'ಹೋಟೆಲ್​ಗೆ ಕರೆಸಿ ಬಟ್ಟೆ ಬಿಚ್ಚು ಎಂದ್ರು': ನಿರ್ದೇಶಕ ರಂಜಿತ್ ಮೇಲೆ ಮತ್ತೊಬ್ಬ ನಟಿ ಲೈಂಗಿಕ ಕಿರುಕುಳ ಆರೋಪ ​

Director Ranjith
Published on

ತಿರುವನಂತಪುರಂ: ಮಲಯಾಳಂ ಚಿತ್ರೋದ್ಯಮದಲ್ಲಿ ಜಸ್ಟೀಸ್​ ಹೇಮಾ ವರದಿ ಅಲ್ಲೋಲಕಲ್ಲೋಲ ಉಂಟು ಮಾಡಿದ್ದು, ಹಲವು ಯುವ ನಟರು ಈಗ ಹಿರಿಯ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಕೈಯಲ್ಲಿ ತಾವು ಎದುರಿಸಿದ ದೌರ್ಜನ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ದೂರು ದಾಖಲಾಗಿದ್ದ ನಿರ್ದೇಶಕ ರಂಜಿತ್ ವಿರುದ್ಧ ಈಗ ಮತ್ತೊಂದು ದೌರ್ಜನ್ಯ ಪ್ರಕರಣ ದಾಖಲಾಗಿವೆ. 2012 ರಲ್ಲಿ ರಂಜಿತ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಯುವ ನಟಿ ದೂರು ದಾಖಲಿಸಿದ್ದಾರೆ.

ಕೊಚ್ಚಿ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸಂತ್ರಸ್ತೆಯನ್ನು ಆಡಿಷನ್ ನೆಪದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ಗೆ ಕರೆದೊಯ್ದಿದ್ದಾರೆ. ರಂಜಿತ್ ಅವರು ಸಂತ್ರಸ್ತೆಯನ್ನು ಬಟ್ಟೆ ಬಿಚ್ಚಲು ಒತ್ತಾಯಿಸಿದ್ದಾರೆ. ಆಗ ಹಲ್ಲೆ ಸಹ ನಡೆಸಲಾಗಿದೆ. ಸಹಕರಿಸಿದ್ದಕ್ಕೆ ಪ್ರಮುಖ ಪಾತ್ರ ಕೊಡುವ ಭರವಸೆ ನೀಡಿದ್ದಾರೆ. ಮರುದಿನ ಬೆಳಗ್ಗೆ ಹಣವನ್ನು ಸಹ ನೀಡಲಾಯಿತು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇದು ರಂಜಿತ್ ವಿರುದ್ಧದ ಎರಡನೇ ಲೈಂಗಿಕ ಆರೋಪ ಪ್ರಕರಣವಾಗಿದೆ. ಈ ಹಿಂದೆ ಬಂಗಾಳಿ ನಟಿಯೊಬ್ಬರು ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ದೂರು ದಾಖಲಿಸಿದ್ದರು. ಆಕೆಯ ದೂರಿನ ಮೇರೆಗೆ ಕೊಚ್ಚಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಕೊಚ್ಚಿಯ ಹೋಟೆಲ್‌ವೊಂದರಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net