಕೊಂಡು, ಅಭಿಮಾನಿಗಳನ್ನು ಖುಷಿಪಡಿಸಿದರು. ಆ ನಂತರ ಹಿಂದಿಯ ಬಿಗ್ ಬಾಸ್ನ ಸೀಸನ್ 10ರಲ್ಲಿ ಭಾಗವಹಿಸಿ, ಕೆಲವು ವರ್ಷಗಳ ಹಿಂದೆ ವಿಕ್ರಮ್ ಅವರನ್ನು ಪ್ರೀತಿಸಿ ಮದುವೆಯಾದರು.
ಈಗ ಜನಪ್ರಿಯ ಪತ್ರಿಕೆಯೊಂದು, ಮದುವೆಗೂ ಮುನ್ನ ಮೊನಾಲಿಸಾ ತಮಗಿಂತ ಆರು ವರ್ಷ ಹಿರಿಯ ವ್ಯಕ್ತಿಯೊಂದಿಗೆ ಲಿವ್ ಇನ್ ಸಂಬಂಧದಲ್ಲಿದ್ದರು. ಕಾರಣಾಂತರಗಳಿಂದ ಆ ಸಂಬಂಧದಿಂದ ಹೊರಬಂದು, ವಿಕ್ರಮ್ ಜತೆಗೆ ಮದುವೆಯಾದರು ಎಂದು ಆಕೆಯ ಕುರಿತು ಬರೆದಿದೆ. ಈ ವರದಿಯನ್ನು ಓದಿ ಕೆಂಡಾಮಂಡಲರಾಗಿರುವ ಮೊನಾಲಿಸಾ, ಇದೆಲ್ಲಾ ಸುಳ್ಳುಸುದ್ದಿ ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ದೇವರ ಮೇಲೆ ಆಣೆ ಮಾಡ್ತೀನಿ, ಇದು ಜೋಕ್ ಅಲ್ಲ …

ಈ ಕುರಿತು ಮಾತನಾಡಿರುವ ಅವರು, ಇವೆಲ್ಲಾ ಸುಳ್ಳು ಸುದ್ದಿ. ಈ ಸುದ್ದಿ ಓದಿ ನಗು ಬಂದು. ನಾನು ಮತ್ತು ವಿಕ್ರಮ್ ಇಬ್ಬರೂ ಓದಿ ನಕ್ಕೆವು. ಆದರೂ ಈ ವಿಷಯ ನನ್ನನ್ನು ಕೊರೆಯುತ್ತಿದೆ. ಇದೆಲ್ಲಾ ಓದಿ ಅಭಿಮಾನಿಗಳು ನನ್ನ ಬಗ್ಗೆ ಏನಂದುಕೊಳ್ಳುತ್ತಾರೋ ಗೊತ್ತಿಲ್ಲ. ನನಗೆ ವಿಕ್ರಮ್ 12 ವರ್ಷಗಳಿಂದ ಗೊತ್ತು ಮತ್ತು ನಾವಿಬ್ಬರೂ ಡೇಟಿಂಗ್ ಮಾಡುತ್ತಿದ್ದೆವು. ಇದು ನನ್ನ ತಂದೆ-ತಾಯಿಗೂ ಗೊತ್ತಿತ್ತು. ಇಷ್ಟೆಲ್ಲಾ ಇರುವಾಗ, ಈ ತರಹ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.