ಫ್ಯಾಷನ್ ಶೋ ನಡೆಯುವ ವೇಳೆ ದುರಂತ: ಸ್ಥಳದಲ್ಲೇ ಪ್ರಾಣಬಿಟ್ಟ ಮಾಡೆಲ್​

piller
Published on

ನೋಯ್ಡಾ: ಫ್ಯಾಷನ್ ಶೋ ನಡೆಯುತ್ತಿರುವ ವೇಳೆ ಸಂಭವಿಸಿದ ದುರಂತದಿಂದಾಗಿ ಮಾಡೆಲ್​ವೊಬ್ಬಳು ಮೃತಪಟ್ಟಿರುವ ಘಟನೆ ನೋಯ್ಡಾದ ಫಿಲ್ಮ ಸಿಟಿಯಲ್ಲಿ ನಡೆದಿದೆ.

ವಂಶಿಕಾ ಚೋಪ್ರಾ(24) ಮೃತಪಟ್ಟ ದುರ್ದೈವಿಯಾಗಿದ್ದು, ಬಾಬಿ ರಾಜ್ ಎಂಬ ವ್ಯಕ್ತಿ ಭೀಕರವಾಗಿ ಗಾಯಗೊಂಡಿದ್ದಾನೆ.

ಘಟನೆ ನಡೆದದ್ದು ಹೇಗೆ?
ಪ್ಯಾಷನ್​ ಶೋ ನಡೆಯುತ್ತಿರುವ ವೇಳೆ ವಂಶಿಕಾ ರ‍್ಯಾಂಪ್​ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೆಳಕಿನ ಉದ್ದೇಶಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಕಂಬ ಮಾಡೆಲ್​ ಹಾಗೂ ಬಾಬಿ ರಾಜ್ ಮೇಲೆ ಬಿದ್ದಿದೆ. ಇದರಿಂದಾಗಿ ವಂಶಿಕಾ ಸ್ಥಳದಲ್ಲೇ ಮೃತಪಟ್ಟರೆ, ಬಾಬಿ ಭೀಕರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ನೋಯ್ಡಾದ ಹೆಚ್ಚುವರಿ ಡಿಸಿಪಿ, ಪ್ಯಾಷನ್​ ಶೋ ಆಯೋಜಕರು ಹಾಗೂ ಲೈಟಿಂಗ್​ ವಿಭಾಗದಲ್ಲಿ ತೊಡಗಿದ್ದ ನಾಲ್ಕು ಜನರನ್ನು ಬಂಧಿಸಿದ್ದು, ಅನುಮತಿಯನ್ನು ಪಡೆಯದೇ ಈ ಪ್ಯಾಷನ್​ ಶೋ ನಡೆಸಲಾಗಿತ್ತು ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net