

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಮೊಗವೀರ ಸಮಾಜದ ಗುರಿಕಾರ ಪದ್ದತಿ ಶ್ರೇಷ್ಠವಾದುದು. ಈ ಪದ್ದತಿ ಉಳಿಸಿ ಬೆಳೆಸುವಲ್ಲಿ ನಾಡೋಜ ಡಾ.ಜಿ.ಶಂಕರ್ ಅವರು ಆರಂಭಿಸಿದ ಗುರಿಕಾರರಿಗೆ ಗೌರವಾರ್ಪಣೆ, ಗೌರವಧನ ನೀಡುವ ಕಾರ್ಯಕ್ರಮ ಈಗ ಹೋಬಳಿ ಮಟ್ಟದಲ್ಲಿ ನಿರಂತರವಾಗಿ ಆಯೋಜನೆಗೊಳ್ಳುತ್ತಿದೆ ಎಂದು ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಹೇಳಿದರು.
ಮೊಗವೀರ ಮಹಾಜನ ಸೇವಾ ಸಂಘ ಮುಂಬೈ, ಕುಂದಾಪುರ ಶಾಖೆ ಮತ್ತು ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನ ನೇತೃತ್ವದಲ್ಲಿ ದೇವಳದ ಸಭಾಭವನದಲ್ಲಿ ಭಾನುವಾರ ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರ ಸಮಾವೇಶ-2025 ಹಾಗೂ ಹೋಬಳಿ ವ್ಯಾಪ್ತಿಯ ಐದು ಮೊಗವೀರ ಯುವ ಸಂಘಟನೆಗಳ ಮಾಜಿ-ಹಾಲಿ ಅಧ್ಯಕ್ಷರ ಸೇವಾ ಸ್ಮರಣೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯಶ್‌ಪಾಲ್ ಸುವರ್ಣ ಶುಭಹಾರೈಸಿದರು. ಗುರಿಕಾರರಾದ ನರಸಿಂಹ ಬಂಟ್ವಾಡಿ ಮತ್ತು ಗಣಪತಿ ಟಿ.ಶ್ರೀಯಾನ್ ಮಾತನಾಡಿದರು. ಸಂಘದ ಬಗ್ವಾಡಿ ಹೋಬಳಿ ಕುಂದಾಪುರ ಶಾಖಾಧ್ಯಕ್ಷ ಉದಯಕುಮಾರ ಹಟ್ಟಿಯಂಗಡಿ, ಪ್ರಮುಖರಾದ ಕೆ.ಕೆ ಕಾಂಚನ್, ಎಂ.ಎಂ.ಸುವರ್ಣ, ಜಯಂತ್ ಅಮೀನ್ ಕೋಡಿ, ಅನಂದ ಶ್ರೀಯಾನ್, ಅರವಿಂದ ಪುತ್ರನ್, ಸದಾನಂದ ಸುವರ್ಣ ಉಳ್ಳಾಲ, ಮನೋಜ್, ವಿನಯ ಕರ್ಕೆರಾ, ಶಿವರಾಮ ಕೋಟ, ಯತೀಶ, ದಿನೇಶ ಕಾಂಚನ್ ಬಾಳಿಕೆರೆ, ಸೋಮಶೇಖರ, ನಾಗೇಶ ಹಳ್ನಾಡು, ರಾಘವೇಂದ್ರ, ನಾಗರಾಜ ಬೀಜಾಡಿ, ಉಷಾ ಮಾರ್ಕೋಡು, ಶ್ಯಾಮಲಾ ಜಿ.ಚಂದನ್ ಉಪಸ್ಥಿತರಿದ್ದರು. ಶೋಭಾ ಜಿ.ಪುತ್ರನ್ ಪ್ರಾರ್ಥಿಸಿದರು. ಸದಾನಂದ ಬಳ್ಕೂರು ಸ್ವಾಗತಿಸಿದರು. ಪ್ರಭಾಕರ ಎನ್.ಎಂ.ಸೇನಾಪುರ ವರದಿ ಮಂಡಿಸಿದರು. ಸತೀಶ್ ಎಂ.ನಾಯ್ಕ ವಂದಿಸಿದರು. ಸುಧಾಕರ ಕಾಂಚನ್ ಹಾಗೂ ಲೋಹಿತಾಶ್ವ ಆರ್. ಕುಂದರ್ ನಿರೂಪಿಸಿದರು.
ಹೋಬಳಿಯ ಎಲ್ಲ ಗುರಿಕಾರರನ್ನು ಗೌರವಿಸಲಾಯಿತು. ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದ ಸದಾಶಿವ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ, ಐದು ಘಟಕಗಳು, ಮಹಿಳಾ ಘಟಕ, ಮೊಗವೀರ ಸ್ತ್ರೀಶಕ್ತಿಯ ಮಾಜಿ ಅಧ್ಯಕ್ಷ, ಹಾಲಿ ಅಧ್ಯಕ್ಷರನ್ನು ಗೌರವಿಸಲಾಯಿತು. ಬಳಿಕ ರಘು ರಟ್ಟಾಡಿ ರಚಿಸಿದ ಮಹಿಷಾಸುರಮರ್ದಿನಿ ಭಕ್ತಿಗೀತೆ ಅನಾವರಣಗೊಳಿಸಲಾಯಿತು.