ಮೋದಿ ಜತೆ ಬೊಮ್ಮ- ಬೆಳ್ಳಿ ದಂಪತಿಯ ಮಾತುಕತೆ!

modi with bomma belli
Published on

ಗುಂಡ್ಲುಪೇಟೆ: ಆಸ್ಕರ್​ ವಿಜೇತ ಎಲಿಫೆಂಟ್ ಎಸ್ಪರರ್ಸ್ ಸಾಕ್ಷ್ಯ ಚಿತ್ರದ ಕೇಂದ್ರಬಿಂದುಗಳಾದ ಬೊಮ್ಮ- ಬೆಳ್ಳಿ ದಂಪತಿಯನ್ನು ಪ್ರಧಾನಿ ಮೋದಿ‌ ಈಗ ಭೇಟಿಯಾಗಿದ್ದಾರೆ. ಬಂಡೀಪುರದಲ್ಲಿ ಸಫಾರಿ ಮುಗಿಸಿದ ಪಿಎಂ ತಮಿಳುನಾಡಿನ ಮಧುಮಲೈನ ತೆಪ್ಪಕಾಡು ಆನೆ ಕ್ಯಾಂಪ್ ಗೆ ಭೇಟಿ ನೀಡಿದ್ದಾರೆ.

ಬೊಮ್ಮ- ಬೆಳ್ಳಿ ದಂಪತಿ ಹೇಳಿದ್ದಿಷ್ಟು:

ಪ್ರಧಾನ ಮಂತ್ರಿಗಳು ಬೊಮ್ಮ- ಬೆಳ್ಳಿ ದಂಪತಿಯನ್ನು‌ ಭೇಟಿ ಮಾಡುತ್ತಿರುವುದು ಸಂಭ್ರಮ ಹೆಚ್ಚು ಮಾಡಿದೆ. ಈ ಕುರಿತು ಎರಡು ದಿನಗಳ ಹಿಂದೆ "ವಿಜಯವಾಣಿ"ಯೊಂದಿಗೆ ಬೊಮ್ಮ ಖುಷಿ ಹಂಚಿಕೊಂಡಿದ್ದರು. 'ಅರಣ್ಯ ಇಲಾಖೆಯಲ್ಲಿ ಸುಮಾರು 45 ವರ್ಷ ಅನೇಕ ಆನೆಗಳನ್ನು ಸಾಕಿದ್ದೇನೆ. ಮಧುಮಲೈ, ಇಂದು ಜಾನ್, ಸುಮಂಗಲಾ, ಇದೀಗ ರಘು ಎಂಬ ಆನೆಯನ್ನು ಸಾಕಿ ಇಲಾಖೆಗೆ ಒಪ್ಪಿಸಿದ್ದೇನೆ. ಆನೆಯನ್ನು ನನ್ನ ಮಕ್ಕಳ ರೀತಿ ಸಾಕಿದ್ದಕ್ಕೆ ಆಸ್ಕರ್ ಪ್ರಶಸ್ತಿ ಬಂದಿದೆ. ಇದು ಅತ್ಯಂತ ಖುಷಿ ತಂದಿದೆ' ಎಂದಿದ್ದರು.

ಆನೆಗೆ ಸ್ನಾನ ಮಾಡಿಸುವಾಗ ಗುದ್ದಿದ್ದರಿಂದ ನನಗೆ ಕಾಲಿನ ಕೀಲು ತುಂಡಾಗಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಆಗ ಅಕ್ಕಪಕ್ಕದಲ್ಲಿದ್ದವರು ನನ್ನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದರು. ಕೆಲದಿನಗಳ ನಂತರ ಕೆಲಸಕ್ಕೆ ಹಾಜರಾದೆ. ಮತ್ತೆ ಆನೆಗಳನ್ನು ಆರೈಕೆ ಮಾಡಿದೆ ಎಂದು ಆನೆಯ ಮೇಲಿನ ಪ್ರೀತಿಯನ್ನು ಬೊಮ್ಮ ವಿವರಿಸಿದ್ದರು.

ಬಂಡೀಪುರದಲ್ಲಿ ಪ್ರಧಾನಿ ಮೊದಿ ಜತೆ ಭೇಟಿ

ಇದೀಗ ಪ್ರಧಾನಿ ಮೋದಿ ಬಂಡೀಪುರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆಸ್ಕರ್​ ವಿಜೇತ ಸಾಕ್ಷ್ಯಚಿತ್ರ ಎಲಿಫೆಂಟ್​ ವಿಸ್ಪರರ್ಸ್​ ಖ್ಯಾತಿಯ ಬೊಮ್ಮ-ಬೆಳ್ಳಿ ದಂಪತಿಯನ್ನು ಮಾತನಾಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net