

ಒಂದು ಕಪ್ ಕಾಫಿ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ದೀರ್ಘಾಯುಷ್ಯ, ಹೃದ್ರೋಗ, ಮಧುಮೇಹ, ಆಲ್ಝೈಮರ್ ಕಾಯಿಲೆ ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆ ಮೇಲೆ ಕಾಫಿ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎನ್ನುವುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಕಾಫಿಯಿಂದ ಆರೋಗ್ಯಕ್ಕೆ ಲಾಭ ಇದೆ ಎನ್ನುವ ಕಾರಣಕ್ಕೆ ಯಾವಾಗ ಬೇಕೋ ಆಗ ಕಾಫಿ ಕುಡಿಯುವ ಅಭ್ಯಾಸ ಕೂಡಾ ಸರಿಯಲ್ಲ. ಕೆಲವರಿಗೆ ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ.
ಮುಂಜಾನೆ ಸಮಯದಲ್ಲಿ ನಮ್ಮ ಕಾರ್ಟಿಸೋಲ್ ಮಟ್ಟಗಳು ಹೆಚ್ಚಾಗಿರುತ್ತವೆ. ಕಾಫಿ ಕುಡಿಯುವುದರಿಂದ ಈ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದು ಮೂಡ್ ಸ್ವಿಂಗ್ ಮತ್ತು ಆತಂಕ ಹೆಚ್ಚಾಗುವುದಕ್ಕೆ ಕಾರಣವಾಗಬಹುದು.
ಅನೇಕ ಜನರಿಗೆ, ಕಾಫಿ ಅವರ ಬೆಳಗಿನ ದಿನಚರಿಯ ಪ್ರಮುಖ ಭಾಗವಾಗಿರುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಹಾಗಾದರೆ ಕಾಫಿ ಕುಡಿಯಲು ಉತ್ತಮ ಸಮಯ ಯಾವುದು? ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಏನಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
ಹೊಟ್ಟೆ ಉಬ್ಬುವುದು, ವಾಕರಿಕೆ, ಅಜೀರ್ಣಕ್ಕೆ ಕಾರಣವಾಗಬಹುದು :