More

  ಮಮ್ಮುಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರಕ್ಕೆ ಸಿಕ್ತು ಯು/ಎ ಪ್ರಮಾಣಪತ್ರ

  ಕೇರಳ: ಮಾಲಿವುಡ್​ನ ಮೆಗಾಸ್ಟಾರ್ ಮಮ್ಮುಟ್ಟಿ ಅಭಿನಯದ ಬಹುನಿರೀಕ್ಷಿತ ‘ಕಣ್ಣೂರ್ ಸ್ಕ್ವಾಡ್‌’ ಚಿತ್ರಕ್ಕೆ ಇದೀಗ ಸೆನ್ಸಾರ್​ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಲಭಿಸಿದೆ.

  ಇದನ್ನೂ ಓದಿ: ದಸಾರ ಹಬ್ಬ ರಾಜ್ಯದ ಹಿರಿಮೆ, ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಹೇಳಿಕೆ

  ತಮ್ಮ ಅಭಿಮಾನಿಗಳಿಗೋಸ್ಕರ ಮತ್ತೊಮ್ಮೆ ಪರೆದೆಯ ಮೇಲೆ ಹಾಜರಾಗಲು ತಯಾರಾಗಿರುವ ಮಮ್ಮುಟ್ಟಿಗೆ ‘ಕಣ್ಣೂರ್ ಸ್ಕ್ವಾಡ್‌’ ಬಹಳ ವಿಶೇಷವಾದ ಸಿನಿಮಾ ಎಂದು ಹೇಳಲಾಗಿದ್ದು, ಸದ್ಯ ಈ ಚಿತ್ರದ ಬಿಡುಗಡೆಗೆ ಅವರ ಅಭಿಮಾನಿಗಳು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸಿನಿಮಾ ರಿಲೀಸ್​ ದಿನಾಂಕ ಘೋಷಣೆಯಾಗಿದೆ. ಸೆಪ್ಟೆಂಬರ್ 28, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಕಣ್ಣೂರ್​ ಸ್ಕ್ವಾಡ್‌ ಬಿಡುಗಡೆಗೊಳ್ಳಲು ಸಜ್ಜಾಗಿದೆ.

  ಇದನ್ನೂ ಓದಿ: ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್​ ತೀರ್ಪು ಅಂತಿಮ: ತಮಿಳುನಾಡು ಸಚಿವ ದೊರೈ ಮುರುಗನ್

  ಖ್ಯಾತ ಛಾಯಾಗ್ರಾಹಕ ರಾಬಿ ವರ್ಗೀಸ್ ರಾಜ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಚಿತ್ರದ ರನ್‌ಟೈಮ್ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಸಿನಿಮಾದಲ್ಲಿ ಕಿಶೋರ್, ಸನ್ನಿ ವೇನ್, ವಿಜಯರಾಘವನ್, ರೋನಿ ಡೇವಿಡ್ ರಾಜ್, ಅಜೀಜ್ ನೆಡುಮಂಗಡ, ಶಬರೀಶ್ ವರ್ಮಾ, ಶರತ್ ಸಭಾ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).

  ಬೆಂಗಳೂರಿಗೆ 9 ತಿಂಗಳಿಗೆ ಕುಡಿಯಲಿಕ್ಕೆ ಕನಿಷ್ಠ 13 ಟಿಎಂಸಿ ಬೇಕು; ಎಲ್ಲಿಂದ ಬರುತ್ತೆ ಆ ನೀರು?: ಎಚ್​ಡಿಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts