More

    ಪ್ರಧಾನಿ ಮೋದಿಯನ್ನು ಬಂಧಿಸಿ ಭಾರತವನ್ನು ಇಸ್ಲಾಮಿಕ್ ರಾಷ್ಟವನ್ನಾಗಿ ಮಾಡುತ್ತೇವೆ ಎಂದ ಪಾಕ್ ಸೇನೆಯ ಅಧಿಕಾರಿ; ವಿಡಿಯೋ ವೈರಲ್

    ನವದೆಹಲಿ: ಆರ್ಥಿಕ ಸಂಕಷ್ಟದಿಂದಾಗಿ ತೀವ್ರವಾಗಿ ಕಂಗೆಟ್ಟಿರುವ ಪಾಕಿಸ್ತಾನ ಜಾಗತಿಕ ವೇದಿಕೆಗಳಲ್ಲಿ ತೀವ್ರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದು, ಅಲ್ಲಿನ ರಾಜಕಾರಣಿಗಳು, ಮಾಜಿ ಕ್ರಿಕೆಟಿಗರು ಹಾಗೂ ಸೇನೆ ಅಧಿಕಾರಿಗಳು ಭಾರತದ ಬಗ್ಗೆ ಹೇಳಿಕೆಗಳನ್ನು ನೀಡಿ ಟ್ರೋಲ್​ ಆಗುತ್ತಿರುವುದು ಹೊಸ ವಿಚಾರವೇನಲ್ಲ.

    ಇದೀಗ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಯೊಬ್ಬ ದೊಡ್ಡ ಜನಸಂದಣಿ ಮಧ್ಯೆ ಭಾರತವನ್ನು ವಶಪಡಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಂಧಿಸುತ್ತೇವೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

    ವೈರಲ್​ ಆಗಿರುವ ವಿಡಿಯೋದಲ್ಲಿ ಪಾಕಿಸ್ತಾನದ ಸೇನೆ ಅಧಿಕಾರಿಯು ಭಾರತವನ್ನು ವಶಪಡಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಂಧಿಸಿ ಇಸ್ಲಾಮಿಕ್ ರಾಷ್ಟವನ್ನಾಗಿ ಮಾಡುತ್ತೇವೆ. ಮೋದಿ ಕೈಗೆ ಸರಪಳಿ ಹಾಕಿ ಬಂಧಿಸುವುದನ್ನ ನಮ್ಮನ್ನು ಬಿಟ್ಟು ಬೇರೆ ಯಾರು ಬಯಸುತ್ತಾರೆ. ಭಾರತವನ್ನು ಆಕ್ರಮಿಸಿದ ನಂತರ ಪ್ಯಾಲೆಸ್ತೀಸ್​ನನ್ನು ವಿಮೋಚನೆಗೊಳಿಸುವುದಾಗಿ  ಸೇನಾಧಿಕಾರಿ ಹೇಳಿದ್ದು, ಅಲ್ಲಿ ನೆರದಿದ್ದ ಜನ ಇವರ ಮಾತಿಗೆ ಚಪ್ಪಾಳೆ ಬಡಿದು ಕೇಕೆ ಹಾಕುತ್ತಿರುವುದನ್ನು ನೋಡಬಹುದಾಗಿದೆ.

    ಇದನ್ನೂ ಓದಿ: ವಿಶ್ವದಾದ್ಯಂತ 500 ಕೋಟಿ ಗಡಿ ದಾಟಿದ ಅನಿಮಲ್; OTT ರಿಲೀಸ್​ ಡೇಟ್​ ಅನೌನ್ಸ್​

    ಇತ್ತ ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಪಾಕಿಸ್ತಾನದ ಸೇನೆಯನ್ನು ಹಲವು ಉದಾಹರಣೆ ನೀಡಿ ಟ್ರೋಲ್ ಮಾಡುತ್ತಿದ್ದಾರೆ.ಭಾರತದ ಮೇಲೆ ಆಕ್ರಮಣ ಮಾಡುವ ಬಗ್ಗೆ ಮಾತನಾಡುವ ಮೊದಲು ತೂಕ ಇಳಿಸಿಕೊಳ್ಳಲು ನಾನು ಈ ಪಾಕಿಸ್ತಾನದ ಸೇನಾ ಅಧಿಕಾರಿಗೆ ಸಲಹೆ ನೀಡಲು ಬಯಸುತ್ತೇನೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

    ತಿನ್ನಲು ಏನೂ ಸಿಗದೇ ಅಕ್ಕ-ಪಕ್ಕದ ದೇಶಗಳಲ್ಲಿ ಭಿಕ್ಷೆ ಬೇಡುತ್ತಿದ್ದರೂ ಧಿಮಾಕಿನ ಮಾತಿಗೆ ಏನೂ ಕಡಿಮೆ ಇಲ್ಲ. ನಮ್ಮ ದೇಶಕ್ಕೆ ಬರಲು ಕನಸು ಕಾಣುವ ಮೊದಲು ನಿಮ್ಮ ದೇಶದ ಪ್ರಜೆಗಳಿಗೆ ಹೊಟ್ಟೆ ತುಂಬಾ ಊಟ ಹಾಕು. ಜನಗಳ ಮುಂದೆ ಭಾರತದ ಪ್ರಧಾನಿಯನ್ನ ಬಂಧಿಸುತ್ತೀವಿ ಎಂದು ಜಂಬಾ ಕೊಚ್ಚಿಕೊಳ್ಳುವ ಪಾಕಿಸ್ತಾನಿಯರು, ಕೊನೆಗೆ ಆ ದೇಶದ ಪ್ರಧಾನಿಗಳನ್ನೇ ಬಂಧಿಸುತ್ತಾರೆ. ಹಲವು ದಶಗಳಿಂದ ಇದು ನಡೆಯುತ್ತಲೇ ಇದೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts