ಮೋದಿಗೆ ಶುಭಾಶಯ ಕೋರುತ್ತೇನೆ, ಆದರೆ...

Narendra Modi Lead
Published on

ಬೆಂಗಳೂರು: ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟುಹಬ್ಬ, ಅವರಿಗೆ ನಾನು ಶುಭಾಶಯ ಕೋರುತ್ತೇನೆ. ಆದರೆ, ಹುಟ್ಟುಹಬ್ಬಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹಿರಾತು ನೀಡಲಾಗಿದೆ. ಮೋದಿಯವರು ಭಾರಿ ಸಾಧನೆ ಮಾಡಿದ್ದಾರೆ ಎಂದು ಜಾಹಿರಾತಿನಲ್ಲಿ ಬಿಂಬಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ನೋಟು ಅಮಾನ್ಯ, ಅವೈಜ್ಞಾನಿಕ ಜಿಎಸ್‌ಟಿ ಹಾಗೂ ಕೆಟ್ಟ ಹಣಕಾಸು ನೀತಿಯಿಂದಾಗಿ ದೇಶ ಆರ್ಥಿಕವಾಗಿ ಭಾರಿ ಕೆಳಮಟ್ಟಕ್ಕೆ ಹೋಗಿದೆ. ಜಿಡಿಪಿಯೂ ಭಾರಿ ಕುಸಿತ ಕಂಡಿದೆ. ಇದರಿಂದ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಕೃಷಿ ವಲಯ ಹೊರತುಪಡಿಸಿ ಬೇರೆ ಎಲ್ಲ ಕ್ಷೇತ್ರಗಳ ಬೆಳವಣಿಗೆ ನಕಾರಾತ್ಮಕವಾಗಿದೆ ಎಂದರು.

ನರೇಂದ್ರಮೋದಿ ಭಾರಿ ಬದಲಾವಣೆ ತರಲಿದ್ದಾರೆ ಎಂದು ಯುವಕ, ಯುವತಿಯರು ಅವರನ್ನು ಬೆಂಬಲಿಸಿದರು. ಆದರೆ ಈಗ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ ಅವರು ಮೋದಿಯವರ ಹುಟ್ಟುಹಬ್ಬವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿರುವುದು ಸರಿಯಾಗಿದೆ. ನಿರಾಶರಾಗುವುದು, ಭ್ರಮನಿರಸನಗೊಳ್ಳುವುದು ಬೇಡ ಎಂದು ಯುವ ಜನರಿಗೆ ಮನವಿ ಮಾಡುತ್ತೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net