ಎಸ್‌ಎಸ್‌ಪಿಯುನಲ್ಲಿ ಯುವ ವಿದ್ಯಾರ್ಥಿಗಳಿಗೆ ಮಾದರಿ ಚುನಾವಣೆ

1 Min Read
vote
ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ನಡೆದ ಮಾದರಿ ಚುನಾವಣೆಯಲ್ಲಿ ಮತದಾರರು ಬೆರಳಿಗೆ ಶಾಯಿ ಗುರುತು ಹಾಕಿಸಿಕೊಂಡು ಗೌಪ್ಯವಾಗಿ ತಮ್ಮ ಹಕ್ಕು ಚಲಾಯಿಸಿದರು.

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಎಸ್‌ಎಸ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆಗಾಗಿ ವ್ಯವಸ್ಥಿತ ಮಾದರಿ ಮತದಾನ ಶನಿವಾರ ನೆರವೇರಿತು.

ಪ್ರಾಚಾರ್ಯ ಸೋಮಶೇಖರ ನಾಯಕ್ ಮುಖ್ಯ ಚುನಾವಣಾಧಿಕಾರಿಯಾಗಿದ್ದರು. ಉಪನ್ಯಾಸಕ ಜಯಪ್ರಕಾಶ್ ಆರ್. ಚುನಾವಣಾಧಿಕಾರಿಯಾಗಿ, ಗಿರೀಶ್ ಅವರನ್ನು ಚುನಾವಣಾ ವೀಕ್ಷಕರಾಗಿ ನೇಮಿಸಲಾಯಿತು. ಉಳಿದಂತೆ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

5 ಸ್ಥಾನ 20 ಅಭ್ಯರ್ಥಿಗಳು

ಎಲ್ಲ ವಿದ್ಯಾರ್ಥಿಗಳಿಗೂ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಮುಂತಾದ ಹುದ್ದೆಗಳಿಗೆ ಸ್ಪರ್ಧಾಳುಗಳು ನಾಮಪತ್ರ ಸಲ್ಲಿಸಿದರು. ನಾಮಪತ್ರ ಹಿಂತೆಗೆದುಕೊಳ್ಳುವಿಕೆ ಹಾಗೂ ಪರಿಶೀಲನೆ ನಡೆದು ಅಂತಿಮವಾಗಿ ಒಟ್ಟು 5 ಸ್ಥಾನಕ್ಕೆ 20 ಸ್ಪರ್ಧಿಗಳು ಕಣದಲ್ಲಿ ಉಳಿದರು.

ಮತಪತ್ರ: ಮತಪತ್ರದಲ್ಲಿ ಅಭ್ಯರ್ಥಿಗಳು ಮೊದಲೇ ಸೂಚಿಸಿದ ಚಿಹ್ನೆ ಮತ್ತು ಅವರ ಹೆಸರನ್ನು ನಮೂದಿಸಲಾಗಿತ್ತು. ಚುನಾವಣೆಗೆ ಸ್ಪರ್ಧಿಸಿದ್ದ 20 ಅಭ್ಯರ್ಥಿಗಳಿಗೆ ಬೈಕು, ಕಾರು, ಮರ, ಟ್ರೋಫಿ ಇತ್ಯಾದಿ ಚಿಹ್ನೆಗಳನ್ನು ನೀಡಲಾಗಿತ್ತು.

ಅಸಿಂಧು ಮತವೂ ಇತ್ತು

828 ಮತದಾರರಲ್ಲಿ 805 ಮಂದಿ ಮತ ಚಲಾಯಿಸಿ ಶೇ. 97.22 ಮತದಾನವಾಯಿತು. ಇದರಲ್ಲಿ 13 ಮತಗಳು ಅಸಿಂಧುವಾಗಿದ್ದು ತಿರಸ್ಕೃತವಾಯಿತು. 26 ಮತಗಳು ನೋಟವಾಗಿತ್ತು. ಇಲ್ಲಿ ನೋಟಕ್ಕೆ ಅವಕಾಶ ಇಲ್ಲದಿದ್ದರೂ ಕೆಲ ವಿದ್ಯಾರ್ಥಿಗಳು ಕೆಲವು ಸ್ಥಾನಕ್ಕೆ ಮತ ಹಾಕದೆ ಖಾಲಿ ಬಿಟ್ಟಿದ್ದರು. ಇದನ್ನು ನೋಟಾ ಮತವೆಂದು ಉಲ್ಲೇಖಿಸಲಾಯಿತು. ಅಧ್ಯಕ್ಷರಾಗಿ 411 ಮತ ಪಡೆದ ಗಗನ್ ಡಿ.ಕೆ ಆಯ್ಕೆಯಾದರೆ, 199 ಮತ ಪಡೆದ ಜನನಿ(ಉಪಾಧ್ಯಕ್ಷೆ), 363 ಮತ ಪಡೆದ ಭವಿತ್(ಕಾರ್ಯದರ್ಶಿ), 438 ಮತ ಪಡೆದ ಹಿತೇಶ್ ಎಚ್.ಎಸ್(ಕ್ರೀಡಾ ಜತೆ ಕಾರ್ಯದರ್ಶಿ), 259 ಮತ ಪಡೆದ ಪೃಥ್ವಿನ್ ಎ.ಕೆ(ಸಾಂಸ್ಕೃತಿಕ ಜತೆ ಕಾರ್ಯದರ್ಶಿ) ಆಯ್ಕೆಯಾದರು.

See also  ಜಿಮ್‌ಗೆ ಜೈ ಭೀಮ್ ಹೆಸರು
Share This Article