'ಹಿರಿಯ ಪೊಲೀಸ್​ ಅಧಿಕಾರಿಗಳಿಂದಲೇ ಕಿರುಕುಳ': ದೂರು ದಾಖಲಿಸಿದ ನಟಿ ಕದಂಬರಿ ಜೇತ್ವಾನಿ

kadambari
Published on

ಅಮರಾವತಿ: ರಾಜಕೀಯ ನಾಯಕ ಕೆವಿಆರ್ ವಿದ್ಯಾಸಾಗರ್ ವಿರುದ್ಧ ಬಾಲಿವುಡ್ ನಟಿ ಕಾದಂಬರಿ ಜೇತ್ವಾನಿ ದೂರು ದಾಖಲಿಸಿದ್ದು, ತಮ್ಮ ಕುಟುಂಬದ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತನಗೆ ಕಿರುಕುಳ ನೀಡಿದ್ದಲ್ಲದೆ, ಕಾನೂನುಬಾಹಿರ ಬಂಧನದಲ್ಲಿ ಹಿರಿಯ ಪೊಲೀಸ್​ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದರು. ದೂರಿನ ನಂತರ ವಿಜಯವಾಡದ ಎನ್​ಟಿಆರ್​ ಪೊಲೀಸರು ಜೇತ್ವಾನಿ ಮತ್ತು ಆಕೆಯ ಪೋಷಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ವಿದ್ಯಾಸಾಗರ್ ವಿರುದ್ಧ ಕಾದಂಬರಿ ಜೇತ್ವಾನಿ ಶುಕ್ರವಾರ ಎನ್ಟಿಆರ್ ಪೊಲೀಸ್ ಕಮಿಷನರ್ ಎಸ್ವಿ ರಾಜಶೇಖರ್ ಬಾಬು ಬಳಿ ದೂರು ದಾಖಲಿಸಿದ್ದಾರೆ. ವಿದ್ಯಾಸಾಗರ್ ತನ್ನ ಮತ್ತು ತನ್ನ ಪೋಷಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಜೇತ್ವಾನಿ ಆರೋಪಿಸಿದ್ದಾರೆ.

ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಕುಟುಂಬಕ್ಕೆ ಕಿರುಕುಳ ನೀಡಲು ವಿದ್ಯಾಸಾಗರ್ ಅವರೊಂದಿಗೆ ಸಂಚು ರೂಪಿಸಿದ್ದಾರೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಟಿ ದೂರಿನಲ್ಲಿ ಮನವಿ ಮಾಡಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಇಬ್ರಾಹಿಂಪಟ್ಟಣಂ ಪೊಲೀಸ್​ ಠಾಣೆಯಲ್ಲಿ ತನ್ನ ಕುಟುಂಬದ ಮೇಲೆ ಸುಲಿಗೆ ಆರೋಪ ಹೊರಿಸಿ ವಿದ್ಯಾಸಾಗರ್ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಮುಂಬೈಗೆ ಬಂದು ತನ್ನನ್ನು ಮತ್ತು ತನ್ನ ಪೋಷಕರನ್ನು ಯಾವುದೇ ಮುನ್ಸೂಚನೆಯಿಲ್ಲದೆ ಬಂಧಿಸಿ ವಿಜಯವಾಡಕ್ಕೆ ಕರೆತಂದರು. ಅಲ್ಲಿ ಅವರನ್ನು ಕಸ್ಟಡಿಯಲ್ಲಿ ಇರಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.

ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ, ದೇಶದ ಯಾವುದೇ ಪ್ರಾಮಾಣಿಕ ನಾಗರಿಕ ತನ್ನ ಹೆಸರು ವಿವಾದಗಳಲ್ಲಿ ಸಿಲುಕಿಕೊಳ್ಳುವುದನ್ನು ಎಂದಿಗೂ ಬಯಸುವುದಿಲ್ಲ. ಆದರೆ ತನ್ನನ್ನು ಪ್ರಕರಣದಲ್ಲಿ ಕಾನೂನು ಬಾಹಿರವಾಗಿ ಎಳೆದು ತರಲಾಗಿದೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net