ಚುನಾವಣೆ ಇದೆ ಅಂತ ನೆಪ ಮಾಡ್ಕೊಂಡು ಬರ್ತಿದಾರೆ ಮೋದಿ: ಡಿಕೆಶಿ

DK Shivakumar
Published on

ಸದಾಶಿವನಗರ: ದೇಶದ ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ಒಂದಾದ ಬಂಡೀಪುರಕ್ಕೆ ಆಗಮಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಡಿನೊಳಗೆ ಸಫಾರಿಗೆ ತೆರಳಿದ್ದಾರೆ.

ಬಂಡಿಪುರದಲ್ಲಿ ಮೋದಿ!

ಜೀವ ವೈವಿಧ್ಯತೆಗೆ ಹೆಸರಾಗಿರುವ ಬಂಡೀಪುರದಲ್ಲಿ ಯಾವ ವನ್ಯಜೀವಿ ಪ್ರಧಾನ ಮಂತ್ರಿಗಳ ಕಣ್ಣಿಗೆ ಕಾಣಿಸಿಕೊಳ್ಳಲಿದೆ ಎನ್ನುವ ಕುತೂಹಲ ಮನೆ ಮಾಡಿದೆ. ಕಾಡಿನೊಳಗೆ ಪ್ರಾಣಿಗಳ ದರ್ಶನವೂ ಅದೃಷ್ಣ ಇದ್ದಂತೆ. ಪ್ರಧಾನಿ ಮೋದಿ ಅವರಿಗೆ ವ್ಯಾಘ್ರ ನೋಡುವ ಅದೃಷ್ಣ ಇದೆಯೋ ಅಥವಾ ಇಲ್ಲವೋ ಗೊತ್ತಾಗಲಿದೆ.

ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದ ಬಗ್ಗೆ ಡಿಕೆಶಿ ಹೇಳಿದ್ದಿಷ್ಟು...

ಈ ನಡುವೆ ಪ್ರಧಾನಿ ಮೋದಿ ಆಗಮನ ವಿಚಾರವಾಗಿ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ "ಮೋದಿ ಸರ್ ಪ್ರಜಾಪ್ರಭುತ್ವ ನಮ್ಮಿಂದನೇ ಬಂತು ಅಂತ ಹೇಳ್ತಾರೆ. ಅರವತ್ತು ವರ್ಷದಲ್ಲಿ ಕಾಂಗ್ರೆಸ್‌ ಕೊಡುಗೆ ತೆಗೆದುಹಾಕೋದು ಅವರ ಉದ್ದೇಶ. ಹಲವು ಯೋಜನೆಗಳ ಹೆಸರನ್ನೇ ಬದಲಾಯಿಸಿದ್ದಾರೆ. ಕಾಡಿಗೆ ಅವರು ಹುಲಿಯನ್ನಾದರೂ ಬಿಡಲಿ, ಸಿಂಹವಾದರೂ ಬಿಡಲಿ. ಚುನಾವಣೆ ಇದೆ ಅಂತ ಪದೇ ಪದೇ ನೆಪ ಮಾಡ್ಕೊಂಡು ಬರ್ತಿದಾರೆ ಮೋದಿಯವರು" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net